ಅಂತರಾಷ್ಟ್ರೀಯ

ವಾಟ್ಸಪ್ ನ ಜಾಗತಿಕ ಬಳಕೆದಾರರ ಸಂಖ್ಯೆ ಎರಡು ಶತಕೋಟಿ

Pinterest LinkedIn Tumblr


ಸ್ಯಾನ್ ಫ್ರಾನ್ಸಿಸ್ಕೊ: ಸಂದೇಶ ರವಾನೆಯ ಅಪ್ಲಿಕೇಶನ್ ವಾಟ್ಸಪ್ ನ ಜಾಗತಿಕ ಬಳಕೆದಾರರ ಸಂಖ್ಯೆ ಎರಡು ಶತಕೋಟಿ ಮೈಲಿಗಲ್ಲು ತಲುಪಿದೆ ಎಂದು ಫೇಸ್‌ಬುಕ್ ಬುಧವಾರ ಹೇಳಿದೆ.

ಬಳಕೆದಾರರ ಖಾಸಗಿ ಆನ್‌ಲೈನ್ ಸಂವಹನದಲ್ಲಿ ಅವರ ತ್ವರಿತ ಸಂದೇಶ ಸೇವೆಯನ್ನು ಸಂರಕ್ಷಿಸುವ ತನ್ನ ಬದ್ಧತೆಯನ್ನು ಫೇಸ್‌ಬುಕ್ ಪ್ರತಿಪಾದಿಸಿದೆ.

ಹೊಸ ತಂತ್ರಜ್ಞಾನದಿಂದ ವಾಟ್ಸಪ್ ಮೂಲಕ ಕಳುಹಿಸುವ ಮಾಹಿತಿ ಸುರಕ್ಷಿತವಾಗಿರುತ್ತದೆ. ಕನ್ನ ಹಾಕುವವರು ಮತ್ತು ಅಪರಾಧಿಗಳಿಂದ ವಾಟ್ಸಪ್ ಸಂದೇಶವನ್ನು ರಕ್ಷಿಸಲು ಈ ತಂತ್ರಜ್ಞಾನ ಸಹಾಯ ಮಾಡಲಿದೆ ಎಂದು ಫೇಸ್ ಬುಕ್ ತಿಳಿಸಿದೆ.

ವಾಟ್ಸಪ್, 2 ಶತಕೋಟಿ ಬಳಕೆದಾರರ ಸಂಖ್ಯೆಯನ್ನು ದಾಟಿದ ವಿಶ್ವದ ಎರಡನೇ ಸಾಮಾಜಿಕ ಮಾಧ್ಯಮ ವೇದಿಕೆಯಾಗಿದೆ. ಇದರ ಮಾತೃ ಕಂಪನಿ ಫೇಸ್ ಬುಕ್, 2019 ರ ಅಂತ್ಯದ ವೇಳೆಗೆ ಪ್ರತಿ ತಿಂಗಳು 2.5 ಶತಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿದೆ.

2014 ರಲ್ಲಿ ವಾಟ್ಸಪ್ ಅನ್ನು 19 ಶತಕೋಟಿ ಡಾಲರ್‌ಗೆ ಫೇಸ್‌ಬುಕ್ ಖರೀದಿಸಿತ್ತು.

2016 ರಲ್ಲಿ 1 ಶತಕೋಟಿ ಬಳಕೆದಾರರನ್ನು ಹೊಂದಿದ್ದ ವಾಟ್ಸಪ್, ಎರಡು ವರ್ಷಗಳಲ್ಲಿ ಬಳಕೆದಾರರ ಸಂಖ್ಯೆಯನ್ನು 1.5 ಶತಕೋಟಿಗೆ ಹೆಚ್ಚಿಸಿಕೊಂಡಿತ್ತು.

Comments are closed.