ರಾಷ್ಟ್ರೀಯ

ಲಕ್ನೋ ಕೋರ್ಟಿನಲ್ಲಿ ಬಾಂಬ್ ಸ್ಪೋಟ: ಹಲವರಿಗೆ ಗಾಯ

Pinterest LinkedIn Tumblr

ಲಕ್ನೋ: ಇಲ್ಲಿನ ವಜೀರ್ ಗಂಜ್ ನ್ಯಾಯಾಲಯದಲ್ಲಿ ಬಾಂಬ್ ಸ್ಪೋಟವಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಸಂಕೀರ್ಣದಲ್ಲಿ ಮೂರು ಸಜೀವ ಬಾಂಬ್ ಗಳು ಪತ್ತೆಯಾಗಿದೆ.

ಘಟನೆಯಲ್ಲಿ ಓರ್ವ ಗಂಭೀರ ಗಾಯಗೊಂಡಿದ್ದು, ಮತ್ತಿಬ್ಬರು ಸಣ್ಣಪುಟ್ಟ ಗಾಯಗೊಂಡಿದ್ದಾರೆ.

ಸ್ಥಳೀಯರ ಪ್ರಕಾರ, ಎರಡು ವಕೀಲರ ಗುಂಪಿನ ನಡುವಿನ ಗಲಾಟೆಯೇ ಈ ಸ್ಪೋಟಕ್ಕೆ ಕಾರಣವಾಗಿದೆ. ನ್ಯಾಯಾಲಯದಲ್ಲಿದ್ದ ಓರ್ವ ವಕೀಲರನ್ನು ಗುರಿ ಮಾಡಿ ಈ ಸ್ಪೋಟ ಮಾಡಲಾಗಿದೆ ಎನ್ನಲಾಗಿದೆ. ಲಕ್ನೋ ಬಾರ್ ಅಸೋಸಿಯೇಶನ್ ನ ಜಂಟಿ ಕಾರ್ಯದರ್ಶಿ ಸಂಜೀವ್ ಲೋಧಿ ಅವರನ್ನು ಗುರಿ ಮಾಡಲಾಗಿದೆ ಎನ್ನಲಾಗಿದೆ.

ವಜೀರ್ ಗಂಜ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಾಂಬ್ ಇಟ್ಟಿದ್ದಾನೆ ಎನ್ನಲಾದ ಆರೋಪಿ ಜೀತು ಯಾದವ್ ಎಂಬವನನ್ನು ಸೆರೆ ಹಿಡಿಯಲಾಗಿದೆ. ದೇಶೀಯ ನಿರ್ಮಿತ ಬಾಂಬ್ ಇದಾಗಿತ್ತು ಎನ್ನಲಾಗಿದೆ.

Comments are closed.