ಅಂತರಾಷ್ಟ್ರೀಯ

ಕೊರೋನಾ ವೈರಸ್ ಗೆ 80ಕ್ಕೂ ಅಧಿಕ ಜನರ ಸಾವು

Pinterest LinkedIn Tumblr


ವುಹಾನ್: ಚೀನಾದಲ್ಲಿ ಕಂಡುಬಂದಿರುವ ಕೊರೋನಾ ವೈರಸ್ ತನ್ನ ಮರಣ ಮೃದಂಗನ್ನು ಮುಂದುವರಿಸಿದ್ದು 80 ಜನರು ಬಲಿಯಾಗಿದ್ದಾರೆ. 2,744 ಜನರು ಈ ಸೋಂಕುವಿಗೆ ತುತ್ತಾಗಿದ್ದರೆ ಮೊದಲ ಬಾರಿಗೆ ವೈರಾಣು ಕಂಡುಬಂದ ವುಹಾನ್ ನ ಹುಬೈ ನಗರದಲ್ಲಿ 24 ಜನರು ಹೊಸದಾಗಿ ಸೋಂಕುವಿಗೆ ತುತ್ತಾಗಿದ್ದಾರೆ.

ಹುಬೈ ನಗರ ಸಂಪೂರ್ಣ ಲಾಕ್ ಡೌನ್ ಆಗಿದ್ದು ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಚೀನಾ ಸರ್ಕಾರ ಕೈಗೊಂಡಿದೆ.

ಏತನ್ಮದ್ಯೆ ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೋನಾ ವೈರಸ್ ಗೆ ಯಾವುದೇ ಭಾರತೀಯರೂ ತುತ್ತಾಗಿಲ್ಲ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದೆ.

ಬೀಜಿಂಗ್ ನಲ್ಲಿರುವ ಭಾರತದ ರಾಯಭಾರಿ ಕಚೇರಿ ಚೀನಾದಲ್ಲಿರುವ ಭಾರತೀಯರೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ

Comments are closed.