ಅಂತರಾಷ್ಟ್ರೀಯ

ನಾಯಿಯಿಂದಾಗಿ ಕೊರೋನಾ ವೈರಸ್’ನಿಂದ ಪಾರಾದ ಮಹಿಳೆ

Pinterest LinkedIn Tumblr


ಚೀನಾ: ತೈವಾನ್ ನ ಮಹಿಳೆಯೊಬ್ಬಳು ಜನವರಿ ಆರಂಭದಲ್ಲಿ ಚೀನಾದ ವುಹಾನ್ ಪ್ರಾಂತಕ್ಕೆ ಪ್ರಯಾಣ ಬೆಳೆಸುವ ಯೋಜನೆಯನ್ನು ಹಾಕಿಕೊಂಡಿದ್ದಳು. ಆದರೇ ಆಕೆಯ ಪ್ರೀತಿಯ ಶ್ವಾನ ಬೇರೆಯದ್ದೇ ಉಪಾಯ ಮಾಡಿ ತನ್ನ ಮಾಲಕಿ ಪ್ರವಾಸ ಕೈಗೊಳ್ಳದಂತೆ ಮಾಡಿತ್ತು. ಪರಿಣಾಮವಾಗಿ ಚೀನಾದಲ್ಲಿ ಮಾರಾಣಾಂತಿಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಸೋಂಕುವಿಗೆ ತುತ್ತಾಗುವುದರಲ್ಲಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಹೌದು. ಆಗುವುದೆಲ್ಲಾ ಒಳ್ಳೆಯದಕ್ಕೆ ಎಂಬ ಮಾತಿದೆ. ಚೀನಾದಲ್ಲಿ ಅತಿಹೆಚ್ಚು ಕೊರೋನಾ ವೈರಸ್ ದಾಖಲಾಗಿರುವ ನಗರವೆಂದರೇ ವುಹಾನ್ . ಈ ವುಹಾನ್ ಗೆ ತೆರಳಬೇಕಾಗಿದ್ದ ತೈವಾನ್ ಮಹಿಳೆಯ ಪಾಸ್ ಪೋರ್ಟ್ ಅನ್ನು ಆಕೆಯ ಪ್ರೀತಿಯ ನಾಯಿ(ಕಿಮಿ) ಹರಿದು ಹಾಕಿತ್ತು. ಇದರಿಂದ ಆಕೆಗೆ ವುಹಾನ್ ಗೆ ಪ್ರವಾಸ ಕೈಗೊಳ್ಳಲು ಸಾದ್ಯವಾಗಿರಲಿಲ್ಲ.

ಆ ಕ್ಷಣದಲ್ಲಿ ಶ್ವಾನದ ಮೇಲೆ ವಿಪರೀತ ಮುನಿಸಿಕೊಂಡಿದ್ದ ಆಕೆ, ಕೊನೆಗೆ ಅದೇ ನಾಯಿಗೆ ಧನ್ಯವಾದ ತಿಳಿಸಿ ಫೇಸ್ ಬುಕ್ ನಲ್ಲಿ ಈ ವಿಷಯವನ್ನು ಪೋಸ್ಟ್ ಮಾಡಿದ್ದಾರೆ. ಮಾತ್ರವಲ್ಲದೆ ನಾನೇನಾದರೂ ಅಂದು ವುಹಾನ್ ಗೆ ಹೋಗಿದ್ದರೆ ಕೊರೋನಾ ವೈರಸ್ ಗೆ ಬಲಿಯಾಗುವ ಸಾಧ್ಯತೆ ಇತ್ತು, ಆದರೆ ಕಿಮಿ ನನ್ನ ಪಾಸ್ ಪೋರ್ಟ್ ಅನ್ನು ಹರಿದು ಹಾಕಿದ್ದರಿಂದ ನಾನು ಮನೆಯಲ್ಲೇ ಉಳಿಯುವಂತಾಯಿತು, ನನ್ನ ಕಿಮಿ ನನ್ನನ್ನು ಕಾಪಾಡಿದಳು ಎಂದು ಬರೆದುಕೊಂಡಿದ್ದಾರೆ.

ಚೀನಾದಲ್ಲಿ ಕೊರೋನಾ ವೈರಸ್ ನಿಂದ ಈಗಾಗಲೇ 170 ಜನರು ಮೃತಪಟ್ಟಿದ್ದು ವುಹಾನ್ ನಗರವೊಂದರಲ್ಲೇ 160 ಜನರು ಸಾವನ್ನಪ್ಪಿದ್ದಾರೆ. ಚೀನಾದಿಂದ ಆಗಮಿಸುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲೇ ತಪಾಸನೆಗೆ ಒಳಪಡಿಸಿ , ಪ್ರತ್ಯೇಕ ಘಟಕದಲ್ಲಿ ಇರಿಸಲಾಗುತ್ತಿದೆ. ಚೀನಾದಾದ್ಯಂತ ಜನರು ಕಂಗಾಲಾಗಿದ್ದು 7700 ಮಂದಿಗೆ ಸೋಂಕು ತಗುಲಿರುವ ಅಧಿಕೃತ ಮಾಹಿತಿಯನ್ನು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.