ಕ್ರೀಡೆ

ಕ್ರಿಕೆಟ್ ನಲ್ಲಿ ಆರಂಭಿಕನಾಗಿ ಹತ್ತು ಸಾವಿರ ರನ್ ಗಡಿ ದಾಟಿದ ರೋಹಿತ್

Pinterest LinkedIn Tumblr


ಹ್ಯಾಮಿಲ್ಟನ್: ಆತಿಥೇಯ ಕಿವೀಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ‘ಸೂಪರ್’ ಹಿಟ್ ಮೂಲಕ ಭಾರತಕ್ಕೆ ಜಯದ ಮಾಲೆ ತೊಡಿಸಿದ ರೋಹಿತ್ ಅದೇ ಪಂದ್ಯದಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ.

ಮುಂಬೈಕರ್ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆರಂಭಿಕನಾಗಿ ಹತ್ತು ಸಾವಿರ ರನ್ ಬಾರಿಸಿದ ಸಾಧನೆ ಮಾಡಿದರು. ನ್ಯೂಜಿಲ್ಯಾಂಡ್ ವಿರುದ್ಧದ ಮೂರನೆ ಟಿ ಟ್ವೆಂಟಿ ಪಂದ್ಯದಲ್ಲಿ ಶರ್ಮಾ ಈ ದಾಖಲೆ ಬರೆದರು. ಬುಧವಾರದ ಪಂದ್ಯದಲ್ಲಿ 40 ಎಸೆತಗಳಲ್ಲಿ 65 ರನ್ ಬಾರಿಸಿದ ರೋಹಿತ್ ಆರಂಭಿಕನಾಗಿ ಈ ದಾಖಲೆ ಬರೆದ ನಾಲ್ಕನೇ ಭಾರತದ ಆರಂಭಿಕ ಎಂದೆನಿಸಿದರು.

ಟೆಸ್ಟ್, ಏಕದಿನ ಮತ್ತು ಟಿ ಟ್ವೆಂಟಿ ಕ್ರಿಕೆಟ್ ನಲ್ಲಿ ಆರಂಭಿಕನಾಗಿ ರೋಹಿತ್ ಹತ್ತು ಸಾವಿರ ರನ್ ಬಾರಿಸಿದರು. ವೀರೇಂದ್ರ ಸೆಹ್ವಾಗ್ 16,119 ರನ್ ಗಳಿಸಿ ಅತೀ ಹೆಚ್ಚು ರನ್ ಗಳಿಸಿರುವ ಆರಂಭಿಕ ಎಂಬ ದಾಖಲೆ ಬರೆದಿದ್ದಾರೆ. ನಂತರದ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್ (15,335) ಮತ್ತು ಸುನೀಲ್ ಗಾವಸ್ಕಾರ್ (12,258) ಇದ್ದಾರೆ.

ವಿಶ್ವ ಕ್ರಿಕೆಟ್ ನಲ್ಲಿ ಈ ದಾಖಲೆ ಶ್ರೀಲಂಕಾದ ಚಾಂಪಿಯನ್ ಆಟಗಾರ ಸನತ್ ಜಯಸೂರ್ಯ ಹೆಸರಲ್ಲಿದೆ. ಜಯಸೂರ್ಯ ಆರಂಭಿಕನಾಗಿ ಗಳಿಸಿರುವ ರನ್ ಬರೋಬ್ಬರಿ 19,298. ನಂತರದ ಸ್ಥಾನದಲ್ಲಿ 19,934 ರನ್ ಗಳಿಸಿರುವ ಕ್ರಿಸ್ ಗೈಲ್ ಇದ್ದಾರೆ.

Comments are closed.