ಅಂತರಾಷ್ಟ್ರೀಯ

ನಿರಂತರ ಸೆಕ್ಸ್ ನಿಂದ ಮಧ್ಯ ವಯಸ್ಸಿನಲ್ಲಿ ಮಹಿಳೆಯರ ಮುಟ್ಟು ವಿಳಂಬ

Pinterest LinkedIn Tumblr


ಪ್ಯಾರಿಸ್: ಮಹಿಳೆಯರಲ್ಲಿನ ಮುಟ್ಟು ನಿಲ್ಲುವ ಪ್ರಕ್ರಿಯೆ ಕುರಿತಂತೆ ಅಧ್ಯಯನ ನಡೆಸಿರುವ ವರದಿಯೊಂದು ಬಿಡುಗಡೆಯಾಗಿದ್ದು, ಮಧ್ಯ ವಯಸ್ಸಿನ ಮಹಿಳೆಯರು ನಿರಂತರವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಮುಟ್ಟು ನಿಲ್ಲುವ ಸಮಯ ವಿಳಂಬವಾಗಲಿದೆ ಎಂದು ತಿಳಿಸಿದೆ.

ಅಧ್ಯಯನದ ಪ್ರಕಾರ ಸರಾಸರಿ ಎಂಬಂತೆ ವಾರದಲ್ಲಿ ಒಂದು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವವರಿಗಿಂತ ತಿಂಗಳಲ್ಲಿ ಒಂದು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಮಹಿಳೆ ಶೇ.28ರಷ್ಟು ಮುಟ್ಟು ನಿಲ್ಲುವ ಪ್ರಕ್ರಿಯೆಯ ಅವಕಾಶ ಕಡಿಮೆ ಮಾಡಲಿದೆ ಎಂದು ಜರ್ನಲ್ ರಾಯಲ್ ಸೊಸೈಟಿಯ ಓಪನ್ ಸೈನ್ಸ್ ವರದಿ ವಿವರಿಸಿದೆ.

ಮುಟ್ಟು ನಿಲ್ಲುವ ಕುರಿತು ಅಧ್ಯಯನದ ಸಲಹೆ ಪ್ರಕಾರ ದೇಹ ಮಹತ್ತರ ಒತ್ತಡವನ್ನು ತಡೆದುಕೊಳ್ಳುವ ಪ್ರತಿಕ್ರಿಯೆಯ ಪ್ರತಿಫಲನದ ಆಧಾರದ ಮೇಲೆ ಬದಲಾವಣೆಯಾಗಲಿದೆ ಎಂದು ಹೇಳಿದೆ.

ಒಂದು ವೇಳೆ ಮಹಿಳೆ ಮಧ್ಯವಯಸ್ಸಿನಲ್ಲಿ ಅಪರೂಪಕ್ಕೊಮ್ಮೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಆವಾಗ ದೇಹ ಗರ್ಭಿಣಿಯಾಗುವ ಸಾಧ್ಯತೆಯ ಸುಳಿವನ್ನು ದೈಹಿಕವಾಗಿ ಸ್ವೀಕರಿಸುವುದಿಲ್ಲ ಎಂದು ಲಂಡನ್ ಯೂನಿರ್ವಸಿಟಿಯ ವಿಜ್ಞಾನಿಗಳಾದ ಮೆಗಾನ್ ಅರ್ನೊಟ್ ಮತ್ತು ರುಥ್ ಮ್ಯಾಕ್ ತಿಳಿಸಿದ್ದಾರೆ.

Comments are closed.