ಅಂತರಾಷ್ಟ್ರೀಯ

ಸೈನಿಕನಿಂದ ಶಾಪಿಂಗ್ ಮಾಲ್ ನಲ್ಲಿ ಗುಂಡಿನ ದಾಳಿ: 21 ಜನರು ಸಾವು

Pinterest LinkedIn Tumblr


ಬ್ಯಾಂಕಾಕ್: ಶಾಪಿಂಗ್ ಮಾಲ್ ನಲ್ಲಿ ಏಕಾಏಕಿ ಗುಂಡಿನ ದಾಳಿ ನಡೆಸಿದ 21 ಜನರು ಸಾವನ್ನಪ್ಪಿ , 33ಕ್ಕೂ ಹೆಚ್ಚು ಜನರಿಗೆ ಗಾಯಗಳಾದ ಘಟನೆ ಈಶಾನ್ಯ ಥೈಲ್ಯಾಂಡ್ ನಲ್ಲಿ ನಡೆದಿದೆ, ಭಾನುವಾರ ಮುಂಜಾನೆ ನಡೆದ ಗುಂಡಿನ ದಾಳಿಯಲ್ಲಿ ಭದ್ರತಾ ಪಡೆಯ ಸದಸ್ಯರೊಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಥಾಯ್ಲೆಂಡ್ ನ ನಖೋನ್ ರಚಾಸಿಮಾ ಎಂಬ ನಗರದ ಹೊರವಲಯದಲ್ಲಿ ಕರ್ತವ್ಯ ನಿರತನಾಗಿದ್ದ ಆ ದೇಶದ ಯೋಧ ಸಾರ್ಜೆಂಟ್ ಮೇಜರ್ ಜಕ್ರಪಂತ್ ಥೊಮ್ಮ ಎಂಬಾತ ಇದ್ದಕ್ಕಿದ್ದಂತೆ ಸಾರ್ವಜನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಮೊದಲಿಗೆ ತಾನು ಕರ್ತವ್ಯದಲ್ಲಿದ್ದ ಜಾಗದಲ್ಲಿ ತನ್ನೊಂದಿಗಿದ್ದ ಮತ್ತೊಬ್ಬ ಸೈನಿಕನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ ಆತ, ಮರುಕ್ಷಣದಲ್ಲೆ ಸನಿಹದಲ್ಲಿದ್ದ ಮಹಿಳೆ ಆಗೂ ಆಕೆಯ ಜತೆಗಿದ್ದ ವ್ಯಕ್ತಿಯ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಆನಂತರ ಕಾರೊಂದರಲ್ಲಿ ಟರ್ಮಿನಲ್ 21 ಎಂಬ ಶಾಪಿಂಗ್ ಮಾಲ್ ನೊಳಕ್ಕೆ ನುಗ್ಗಿ ಮನಬಂದಂತೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾನೆ.

ಮಾತ್ರವಲ್ಲದೆ ಘಟನೆಯ ಕುರಿತು ಥೊಮ್ಮ ತನ್ನ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದಾನೆ. ಜೊತೆಗೆ ನಾನು ಶರಣಾಗಬೇಕೆ ? ಯಾರೂ ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾನೆ.

ಸ್ಥಳಕ್ಕೆ ಬಂದ ಪೊಲೀಸರು ಮಾಲ್ ಸುತ್ತುವರಿದು ಗುಂಡಿನ ದಾಳಿ ನಡೆಸುತ್ತಿದ್ದಾರೆ. . ಘಟನೆಯಲ್ಲಿ 31 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಭದ್ರತಾ ಪಡೆಯ ವ್ಯಕ್ತಿ ಕೂಡ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

Comments are closed.