ಅಂತರಾಷ್ಟ್ರೀಯ

ಕೊರೊನಾ ವೈರಸ್ ಗೆ ಚೀನಾದಲ್ಲಿ ಬುಧವಾರ ಒಂದೇ ದಿನ 242 ಮಂದಿ ಸಾವು

Pinterest LinkedIn Tumblr


ಚೀನಾ: ಕೊರೋನ ವೈರಸ್ ಕೇಂದ್ರಬಿಂದುವಾಗಿರುವ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಬುಧವಾರ ಸಾವಿನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಸಾಂಕ್ರಾಮಿಕ ರೋಗವನ್ನು ನಿಯಂತ್ರಣಕ್ಕೆ ತರುವ ಮೊದಲು ಇನ್ನಷ್ಟು ಹದಗೆಡಬಹುದು ಜಾಗತಿಕ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಬುಧವಾರ ಒಂದೇ ದಿನ ಹುಬೈ ಪ್ರಾಂತ್ಯದಲ್ಲಿ ಕೊರೋನಾ ತನ್ನ ಮರಣ ಮೃದಂಗಕ್ಕೆ 242 ಜನರನ್ನು ಬಲಿ ತೆಗೆದುಕೊಂಡಿದೆ. ಆ ಮೂಲಕ ಮೊದಲ ಬಾರಿಗೆ ಒಂದೇ ದಿನದಲ್ಲಿ ಸಾವಿನ ಪ್ರಮಾಣ ದಾಖಲೆಯ ಏರಿಕೆಯಾಗಿದೆ. ಈ ಹಿಂದೆ 103 ಜನರು ಒಂದು ದಿನ ಸಾವನ್ನಪ್ಪಿದ್ದು ಕೊರೊನಾ ಭೀಕರತೆಗೆ ಸಾಕ್ಷಿಯಾಗಿತ್ತು. ಚೀನಾದಲ್ಲಿ ಒಟ್ಟಾರೆ ವೈರಾಣುವಿಗೆ ಬಲಿಯಾದವರ ಪ್ರಮಾಣ 1,310ಕ್ಕೆ ಏರಿದೆ.

ಚೀನಾ ವೈಧ್ಯಾಧೀಕಾರಿಗಳು ಸಾವಿನ ಪ್ರಮಾಣ ಎರಡು ವಾರಗಳಲ್ಲಿ ಗಣನೀಯವಾಗಿ ಇಳಿಕೆಯಾಗಿದೆ ಎಂದ ಬೆನ್ನಲ್ಲೆ ಬುಧವಾರ ಏಕಾಏಕಿ 242 ಜನರು ಮೃತರಾಗಿದ್ದಾರೆ. ಈ ಮಾರಾಣಾಂತಿಕ ವೈರಸ್ ಏಪ್ರಿಲ್ ತಿಂಗಳ ವೇಳೆಗೆ ಕೊನೆಗೊಳ್ಳುತ್ತದೆ ಎಂದು ಬೀಜಿಂಗ್ ನ ಹಿರಿಯ ವೈದ್ಯಕೀಯ ಸಲಹೆಗಾರರೊಬ್ಬರು ತಿಳಿಸಿದ್ದಾರೆಂದು ವರದಿಯಾಗಿದೆ.

ಇದರ ನಡುವೆ ಚೀನಾದಲ್ಲಿ 2,015 ಜನರಿಗೆ ಹೊಸದಾಗಿ ಸೋಂಕು ತಗುಲಿರುವುದು ಧೃಢಪಟ್ಟಿದೆ. ಹುಬೈ ಪ್ರಾಂತ್ಯದ 14,840 ಜನರಿಗೆ ಬುಧವಾರ ಒಂದೇ ದಿನ ವೈರಾಣು ತಗುಲಿದೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.

Comments are closed.