ಕರ್ನಾಟಕ

ಕುಡುಕರಿಗೆ ವರದಾನವಾದ ಕೊರೊನಾ ವೈರಸ್

Pinterest LinkedIn Tumblr


ಬೆಂಗಳೂರು: ಇಡೀ ವಿಶ್ವದ ನಿದ್ದೆಗೆಡಿಸಿ, ಚೀನಾದಲ್ಲಿ ಮರಣ ಮೃದಂಗ ಬಾರಿಸಿರುವ ಕೊರೊನಾ ವೈರಸ್ ಈಗ ಬೆಂಗಳೂರು ಪೊಲೀಸರಿಗೂ ತಲೆ ನೋವಾಗಿದೆ. ಈ ತಲೆ ನೋವಿನಿಂದ ತಪ್ಪಿಸಿಕೊಳ್ಳುವುದಕ್ಕೆ ಡ್ರಿಂಕ್ ಆ್ಯಂಡ್ ಡ್ರೈವ್ ಮಾಡಬೇಡಿ ಎಂದು ಆದೇಶ ನೀಡಿದ್ದಾರೆ. ಜೊತೆಗೆ ವೈದ್ಯರ ಮೊರೆ ಹೋಗಿದ್ದರೆ.

ಕೊರೊನಾ ಕೇವಲ ಉಸಿರಾಟದಿಂದ ಒಬ್ಬರಿಂದ ಒಬ್ಬರಿಗೆ ಹರಡುವ ಅಂಟು ಕಾಯಿಲೆ. ಆದ್ದರಿಂದ ಪೊಲೀಸರು ಡ್ರಿಂಕ್ & ಡ್ರೈವ್ ಚೆಕ್ ಮಾಡುವಾಗ ವ್ಯಕ್ತಿ ಕುಡಿದಿದ್ದಾನಾ ಇಲ್ಲವಾ ಅನ್ನೋದನ್ನ ಸ್ಮೆಲ್ ಮಾಡಬೇಕು. ಆತನ ಬಾಯಿಯಿಂದ ಹೊರಬರುವ ಗಾಳಿಯನ್ನು ಪೊಲೀಸರು ಗಮನಿಸಬೇಕಾಗುತ್ತೆ. ಇದರಿಂದ ವೈರಾಣುಗಳು ಪೊಲೀಸರಿಗೂ ತಗುಲುವ ಸಾಧ್ಯತೆಯ ಭಯ ಬೆಂಗಳೂರು ಪೊಲೀಸರಿಗೆ ಪ್ರಾರಂಭವಾಗಿದೆ.

ಕರ್ನಾಟಕದಲ್ಲಿ ಸದ್ಯ ಕೊರೊನಾ ಪತ್ತೆಯಾಗಿಲ್ಲ. ಆದರೆ ಸಾಕಷ್ಟು ಜನ ಶಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಲೇ ಇದ್ದಾರೆ. ಅಂತಹರು ಪೊಲೀಸರಿಗೆ ಸಿಕ್ಕಿ ಪೊಲೀಸರಿಗೂ ಕೊರೊನಾ ತಟ್ಟುವ ಭಯ ಎದುರಾಗಿರುವುದರಿಂದ ಪೊಲೀಸರು ಡ್ರಿಂಕ್ & ಡ್ರೈವ್ ಚೆಕ್ ಮಾಡುವುದನ್ನು ನಿಲ್ಲಿಸಿದ್ದಾರೆ.

ಜೊತೆಗೆ ರಾಜೀವ್ ಗಾಂಧಿ ಎದೆ ರೋಗ ಆಸ್ಪತ್ರೆಯ ವೈದ್ಯರಿಗೂ ಪತ್ರವನ್ನು ಬರೆಯಲಾಗಿದ್ದು, ಡ್ರಿಂಕ್ & ಡ್ರೈವ್ ನಿಂದ ರೋಗ ತಟ್ಟಲಿದ್ಯಾ ಅಂತ ಮಾಹಿತಿ ನೀಡಿ ಎಂದು ಕೋರಿದ್ದಾರೆ. ರಾಜೀವ್ ಗಾಂಧಿ ಆಸ್ಪತ್ರೆಯ ವೈದ್ಯರು ಉತ್ತರ ನೀಡುವ ತನಕ ಬೆಂಗಳೂರಿನಲ್ಲಿ ಡ್ರಿಂಕ್ ಆ್ಯಂಡ್ ಡ್ರೈವ್ ಗೆ ತಾತ್ಕಾಲಿಕ ಬ್ರೇಕ್ ಬಿದ್ದಿದ್ದು, ಕುಡುಕರು ಮನಸ್ಸಲ್ಲೇ ಖುಷಿ ಪಡುತ್ತಿದ್ದಾರೆ.

Comments are closed.