ಅಂತರಾಷ್ಟ್ರೀಯ

ಲ್ಯಾಂಡಿಂಗ್​ ಮಾಡುವ ವೇಳೆ ರನ್​ವೇಯಲ್ಲಿ ಜಾರಿದ ವಿಮಾನ; ಮೂವರು ಪ್ರಯಾಣಿಕರ ದುರ್ಮರಣ

Pinterest LinkedIn Tumblr

ಇಸ್ತಾನ್​ಬುಲ್: ಲ್ಯಾಂಡಿಂಗ್​ ಮಾಡುವ ವೇಳೆ ಕೆಟ್ಟ ಹವಾಮಾನದಿಂದಾಗಿ ರನ್​ವೇಯಲ್ಲಿ ವಿಮಾನ ಜಾರಿದ ಪರಿಣಾಮ ಮೂವರು ಸಾವನ್ನಪ್ಪಿದ್ದು, 179 ಜನ ಗಾಯಗೊಂಡಿರುವ ಘಟನೆ ಟರ್ಕಿಯಲ್ಲಿ ನಡೆದಿದೆ.

ವಿಮಾನ ಮೂರು ತುಂಡಾಗಿದ್ದು, ಜನರು ಪ್ರಾಣರಕ್ಷಣೆಗಾಗಿ ವಿಮಾನದ ಮುರಿದ ರೆಕ್ಕೆ ಸಹಾಯದಿಂದ ಮೇಲೆ ಬಂದಿದ್ದಾರೆ. ಇಸ್ತಾನ್​ಬುಲ್ನ ಸಬಿಹಾ ಗೊಕ್ಸ್​ ಹಾಗೂ ಏಜಿಯನ್​ ಪೋರ್ಟ್​ ಸಿಟಿ ನಡುವೆ ಹಾರಾಟ ನಡೆಸುತ್ತಿದ್ದ ಬೋಯಿಂಗ್​ 737 ವಿಮಾನ ಅಪಘಾತಗೊಂಡಿದೆ.

ಇಸ್ತಾನ್​ಬುಲ್​ನಲ್ಲಿ ಅತಿಯಾದ ಗಾಳಿ ಮತ್ತು ಮಳೆಯಿಂದಾಗಿ ಈ ಅನಾಹುತ ನಡೆದಿದೆ. ಅಪಘಾತ ನಡೆದಾಗ ಪ್ರಯಾಣಿಕರು ಕೆಲವರು ತಾವೇ ವಿಮಾನದಿಂದ ಹೊರ ಬರುವ ಪ್ರಯತ್ನ ನಡೆಸಿದ್ದಾರೆ. ಎಂದು ಇಲ್ಲಿನ ಸಾರಿಗೆ ಸಚಿವರು ತಿಳಿಸಿದ್ದಾರೆ.

ವಿಮಾನದಲ್ಲಿ 177 ಮಂದಿ ಪ್ರಯಾಣಿಕರು ಹಾಗೂ 6 ಮಂದಿ ಸಿಬ್ಬಂದಿಗಳಿದ್ದರು. ಇದರಲ್ಲಿ 12 ಮಂದಿ ಮಕ್ಕಳು ಇದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆಟ್ಟ ಹವಾಮಾನದಿಂದ ಮಂದ ಬೆಳಕಿನಿಂದಾಗಿ ಈ ಅನಾಹುತ ಸಂಭವಿಸಿದೆ. ಇನ್ನು ಈ ಅಪಘಾತದ ಸಂಪೂರ್ಣ ದೃಶ್ಯ ಕೂಡ ಸೆರೆಯಾಗಿದೆ.

Comments are closed.