ಅಂತರಾಷ್ಟ್ರೀಯ

ಮುಂದಿನ 2 ವಾರದಲ್ಲಿ ಸಾವಿನ ಸಂಖ್ಯೆ ದುಪ್ಪಟ್ಟು: ಟ್ರಂಪ್

Pinterest LinkedIn Tumblr


ವಾಷಿಂಗ್ಟನ್: ಅಮೆರಿಕದಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಮಾರಕ ವೈರಾಣು ಇದುವರೆಗೂ 2,484 ಅಮೆರಿಕನ್ ನಾಗರಿಕರನ್ನು ಬಲಿ ಪಡೆದಿದೆ.

ಕೊರೊನಾ ವೈರಸ್ ಹರಡುವಿಕೆಯನ್ನಜ ತಡೆಗಟ್ಟಲು ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು ಅನ್ವೇಷಿಸುತ್ತಿರುವ ಟ್ರಂಪ್ ಸರ್ಕಾರ, ಸೋಂಕಿತರ ಸಂಖ್ಯೆ ತಗ್ಗಿಸಲು ಹಗಲಿರುಳೂ ದುಡಿಯುತ್ತಿದೆ.

ಆದರೆ ಕೊರೊನಾ ವೈರಸ್ ಅಮೆರಿಕದಿಂದ ಇಷ್ಟು ಬೇಗ ಕಾಲ್ಕಿಳುವುದಿಲ್ಲ ಎಂಬುದನ್ನು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಒಪ್ಪಿಕೊಂಡಿದ್ದು, ಮುಂದಿನ ಎರಡು ವಾರದಲ್ಲಿ ದೇಶದಲ್ಲಿ ಸಾವಿನ ಸಂಖ್ಯೆ ದುಪ್ಪಟ್ಟಾಗಲಿದೆ ಎಂದು ಎಚ್ಚರಿಸಿದ್ದಾರೆ.

ಈ ಕುರಿತು ವೈಟ್‌ಹೌಸ್‌ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಟ್ರಂಪ್, ಮುಂದಿನ ಎರಡು ವಾರಗಳಲ್ಲಿ ಅಮೆರಿಕದಲ್ಲಿ ಸಾವಿನ ಸರಣಿ ವೇಗ ಪಡೆದುಕೊಳ್ಳಲಿದೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಏ.30ರವೆರೆಗೂ ಸೋಶಿಯಲ್ ಡಿಸ್ಟನ್ಸಿಂಗ್ ಆದೇಶವನ್ನು ವಿಸ್ತರಿಸುತ್ತಿರುವುದಾಗಿ ಸ್ಪಷ್ಟಪಡಿಸಿದ ಟ್ರಂಪ್, ಯಾವುದೇ ಕಾರಣಕ್ಕೂ ಜನ ಮನೆಯಿಂದ ಹೊರ ಬರದಂತೆ ಮನವಿ ಮಾಡಿದ್ದಾರೆ.

ಕೊರೊನಾ ವೈರಸ್ ಅಮೆರಿಕವನ್ನು ಮತ್ತಷ್ಟು ದಿನಗಳ ಕಾಲ ಕಾಡಲಿದ್ದು, ಈ ವೈರಾಣು ವಿರುದ್ಧದ ಹೋರಾಟದ ವೇಗವನ್ನು ನಾವು ಹೆಚ್ಚಿಸಬೇಕಿದೆ ಎಂದು ಟ್ರಂಪ್ ನುಡಿದರು.

ಸೋಶೀಯಲ್ ಡಿಸ್ಟನ್ಸಿಂಗ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿರುವ ಟ್ರಂಪ್, ಎಲ್ಲರೂ ಒಂದಾಗಿ ಮಾರಕ ಕೊರೊನಾ ವೈರಸ್ ವಿರುದ್ಧ ಹೋರಾಡೋಣ ಎಂದು ಕರೆ ನೀಡಿದರು.

Comments are closed.