ಅಂತರಾಷ್ಟ್ರೀಯ

ಭೂಮಿಯತ್ತ ಗಂಟೆಗೆ 57,240 ಕಿ.ಮೀ. ವೇಗದಲ್ಲಿ ಬರುತ್ತಿರುವ ಕ್ಷುದ್ರಗ್ರಹ!

Pinterest LinkedIn Tumblr


ಭೂಮಿಯತ್ತ ಅತ್ಯಂತ ವೇಗವಾಗಿ ಧಾವಿಸುತ್ತಿರುವ ಬೃಹತ್‌ ಗಾತ್ರದ ಕ್ಷುದ್ರಗ್ರಹವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಪತ್ತೆ ಮಾಡಿದೆ. ಈ ಹೆಬ್ಬಂಡೆಯಂತ ಕ್ಷುದ್ರಗ್ರಹವು ವಿಶ್ವದಲ್ಲೇ ಮನುಷ್ಯ ನಿರ್ಮಿತ ಆಕೃತಿಗಿಂತ ದೊಡ್ಡ ಗಾತ್ರದ್ದಾಗಿದೆ. ಅಂದರೆ ಚೀನಾದ ಮಹಾಗೋಡೆಗಿಂತ ದೊಡ್ಡ ಗಾತ್ರದ್ದಾಗಿದೆ.

ಗಂಟೆಗೆ 57,240 ಕಿಮೀ. ವೇಗದಲ್ಲಿ ಧಾವಿಸಿ ಬರುತ್ತಿರುವ ಕ್ಷುದ್ರಗ್ರಹ ಫೆಬ್ರವರಿ 15ರಂದು ಭೂಮಿಯನ್ನು ಸಮೀಪಿಸಲಿದೆ ಎಂದು ನಾಸಾ ಮಾಹಿತಿ ನೀಡಿದೆ ಎಂದು ಎಕ್ಸ್‌ಪ್ರೆಸ್‌ ಯುಕೆ ವರದಿ ಮಾಡಿದೆ.

ನಾಸಾದ ಕ್ಷುದ್ರಗ್ರಹ ಪತ್ತೆ ಹಚ್ಚುವ ಉಪಗ್ರಹದ ಕಣ್ಣಿಗೆ ಭೂಕಕ್ಷೆಯ ಸಮೀಪದಲ್ಲಿ (ನಿಯರ್‌ ಅರ್ಥ್‌ ಆಬ್ಜೆಕ್ಟ್‌, ಎನ್‌ಇಒ) ಬೃಹತ್‌ ಗಾತ್ರದ ಕ್ಷುತ್ರಗ್ರಹ ಧಾವಿಸಿ ಬರುತ್ತಿರುವುದನ್ನು ಪತ್ತೆ ಮಾಡಿದೆ. ಈ ಕ್ಷುದ್ರಗ್ರಹಕ್ಕೆ 2002 PZ39 ಎಂದು ಹೆಸರಿಸಲಾಗಿದೆ.

66 ದಶಲಕ್ಷ ವರ್ಷಗಳ ಹಿಂದೆ ಡೈನೋಸರ್‌ಗಳ ಅಳಿವಿಗೆ ಕ್ಷುದ್ರಗ್ರಹ ಕಾರಣವಾಗಿತ್ತು ಎಂದು ನಂಬಲಾಗಿದೆ. ಒಂದು ವೇಳೆ ಇದೀಗ ಭೂಮಿಯತ್ತ ಸಮೀಪಿಸುತ್ತಿರುವ ಕ್ಷುದ್ರಗ್ರಹ ಅಪ್ಪಳಿಸಿದರೆ, 60 ಮೆಗಾಟನ್‌ನಷ್ಟು ಟಿಎನ್‌ಟಿ (ಟ್ರೈನೈಟ್ರೊಟಾಲ್ವಿನ್‌) ಸ್ಫೋಟಕ್ಕೆ ಸಮನಾಗಿರುತ್ತದೆ. ಇದರಿಂದ ನ್ಯೂಕ್ಲಿಯರ್‌ ವಿಂಟರ್‌ ಆರಂಭಗೊಂಡು ಜೀವಿಗಳು ಅಳಿವು ಸಂಭವಿಸಬಹುದು ಎನ್ನಲಾಗಿದೆ.

PZ39 ಇದೊಂದು ಅಪೋಲೊ ಕ್ಷುದ್ರಗ್ರಹವಾಗಿದ್ದು, ಭೂಮಿ ಸೂರ್ಯನ ಸುತ್ತ ಸುತ್ತುವ ಸಂದರ್ಭದಲ್ಲಿ ಸಮೀಪವಾಗಿ ಹಾದು ಹೋಗುತ್ತದೆ. ಹಾಗಾಗಿ ಇದನ್ನು ಭೂಮಿಯನ್ನು ಹಾದು ಹೋಗುವ ಮಾರ್ಗ ಎಂದು ಗುರುತಿಸಲಾಗಿದೆ. ಭೂಮಿ ಮೇಲೆ ಅಪ್ಪಳಿಸುವ ಅಥವಾ ಡಿಕ್ಕಿಯಾಗುವ ಸಂಭವ ತುಂಬಾ ಕಡಿಮೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ.

Comments are closed.