ಅಂತರಾಷ್ಟ್ರೀಯ

ಈಕೆ ವಿಶ್ವದಲ್ಲೇ ಪ್ರಥಮ ಬಾರಿಗೆ ಕೊರೊನಾ ವೈರಸ್ ಪತ್ತೆಯಾದ ಮಹಿಳೆ

Pinterest LinkedIn Tumblr


ಬಿಜಿಂಗ್: ಮಾರಕ ಕೊರೊನಾ ವೈರಸ್ ಇಡೀ ವಿಶ್ವದಲ್ಲೇ ತನ್ನ ಮರಣ ಮೃದಂಗವನ್ನು ಮುಂದುವರೆಸಿದೆ. ಇಡೀ ಜಗತ್ತನ್ನೇ ಆವರಿಸಿಕೊಂಡಿರುವ ಕೊರೊನಾ ವೈರಾಣು, ಜನರನ್ನು ಬಲಿ ಪಡದೇ ಸಿದ್ಧ ಎಂದು ಹಠ ತೊಟ್ಟಂತೆ ಪಸರಿಸುತ್ತಿದೆ.

ಈ ಮಧ್ಯೆ ಕೊರೊನಾ ವೈರಸ್ ಇಡೀ ವಿಶ್ವದಲ್ಲೇ ಮೊದಲ ಬಾರೊಗೆ ಪತ್ತೆಯಾಗಿದ್ದ ಮಹಿಳೆಯನ್ನು ಪತ್ತೆ ಹಚ್ಚಲಾಗಿದ್ದು, ಆಕೆ ಸೂಕ್ತ ಚಿಕಿತ್ಸೆ ಬಳಿಕ ಆರೋಗ್ಯವಂತಳಾಗಿ ಮತ್ತೆ ಬದುಕಿನ ಬಂಡಿ ಸಾಗಿಸುತ್ತಿದ್ದಾಳೆ.

ಚೀನಾದ ವುಹಾನ್ ಪ್ರಾಂತ್ಯದ ವೈ ಗುಯಿಕ್ಸಿಯಾನ್ ಎಂಬ 57 ವರ್ಷದ ಸಮುದ್ರ ಆಹಾರ ಸಿಗಡಿ ಮಾರಾಟಗಾರ್ತಿಯೇ ಮೊದಲ ಕೊರೊನಾ ರೋಗಿ ಎಂಬುದು ದೃಢಪಟ್ಟಿದೆ. ವುಹಾನ್‌ನಲ್ಲಿ ಸಮುದ್ರ ಸಿಗಡಿ ಮಾರಾಟ ಮಾಡುತ್ತಿದ್ದ ಈಕೆ, ಜ್ವರ ಎಂದು ಆಸ್ಪತ್ರೆಗೆ ಹೋದಾಗ ಆಕೆಗೆ ಕೊರೊನಾ ಇರುವುದು ದೃಢಪಟ್ಟಿತ್ತು.

ವೈ ಗುಯಿಕ್ಸಿಯಾನ್ ಕೊರೋನಾ ರೋಗಕ್ಕೆ ತುತ್ತಾದ ಮೊದಲ 27 ಜನರ ಪೈಕಿ ಒಬ್ಬಳು. ಇವರ ಪೈಕಿ ಕೊರೊನಾ ಮೊದಲು ಪತ್ತೆಯಾಗಿದ್ದು ಈಕೆಯಲ್ಲಿಯೇ ಎಂಬುದು ಇದೀಗ ದೃಢಫಟ್ಟಿದೆ. ಇದೇ ಕಾರಣಕ್ಕೆ ಈಕೆಯನ್ನು ‘ಪೇಷಂಟ್ ಝೀರೋ’ ಎಂದು ಹೆಸರಿಡಲಾಗಿದೆ.

ವೈ ಗುಯಿಕ್ಸಿಯಾನ್ ಗೆ ಕಳೆದ ವರ್ಷ ಡಿಸೆಂಬರ್ 10ರಂದು ಮೊದಲ ಬಾರಿ ಸಾಮಾನ್ಯ ಜ್ವರದ ಲಕ್ಷಣ ಕಾಣಿಸಿದ್ದವು. ಸ್ಥಳಿಯ ವೈದ್ಯರನ್ನು ಸಂಪರ್ಕಿಸಿ ಮಾತ್ರೆ ತೆಗೆದುಕೊಂಡಿದ್ದ ವೈ, ಜ್ವರ ಕಡಿಮೆಯಾಗದ ಕಾರಣ ವುಹಾನ್‌ನ ಯೂನಿಯನ್ ಆಸ್ಪತ್ರೆಗೆ ದಾಖಲಾಗಿದ್ದಳು.

ಅಲ್ಲಿ ವೈಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿತ್ತು. ಕೂಡಲೇ ಆಕೆಯನ್ನು ಕ್ವಾರಂಟೈನ್‌ಗೆ ಗುರಿ ಮಾಡಿದ ವೈದ್ಯರು, ಸೂಕ್ತ ಚಿಕಿತ್ಸೆ ನೀಡಿ ಕೇವಲ ಒಂದು ತಿಂಗಳ ಅವಧಿಯಲ್ಲಿ ಗುಣಮುಖಳನ್ನಾಗಿ ಮಾಡಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವೈ ಗಯಿಕ್ಸಿಯಾನ್, ಚೀನಾ ಸರ್ಕಾರ ಆರಂಭಿಕ ಹಂತದಲ್ಲೇ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದರೆ ಈ ಮಾರಕ ವೈರಾಣು ಇಡೀ ವಿಶ್ವಕ್ಕೆ ವ್ಯಾಪಿಸುವುದನ್ನು ತಡೆಗಟ್ಟಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾಳೆ.

Comments are closed.