ಮೀರತ್: ಕೊರೊನಾ ವೈರಸ್ ವ್ಯಾಪಿಸುವುದನ್ನು ನಿಯಂತ್ರಿಸಲು ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳು ಲಾಕ್‌ಡೌನ್, ಕ್ವಾಂಟೈನರ್ ಎಂಬೆಲ್ಲ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿವೆ. ಈ ಸಂದರ್ಭದಲ್ಲಿ ಅಕಾಲಿಕ ಮರಣ ಸಂಭವಿಸಿದರೆ ಶವ ಸಂಸ್ಕಾರ ಕಾರ್ಯ ಅತ್ಯಂತ ಕಷ್ಟಕರವೆನಿಸಿದೆ. ಇದಕ್ಕೆ ಪೂರಕವಾಗಿ ಯಾವ ಸರಕಾರವು ಇದುವರೆಗೆ ಸೂಕ್ತ ಕ್ರಮ ತೆಗೆದುಕೊಂಡಿಲ್ಲ.
ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಹಿಂದುವಿನ ಮೃತ ದೇಹವನ್ನು ಸಂಸ್ಕಾರಕ್ಕೆ ಹೊತ್ತೊಯ್ಯುತ್ತ ‘ರಾಮ ನಾಮ ಸತ್ಯ ಹೇ’ ಎಂಬ ಘೋಷಣೆಗಳನ್ನು ಕೂಗುತ್ತ ಸಾಗಿದ್ದು ಮುಸ್ಲಿಮರು.
ಏನಿದು ಘಟನೆ?
ಬುಲಂದ್‌ಶಹರ್‌ನ ಆನಂದ ವಿಹಾರ ಪ್ರದೇಶದ ನಿವಾಸಿ, ಕ್ಯಾನ್ಸರ್‌ನಿಂದ ಬಳಲುತ್ತಿದ್ದ 40 ವರ್ಷದ ರವಿ ಶಂಕರ್ ಎಂಬುವವರು ಶನಿವಾರ ಮಧ್ಯಾಹ್ಮ ಸಾವನ್ನಪ್ಪಿದ್ದರು. ಲಾಕ್‌ಡೌನ್‌ನಿಂದ ರವಿ ಶಂಕರ್ ಅವರ ಸಂಬಂಧಿಕರು ಯಾರಿಗೂ ಬರಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ದಫನ ಮಾಡುವುದು ಹೇಗೆ ಎಂದು ಪತ್ನಿ ಮಕ್ಕಳು ತಲೆ ಮೇಲೆ ಕೈಹೊತ್ತು ಕಳಿತಿದ್ದ ಸಂದರ್ಭ ನೆರೆಯ ಮುಸ್ಲಿಮರು ನೆರವಿಗೆ ಧಾವಿಸಿದರು.
ಶವ ಸಂಸ್ಕಾರಕ್ಕೆ ಮುಸ್ಲಿಮರು ಹಿಂದು ಘೋಷವಾಕ್ಯಗಳನ್ನು ಪಠಿಸುತ್ತ ಮೃತದೇಹವನ್ನು ಹೊತ್ತೊಯ್ಯುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಹಿಂದು ಸಂಪ್ರದಾಯದ ಪ್ರಕಾರ ಶವ ಸಂಸ್ಕಾರ ನಡೆಸಲಾಗಿದೆ.
”ಸ್ಥಳೀಯರೆಲ್ಲರೂ ಮೃತ ರವಿ ಅವರ ಕುಟುಂಬಸ್ಥರ ನೆರವಿಗೆ ಧಾವಿಸಿದರು. ಎರಡು ಸಮುದಾಯ ಮೊದಲಿನಿಂದಲೂ ಪರಸ್ಪರ ನೆರವಾಗುತ್ತ ಉತ್ತಮ ಸಂಬಂಧ ಹೊಂದಿದ್ದೇವೆ” ಎಂದು ಸ್ಥಳೀಯ ನಿವಾಸಿ ಮೊಹಮ್ಮದ್ ಜುಬೈದ್ ತಿಳಿಸಿದ್ದಾರೆ.
Comments are closed.