ಅಂತರಾಷ್ಟ್ರೀಯ

ಕೊರೊನಾ ವೈರಸ್: ವುಹಾನ್ ನಲ್ಲಿ ಆಹಾರಕ್ಕಾಗಿ ಅಂಗಲಾಚುತ್ತಿದ್ದಾರೆ ಇಂಡಿಯಾದ ವಿದ್ಯಾರ್ಥಿಗಳು

Pinterest LinkedIn Tumblr


ಬೀಜಿಂಗ್: ಮಾರಾಣಾಂತಿಕ ಕೊರೊನಾ ವೈರಸ್ ಗೆ ಚೀನಾ ಅಕ್ಷರಶಃ ತತ್ತರಿಸಿದೆ. ದಿನಕಳೆದಂತೆ ಈ ಮಾರಾಣಾಂತಿಕ ವೈರಸ್ ಗೆ ಬಲಿಯಾದವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೇ ವೇಳೆ ಚೀನಾದ ವುಹಾನ್ ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳು ಅನ್ನ ಆಹಾರವಿಲ್ಲದೆ ನರಳುತ್ತಿದ್ದಾರೆ.

ಈ ಮಾರಣಾಂತಿಕ ವೈರಸ್ ಮೊದಲು ಪತ್ತೆಯಾದ ಹುಬೇ ಪ್ರಾಂತ್ಯದ ವುಹಾನ್ ನಗರ ಈಗ ಸ್ಮಶಾನದಂತಾಗಿದೆ. ಸದಾ ಜನರಿಂದ ತುಂಬುತ್ತಿದ್ದ ವುಹಾನ್ ನಗರ ಈಗ ಖಾಲಿ ಖಾಲಿಯಾಗಿದೆ. ರಸ್ತೆಯಲ್ಲಿ ಯಾರೂ ಒಡಾಡುವಂತಿಲ್ಲ.

ಕೊರೊನಾ ವೈರಸ್ ಹಬ್ಬುತ್ತಿರುವ ಕಾರಣ ಯಾರೂ ಹೊರಗೆ ಬರದಂತೆ ಆದೇಶಿಸಲಾಗಿದೆ. ಕೆಲ ದಿನಗಳಿಂದ ನಾವು ಕ್ಯಾಂಪಸ್ ಒಳಗೆ ಇದ್ದೇವೆ. ಅಗತ್ಯ ವಸ್ತುಗಳನ್ನು ಕೊಳ್ಳಲು ದಿನದಲ್ಲಿ ಕೇವಲ ಎರಡು ಗಂಟೆಗಳ ಕಾಲ ಅವಕಾಶ ನೀಡಲಾಗುತ್ತಿದೆ. ಆದರೆ ಅಗತ್ಯ ವಸ್ತುಗಳು ಸಿಗುತ್ತಿಲ್ಲ. ನಗರದಲ್ಲಿ ಎಲ್ಲಾ ಅಂಗಡಿಗಳು ಮುಚ್ಚಲಾಗಿದೆ. ಹಾಗಾಗಿ ವಸ್ತುಗಳು ಕಡಿಮೆಯಾಗುತ್ತಿವೆ. ಇದೇ ರೀತಿ ಮುಂದುವರಿದರೆ ನಾವು ಆಹಾರ ಮತ್ತು ನೀರು ಕೂಡಾ ಸಿಗುವುದಿಲ್ಲ ಎಮದು ಭಾರತೀಯ ಮೂಲದ ವಿದ್ಯಾರ್ಥಿ ಗೌರವ್ ನಾಥ್ ಸುದ್ದಿವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದಾರೆ.

22 ವರ್ಷದ ಗೌರವ್ ನಾಥ್ ವುಹಾನ್ ವಿಶ್ವವಿದ್ಯಾಲಯದಲ್ಲಿ ಮೆಟೀರಿಯಲ್ ಸೈಯನ್ಸ್ ಮತ್ತು ಇಂಜಿನಿಯರಿಂಗ್ ಓದುತ್ತಿದ್ದಾರೆ.

Comments are closed.