ರಾಷ್ಟ್ರೀಯ

ಈ ರೀತಿ ಲೈಂಗಿಕ ಕ್ರಿಯೆ ನಡೆಸಿದರೆ ಗಂಡು ಮಗುವಾಗುತ್ತದೆ

Pinterest LinkedIn Tumblr


ಅಹ್ಮದ್ ನಗರ್: ಮಹಾರಾಷ್ಟ್ರದಲ್ಲಿ ಖ್ಯಾತರಾಗಿರುವ ಕೀರ್ತನಕಾರ ಇಂದೂರಿಕರ್ ಮಹಾರಾಜ್, ವಿವಾದಾತ್ಮಕ ಹೇಳಿಕೆಯೊಂದನ್ನು ನೀಡುವ ಮೂಲಕ ಚರ್ಚೆ ಹುಟ್ಟು ಹಾಕಿದ್ದಾರೆ. ಹೌದು, ಯಾವುದೇ ಒಂದು ಮಹಿಳೆಯ ಜೊತೆಗೆ 2,4,6,8,10, 12, 14, 16, 18, 20, 22, 24, 26, 28 ಮತ್ತು 30 ಈ ರೀತಿಯ ಸಮ ದಿನಾಂಕಗಳನ್ನು ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದರೆ ಗಂಡು ಮಗುವಿನ ಜನನವಾಗುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಮಹಾರಾಷ್ಟ್ರದ ಅಹ್ಮದ್ ನಗರ್ ಜಿಲ್ಲೆಯ ಪ್ರದೇಶವೊಂದರಲ್ಲಿ ಇಂದೂರಿಕರ್ ಮಹಾರಾಜ್ ಈ ಹೇಳಿಕೆ ನೀಡಿದ್ದಾರೆ. ಅವರ, ಈ ಹೇಳಿಕೆಯ ವಿಡಿಯೋ ಇದೀಗ ಸೋಸಿಯಲ್ ಮಿಡಿಯಾಗಳಲ್ಲಿ ಭಾರಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಇಂದೂರಿಕರ್ ಮಹಾರಾಜ್ ಮಹಿಳೆಯ ಜೊತೆಗೆ ಸಮ ದಿನಗಳನ್ನು ಸಂಭೋಗ ಕ್ರಿಯೆ ನಡೆಸಿದರೆ ಗಂಡು ಮಗುವಿನ ಜನನವಾಗಲಿದೆ ಎಂದು ಹೇಳುತ್ತಿರುವುದು ನೀವು ಕೇಳಬಹುದಾಗಿದೆ. ಇದೇ ರೀತಿ ನೀವು ಬೆಸ ದಿನಗಳನ್ನು ಮಹಿಳೆಯ ಜೊತೆಗೆ ಸಂಭೋಗ ನಡೆಸಿದರೆ ನಿಮಗೆ ಹೆಣ್ಣು ಮಗುವಿನ ಜನನವಾಗಲಿದ್ದು, ನಿಮ್ಮ ಕುಟುಂಬಕ್ಕೆ ಕೆಟ್ಟ ಹೆಸರು ಬರಲಿದೆ ಎಂದೂ ಕೂಡ ಅವರು ಹೇಳಿದ್ದಾರೆ.

ಇನ್ನೊಂದೆಡೆ ಒಂದು ವೇಳೆ ನೀವು ಸರಿಯಾದ ಸಮಯಕ್ಕೆ ಸಂಭೋಗ ಕ್ರಿಯೆ ನಡೆಸದೆ ಹೋದರೆ, ನಿಮಗೆ ಹುಟ್ಟುವ ಮಗು ಅಶಕ್ತವಾಗಿರಲಿದೆ ಎಂದು ಇಂದೂರಿಕರ್ ಮಹಾರಾಜ್ ಹೇಳಿದ್ದಾರೆ. ಸುದ್ದಿ ಸಂಷೆ PTI ಜೊತೆ ಮಾತನಾಡಿರುವ ಸರ್ಕಾರಿ ಅಧಿಕಾರಿಯೋಬ್ಬರು, ಕಿರ್ತನಕಾರರಾಗಿರುವ ಇಂದೂರಿಕರ್ ಮಹಾರಾಜ್ ಅವರ ಈ ಹೇಳಿಕೆ ವಿರುದ್ಧ ಕಾನೂನು ಕ್ರಮ ಜರುಗಿಸಬಹುದಾಗಿದೆ ಎಂದಿದ್ದಾರೆ. ಇದಕ್ಕಾಗಿ ನಮ್ಮ ಬಳಿ Pre-Conception and Pre-Natal Diagnostic Technics (PCPNDT) Act ಇದೆ ಎಂದು ಅವರು ಹೇಳಿದ್ದಾರೆ.

Comments are closed.