
ಮ್ಯಾಡ್ರಿಡ್: ಸ್ಪೇನ್ ನಲ್ಲಿ ಸತತ ಮೂರನೇ ದಿನವೂ ಕರೋನ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡುಬಂದಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಈ ಸಾಂಕ್ರಾಮಿಕ ರೋಗದಿಂದ 674 ಜನರು ಭಾನುವಾರ ಸಾವನ್ನಪ್ಪಿದ್ದಾರೆ. ಕಳೆದ ಹತ್ತು ದಿನಗಳಲ್ಲಿ ದಾಖಲಾದ ಅತಿ ಕಡಿಮೆ ಸಂಖ್ಯೆ ಇದಾಗಿದೆ ಎಂದು ಸ್ಪ್ಯಾನಿಷ್ ಆರೋಗ್ಯ ಸಚಿವಾಲಯ ತಿಳಿಸಿದೆ. ಸ್ಪೇನ್‌ನಲ್ಲಿ ಕರೋನಾ ರೋಗ ಹರಡಿದಾಗಿನಿಂದ ಇದುವರೆಗೆ 12,418 ಸಾವುಗಳು ಸಂಭವಿಸಿವೆ.
ಸ್ಪೇನ್‌ನಲ್ಲಿ ವರದಿಯಾದ ಒಟ್ಟು ಕರೋನಾ ವೈರಸ್ ಪ್ರಕರಣಗಳ ಸಂಖ್ಯೆ 126,168 ಕ್ಕೆ ಏರಿದೆ, ಇದು ಇಟಲಿಗಿಂತಲೂ (124,632) ಹೆಚ್ಚು ಪ್ರಕರಣಗಳಾಗಿವೆ. ಸ್ಪೇನ್ ಈಗ ಕರೋನಾ ಸೋಂಕಿನಿಂದ ಅತಿ ಹೆಚ್ಚು ಜನ ಸೋಂಕಿತರಾದ ಯುರೋಪಿನ ಮೊದಲ ರಾಷ್ಟ್ರವಾಗಿದೆ. ಅಂಕಿಅಂಶಗಳ ಪ್ರಕಾರ ಜಗತ್ತಿನ ಸ್ಪೇನ್ ಮೊದಲ ಸ್ಥಾನದಲ್ಲಿದೆ. ಜಗತ್ತಿನ ಒಟ್ಟು ಪ್ರಕರಣಗಳಲ್ಲಿ ಅಮೇರಿಕಾದ ಬಳಿಕ ಸ್ಪೇನ್ ಎರಡನೆಯ ಸ್ಥಾನದಲ್ಲಿದೆ. ವಾಷಿಂಗ್ಟನ್ನಿನ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್ಎಸ್ಇ) ಪ್ರಕಾರ ಪ್ರಸ್ತುತ 312,076 ಪ್ರಕರಣಗಳನ್ನ ಹೊಂದಿರುವ ಅಮೆರಿಕ ಮೊದಲ ಸ್ಥಾನದಲ್ಲಿದೆ.
ಕೊರೋನಾದಿಂದ ಅತಿ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದು ಇಟಲಿಯಲ್ಲಿ
ಸಿಎಸ್ಎಸ್ಇ updates ನಿಂದ ತಿಳಿದುಬಂದಿರುವ ಪ್ರಕಾರ ಕರೋನಾ ವೈರಸ್ ನಿಂದ ವಿಶ್ವದಲ್ಲೇ ಅತಿ ಹೆಚ್ಚು ಸಾವುಗಳು ಇಟಲಿಯಲ್ಲಿ ಒಟ್ಟು 15,362 ಆಗಿವೆ. ಇದಾದ ಬಳಿಕ, ಸ್ಪೇನ್ ನಲ್ಲಿ 11,947 ಜನ ಸಾವನ್ನಪ್ಪಿದ್ದು ಇದು ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಸುದ್ದಿ ಸಂಸ್ಥೆ ಸಿನ್ಹುವಾ ವರದಿಯ ಪ್ರಕಾರ, ಈ ಅಂಕಿಅಂಶಗಳ ಮಧ್ಯೆ ಈಗ ಈ ವೈರಸ್ ವಿರುದ್ಧದ ಹೋರಾಟದಲ್ಲಿ ಯುರೋಪಿನಲ್ಲಿ ಸಣ್ಣ ಆಶಾಕಿರಣವೊಂದು ಗೋಚರಿಸುತ್ತಿದೆ. ಶುಕ್ರವಾರ ಮತ್ತು ಶನಿವಾರ ಸ್ಪೇನ್‌ನಲ್ಲಿ 809 ಸಾವುಗಳು ಸಂಭವಿಸಿದ್ದವು. ಇದು ಗುರುವಾರ ಮತ್ತು ಶುಕ್ರವಾರದ ನಡುವೆ ಸಂಭವಿಸಿದ 932 ಸಾವುಗಳಿಗಿಂತ ಕಡಿಮೆಯಾಗಿದೆ.
ಶನಿವಾರ 7,026 ಹೊಸ ಪ್ರಕರಣಗಳು ದಾಖಲಾಗಿದ್ದು, ಇದು ಶುಕ್ರವಾರ ವರದಿಯಾದ 7,472 ಪ್ರಕರಣಗಳಿಗಿಂತ ಕೊಂಚ ಕಡಿಮೆಯಾಗಿದೆ. ಇಟಲಿಯಲ್ಲಿ ಐಸಿಯುಗೆ ದಾಖಲಾದ ರೋಗಿಗಳ ಸಂಖ್ಯೆ ಮೊದಲ ಬಾರಿಗೆ ಕಡಿಮೆಯಾಗಿದೆ. “ಐಸಿಯು ರೋಗಿಗಳ ಸಂಖ್ಯೆ 74 ರಷ್ಟು ಕಡಿಮೆಯಾಗಿದೆ” ಎಂದು ನಾಗರಿಕ ಸಂರಕ್ಷಣಾ ಇಲಾಖೆಯ ಮುಖ್ಯಸ್ಥ ಏಂಜೆಲೊ ಬೊರೆಲ್ಲಿ ಶನಿವಾರ ತಿಳಿಸಿದ್ದಾರೆ.
ಶನಿವಾರ 681 ಸಾವುಗಳು ಸಂಭವಿಸಿದ್ದು ಇದು ಮೊದಲಿಗಿಂತಲೂ ಕಡಿಮೆಯಾಗಿದೆ. ಮಾರ್ಚ್ 27 ರಂದು 969 ಸಾವುಗಳು ಸಂಭವಿಸಿದಾಗಿನಿಂದ ದೈನಂದಿನ ಸಾವಿನ ಪ್ರಮಾಣವು ಸ್ಥಿರವಾಗಿ ಕಡಿಮೆಯಾಗುತ್ತಿದೆ ಎಂದು ಬೊರೆಲ್ಲಿ ತಿಳಿಸಿದ್ದಾರೆ. ಫ್ರಾನ್ಸ್‌ನ ನರ್ಸಿಂಗ್ ಹೋಂಗಳಲ್ಲಿ ಲೈಫ್ ಸಪೋರ್ಟ್ ಸಿಸ್ಟಂ ವ್ಯವಸ್ಥೆಗಳ ಅವಶ್ಯಕತೆ ಕೂಡ ಕಡಿಮೆಯಾಗುತ್ತಿದೆ. ಅವುಗಳ ಶೇಕಡಾವಾರು ಶುಕ್ರವಾರ 4 ಪ್ರತಿಶತದಿಂದ ಶನಿವಾರ 2.6 ಕ್ಕೆ ಇಳಿದಿದೆ. ಪೋರ್ಚುಗಲ್‌ನಲ್ಲಿ ಕರೋನಾ ಪ್ರಕರಣಗಳು ಶನಿವಾರ 10,000 ಗಡಿ ದಾಟಿ 10,524 ಕ್ಕೆ ತಲುಪಿದೆ. ಆದರೆ ದೇಶದ ಸಾರ್ವಜನಿಕ ಆರೋಗ್ಯ ತಜ್ಞರ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ.
Comments are closed.