ಮುಂಬೈ

17ರ ಬಾಲಕಿಯನ್ನ ಕೊಠಡಿಯಲ್ಲಿ ಇರಿಸಿ ಚಿಕ್ಕಪ್ಪನಿಂದ ನಿರಂತರ ಅತ್ಯಾಚಾರ

Pinterest LinkedIn Tumblr


ಮುಂಬೈ: ಅಪ್ರಾಪ್ತ ಬಾಲಕಿಯ ಮೇಲೆ ಸ್ವಂತ ಚಿಕ್ಕಪ್ಪನೇ ನಿರಂತರವಾಗಿ ಅತ್ಯಾಚಾರ ಎಸಗಿದ್ದು. 24 ದಿನಗಳ ನಂತರ ಸಂತ್ರಸ್ತೆಯನ್ನು ಪೊಲೀಸರು ರಕ್ಷಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಜಲ್ನಾದಲ್ಲಿ ಈ ಘಟನೆ ನಡೆದಿದೆ. 32 ವರ್ಷದ ಆರೋಪಿ 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಪೊಲೀಸರು ಆರೋಪಿ ಚಿಕ್ಕಪ್ಪನನ್ನು 24 ದಿನಗಳ ನಂತರ ಬಂಧಿಸಿದ್ದಾರೆ.

ಏನಿದು ಪ್ರಕರಣ?
ಜನವರಿ 14 ರಂದು 17 ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಪೋಷಕರು ಈ ಕುರಿತು ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ನೆರೆಯ ಬುಲ್ಧಾನಾ ಜಿಲ್ಲೆಯ ಮೆಹ್ಕರ್ ತಹಸಿಲ್ ಗ್ರಾಮದಲ್ಲಿ ಸಂತ್ರಸ್ತೆಯನ್ನು ಪತ್ತೆ ಮಾಡಿದ್ದಾರೆ ಎಂದು ಚಂದಂಜಿರಾ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಶ್ಯಾಮ್‍ಸುಂದರ್ ಕೌತಲೆ ತಿಳಿಸಿದ್ದಾರೆ.

ಆರೋಪಿ ಪೊಲೀಸರು ಬರುವ ಮಾಹಿತಿ ತಿಳಿದು ಅವರು ಬರುವಷ್ಟರಲ್ಲಿ ಸಂತ್ರಸ್ತೆಯೊಂದಿಗೆ ಸ್ಥಳದಿಂದ ತಪ್ಪಿಸಿಕೊಂಡಿದ್ದನು. ಅಲ್ಲದೇ ಆತ ಪೊಲೀಸರಿಂದ ತಪ್ಪಿಸಿಕೊಳ್ಳಲು ಆಗಾಗ ತಾನಿದ್ದ ಸ್ಥಳವನ್ನು ಬದಲಾಯಿಸುತ್ತಿದ್ದನು. ಫೆಬ್ರವರಿ 8 ರಂದು ನಾವು ಔರಂಗಾಬಾದ್‍ನ ಬಸ್ ನಿಲ್ದಾಣದಿಂದ ಆರೋಪಿಯನ್ನು ಬಂಧಿಸಿ ಬಾಲಕಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಪೊಲೀಸರು ತಿಳಿಸಿದರು.

ಆರೋಪಿ ನನ್ನನ್ನು ಒಂದು ರೂಮಿನಲ್ಲಿ ಕೂಡಿ ಹಾಕಿದ್ದನು. ಅಲ್ಲದೇ ರೂಮಿನಿಂದ ಎಲ್ಲೋ ಹೊರಗೆ ಹೋಗಬಾರದೆಂದು ಲಾಕ್ ಮಾಡಿಕೊಳ್ಳುತ್ತಿದ್ದನು. ಇದೇ ರೀತಿ ರೂಮಿನಲ್ಲಿ ನನ್ನನ್ನು ಇಟ್ಟುಕೊಂಡು ಪದೇ ಪದೇ ಅತ್ಯಾಚಾರ ಎಸಗುತ್ತಿದ್ದ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾಳೆ.

Comments are closed.