ಮನೋರಂಜನೆ

ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ನಟಿ ಐಂದ್ರಿತಾ ರೇ ವಿಡಿಯೋ

Pinterest LinkedIn Tumblr


ಹೌದು ನಟಿ ಐಂದ್ರಿತಾ ರೇ ಅವರ ಒಂದು ವಿಡಿಯೋ, ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ, ಜೊತೆಗೆ ಆ ವಿಡಿಯೋ ನೋಡಿದ ಜನಸಾಮಾನ್ಯರು ಹಾಗೂ ನಟಿ ಐಂದ್ರಿತಾ ರೇ ಅವರ ಅಭಿಮಾನಿಗಳಿಗೆ, ಅವರ ಈ ಕೆಲಸ ನೋಡಿದ ತುಂಬಾ ಖುಶಿ ಆಗಿದೆ ಅಂತೆ, ಅಷ್ಟಕ್ಕೂ ಆ ವಿಡಿಯೋದಲ್ಲಿ ನಟಿ ಐಂದ್ರಿತಾ ರೇ ಅವರು ಯಾವ ಕೆಲಸ ಮಾಡಿದ್ದಾರೆ ಗೊತ್ತಾ. ಪೂರ್ತಿ ಲೇಖನ ಓದಿ ಅವರ ಕೆಲಸಕ್ಕೆ ನೀವು ಕೂಡ ಮೆಚ್ಚುಗೆ ತಿಳಿಸಲೇಬೇಕು.

ಈ ಕೊರೊನ ವೈರಸ್ ಕಾಯಿಲೆ ಮಧ್ಯೆ ಆಲ್ಮೋಸ್ಟ್ ಕೆಲವು ದೇಶಗಳು ತತ್ತರಿಸಿ ಹೋಗಿವೆ, ಅದರ ಜೊತೆ ನಮ್ಮ ದೇಶಕ್ಕೂ ಬಂದಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಪ್ರಕಾರ ಇಂಡಿಯಾವನ್ನು 21 ದಿನ ಲಾಕ್ ಮಾಡಲಾಗಿದೆ, ಇದರ ಜೊತೆ ಏನೆಲ್ಲಾ ಆದೇಶಗಳನ್ನು ಸರಕಾರ ಬಿಡುಗಡೆ ಮಾಡಿ, ಎಲ್ಲರೂ ಮನೆಯಲ್ಲೇ ಇದ್ದು, ಈ ರೋಗದ ವಿರುದ್ಧ ಹೋರಾಟ ಮಾಡಲು ಸಹಕರಿಸಿ ಎಂದು ಹೇಳಿದರು, ಸ್ವಲ್ಪ ಜನಗಳು ಈ ಮಾತನ್ನು ಸೀರಿಯಸ್ ಆಗಿ ತೆಗೆದುಕೊಳ್ಳದೆ, ತಮಗೆ ಹೇಗೆ ಬೇಕೋ ಹಾಗಿದ್ದರೆ, ಅದನ್ನು ಬಿಟ್ಟು ದಯವಿಟ್ಟು ಮನೆಯಲ್ಲೇ ಇದ್ದು ಈ ರೋಗವನ್ನು ಓಡಿಸಲು ಕೈ ಜೋಡಿಸಿ ಎಂದು ಹೇಳಲಾಗಿದೆ..

ಇದರ ನಡುವೆ ನಟಿ ಐಂದ್ರಿತಾ ರೇ ಅವರು ಒಂದು ಕೆಲಸ ಮಾಡಿ ಮಾನವೀಯತೆ ಮೆರೆದಿದ್ದಾರೆ, ಹೌದು ನಟಿ ಐಂದ್ರಿತಾ ರೇ ಅವರು ಎಲ್ಲಾ ಕ್ರಮಗಳನ್ನು ಪಾಲಿಸಿ, ತಮ್ಮ ದೇಹಕ್ಕೆ ಸೇಫ್ಟಿ ಆಗಿ ಮಾಸ್ಕ್ ಹಾಕಿಕೊಂಡು, ಮನೆಯಿಂದ ಹೊರ ಬಂದು ಬೀದಿ ನಾಯಿಗಳಿಗೆ ಆಹಾರ ಕೊಟ್ಟಿದ್ದಾರೆ, ಏಕೆಂದರೆ ಜನರು ಎಲ್ಲರೂ ಮನೆಯಲ್ಲೇ ಇರುವ ಕಾರಣ, ಮಾರ್ಕೆಟ್ ಮತ್ತು ಕೆಲ ಆಹಾರ ಸ್ಥಳಗಳನ್ನು ಬಂದ್ ಆಗಿರುವ ಹಿನ್ನೆಲೆಯಲ್ಲಿ, ಬೀದಿ ನಾಯಿಗಳಿಗೆ ಆಹಾರ ಸಿಕ್ಕಿರುವದಿಲ್ಲ ಎಂದು ಅರಿತು, ಮನೆಯಿಂದ ಆಹಾರ ತೆಗೆದುಕೊಂಡು, ಕೆಲವು ರಸ್ತೆಗಳಿಗೆ ಹೋಗಿ ಬೀದಿ ಶ್ವಾನಗಳಿಗೆ ಆಹಾರ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

ಹಾಗೆ ಈ ಒಳ್ಳೆಯ ಕಾರ್ಯವನ್ನು ಮಾಡಿರುವ ನಟಿ ಐಂದ್ರಿತಾ ರೇ ಅವರು, ಇದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿ ಬಿಟ್ಟಿದ್ದು, ಸದ್ಯ ವಿಡಿಯೋ ನೋಡಿದ ತುಂಬಾ ಜನರು, ನಟಿಗೆ ಕೃತಘ್ನತೆ ತಿಳಿಸಿ ಧನ್ಯವಾದಗಳು ಹೇಳಿದ್ದಾರೆ ಎಂಬ ಮಾಹಿತಿ ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ನಟಿ ಐಂದ್ರಿತಾ ರೇ ಅವರ ಈ ಕಾರ್ಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಾಮೆಂಟ್ ಮಾಡಿ, ಹಾಗೆ ಈ ರೋಗದ ಬಗ್ಗೆ ಜನರಿಗೆ ಮನೆಯಲ್ಲೇ ಇರಿ ಎಂದು ಹೇಳುತ್ತಾ, ಶೇರ್ ಮಾಡಿ ಜಾಗೃತಿ ಮೂಡಿಸುವ ಕೆಲಸ ಮಾಡಿ ಧನ್ಯವಾದಗಳು..

Comments are closed.