ರಾಷ್ಟ್ರೀಯ

ಪ್ರಿಯತಮನ ಜೊತೆ ಸುತ್ತಾಡಲು ಹೋಗುವುದಕ್ಕೆ ಅತ್ಯಾಚಾರದ ಸುಳ್ಳು ಕಥೆ ಹೇಳಿದ 16ರ ಹುಡುಗಿ

Pinterest LinkedIn Tumblr


ಹೈದರಾಬಾದ್: 16 ವರ್ಷದ ಹುಡುಗಿ ಪ್ರಿಯತಮನ ಜೊತೆ ಸುತ್ತಾಡಲು ಹೋಗಿದ್ದು, ಮನೆಗೆ ತಡವಾಗಿ ಹೋದರೆ ಬೈಯಬಹುದೆಂದು ತನ್ನ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಸುಳ್ಳು ಕಥೆ ಕಟ್ಟಿ ಪೊಲೀಸರನ್ನು ಅಲೆಯುಂತೆ ಮಾಡಿದ್ದ ಘಟನೆ ನಗರದ ಸಂಗರೆಡ್ಡಿಯಲ್ಲಿ ನಡೆದಿದೆ.

16 ವರ್ಷದ ಹುಡುಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸುಳ್ಳು ಹೇಳಿದ್ದಳು. ಗುರುವಾರ ಪಟಾಂಚೇರಿನಲ್ಲಿ ನಾಲ್ಕು ಜನ ಬಂದು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಹುಡುಗಿ ಆರೋಪಿಸಿದ್ದಳು. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದರು. ಈ ವೇಳೆ ಹುಡುಗಿ ಸುಳ್ಳು ಕಥೆ ಕಟ್ಟಿರುವುದು ಬೆಳಕಿಗೆ ಬಂದಿದೆ.

ಏನಿದು ಪ್ರಕರಣ?
ಹುಡುಗಿ ಪೋಷಕರಿಗೆ ತಿಳಿಸದೆ ತನ್ನ ಗೆಳೆಯನೊಂದಿಗೆ ಸಿನಿಮಾ ನೋಡಲು ಹೋಗಿದ್ದಳು. ಆದರೆ ಮನೆಗೆ ತಡವಾಗಿ ಬಂದು ಪೋಷಕರಿಗೆ, ನನ್ನ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಸುಳ್ಳು ಕಥೆ ಕಟ್ಟಿದ್ದಾಳೆ. ನಂತರ ಪೋಷಕರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಪಟ್ಟಣದಾದ್ಯಂತ ಮತ್ತು ಹುಡುಗಿ ಹೋಗಿದ್ದ ಚಿತ್ರಮಂದಿರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದಾರೆ. ಆಗ ಹುಡುಗಿ ಮಾಡಿದ್ದ ಆರೋಪಗಳು ಸುಳ್ಳು ಎಂದು ತನಿಖೆ ವೇಳೆ ತಿಳಿಯಿತು ಎಂದು ಪೊಲೀಸ್ ಅಧಿಕಾರಿ ಎಸ್. ಚಂದ್ರಶೇಖರ್ ರೆಡ್ಡಿ ತಿಳಿಸಿದ್ದಾರೆ.

ಇದಲ್ಲದೆ ಹುಡುಗಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ವೈದ್ಯಕೀಯ ವರದಿಯಲ್ಲೂ ಅತ್ಯಾಚಾರ ನಡೆದಿರುವ ಬಗ್ಗೆ ಮಾಹಿತಿ ಇರಲಿಲ್ಲ. ಕೊನೆಗೆ ಅನುಮಾನ ಬಂದು ಹುಡುಗಿಯನ್ನು ಪ್ರಶ್ನೆ ಮಾಡಿದಾಗ ಅತ್ಯಾಚಾರದ ಬಗ್ಗೆ ಸುಳ್ಳು ಹೇಳಿದ್ದಾಗಿ ಒಪ್ಪಿಕೊಂಡಿದ್ದಾಳೆ. ಹೀಗಾಗಿ ಪೋಷಕರ ಅನುಮತಿಯಿಲ್ಲದೆ ಹುಡುಗಿಯನ್ನು ಹೊರಗೆ ಕರೆದುಕೊಂಡು ಹೋಗಿದ್ದಕ್ಕೆ ಆಕೆಯ ಗೆಳೆಯ ಸಂದೀಪ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸದ್ಯಕ್ಕೆ ಪೊಲೀಸರು ಹುಡುಗಿಗೆ ಬುದ್ಧಿವಾದ ಹೇಳಿ ಪೋಷಕರಿಗೆ ಒಪ್ಪಿಸಿದ್ದಾರೆ. ಆಕೆಯ ಗೆಳೆಯ ಎಂ.ಸಂದೀಪ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಹುಡುಗಿ ಇತ್ತೀಚೆಗೆ ಪೋಷಕರ ಮನೆಗೆ ಬಂದಿದ್ದಳು. ಕೆಲ ದಿನಗಳಲ್ಲಿ ಶ್ರೀಕಾಕುಲಂನಲ್ಲಿರುವ ತನ್ನ ಅಜ್ಜಿ ಮನೆಗೆ ಹೋಗಬೇಕಿತ್ತು. ಈ ಬಗ್ಗೆ ತನ್ನ ಗೆಳೆಯ ಸಂದೀಪ್‍ಗೆ ತಿಳಿಸಿದ್ದು, ಅಜ್ಜಿಯ ಮನೆಗೆ ಹೋಗುವಷ್ಟರಲ್ಲಿ ಸಂದೀಪ್ ಜೊತೆಗೆ ಸುತ್ತಾಡಲು ಪ್ಲಾನ್ ಮಾಡಿಕೊಂಡಿದ್ದಳು. ಅದರಂತೆಯೇ ಪ್ರಿಯತಮನ ಜೊತೆ ಸಿನಿಮಾಗೆ ಹೋಗಲು ನಿರ್ಧರಿಸಿದ್ದಳು.

ಕೊನೆಗೆ ಸಂದೀಪ್ ಅಪಾರ್ಟ್ ಮೆಂಟ್ ಬಳಿ ಬಂದು ಹುಡುಗಿಯನ್ನು ಪಿಕ್ ಮಾಡಿ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಹುಡುಗಿ ಫೋನ್ ಸ್ವಿಚ್ ಆಫ್ ಮಾಡಿದ್ದಳು. ಸಿನಿಮಾ ಮುಗಿದ ನಂತರ ನೆರೆಹೊರೆಯವರು ನೋಡಬಾರದು ಎಂದು ಬೇರೆ ಮಾರ್ಗದಲ್ಲಿ ಕರೆದುಕೊಂಡು ಹೋಗಿದ್ದಾನೆ. ಆಗ ಹುಡುಗಿ ತನ್ನ ಫೋನ್ ಆನ್ ಮಾಡಿ ನೋಡಿದ್ದಾಳೆ. ಈ ವೇಳೆ ಆಕೆಯ ಪೋಷಕರು ಹಲವಾರು ಮಾಡಿ ಕಾಲ್ ಮಾಡಿದ್ದರು. ಇದನ್ನು ನೋಡಿದ ಹುಡುಗಿ ಮನೆಗೆ ಹೋದರೆ ಬೈಯಬಹುದೆಂದು ಆತಂಕಗೊಂಡು ತಾಯಿಯನ್ನು ಕರೆದು ನಾಲ್ವರು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸುಳ್ಳು ಕಥೆ ಹೇಳಿದ್ದಾಳೆ ಎಂದು ಹೆಚ್ಚಿನ ತನಿಖೆಯಲ್ಲಿ ತಿಳಿದು ಬಂದಿದೆ.

Comments are closed.