ರಾಷ್ಟ್ರೀಯ

ನೋಟಿನಲ್ಲಿ ಲಕ್ಶ್ಮಿ ಚಿತ್ರ ಹಾಕಿದ್ರೆ ರೂಪಾಯಿ ಮೌಲ್ಯ ವೃದ್ದಿ: ಸುಬ್ರಮಣಿಯನ್ ಸ್ವಾಮಿ

Pinterest LinkedIn Tumblr


ಖಾಂಡ್ವಾ: ಭಾರತೀಯ ಕರೆನ್ಸಿ ನೋಟುಗಳ ಮೇಲೆ ಲಕ್ಶ್ಮಿದೇವಿಯ ಚಿತ್ರ ಹಾಕಿದ್ದಾದರೆ ರುಪಾಯಿಯ ಮೌಲ್ಯ ವೃದ್ದಿಸಲಿದೆ ಎಂದು ಬಿಜೆಪಿ ಮುಖಂಡ ಮತ್ತು ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿಹೇಳಿದ್ದಾರೆ.

ಮಂಗಳವಾರ ರಾತ್ರಿ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ‘ಸ್ವಾಮಿ ವಿವೇಕಾನಂದ ವ್ಯಾಖ್ಯಾನ್ ಮಾಲಾ ಎಂಬ ಉಪನ್ಯಾಸ ಸರಣಿಯನ್ನುದ್ದೇಶಿಸಿ ಉಪನ್ಯಾಸ ನೀಡಿದ್ದ ನಂತರ ಈ ಮಾತನ್ನು ಹೇಳಿದ್ದಾರೆ.

ಸುದ್ದಿಗಾರರೊಡನೆ ಮಾತನಾಡುತ್ತಾ ಇಂಡೋನೇಷ್ಯಾದ ಕರೆನ್ಸಿಯಲ್ಲಿ ಮುದ್ರಿಸಲಾದ ಗಣೇಶನ ಚಿತ್ರದ ಕುರಿತ ಪ್ರಶ್ನೆಗೆ ಉತ್ತರಿಸಿದ ಸ್ವಾಮಿ, “ಪ್ರಧಾನಿ ನರೇಂದ್ರ ಮೋದಿ ಈ ಪ್ರಶ್ನೆಗೆ ಉತ್ತರಿಸಬಹುದು, ಗಣೇಶನು ಅಡ್ಡಿಗಳನ್ನು ನಿವಾರಿಸಬಲ್ಲ, ನಾನು ಹೇಳುವುದೆಂದರೆ ಕರೆನ್ಸಿ ನೋಟುಗಳ ಮೇಲೆ ನಾನು ಹೇಳುವುದೇನೆಂದರೆ ಲಕ್ಷ್ಮಿ ದೇವತೆ ಚಿತ್ರ ಹಾಕಿದ್ದಾದರೆ ರೂಪಾಯಿಯ ಸ್ಥಿತಿಯನ್ನು ಸುಧಾರಿಸಬಹುದು. ಒಂದೊಮ್ಮೆ ಪ್ರಧಾನಿಗಳು ಈ ತೀರ್ಮಾನಕ್ಕೆ ಬಂದರೆ ನಾನು ಅವರಿಗೆ ಬೆಂಬಲವಾಗಿ ನಿಲ್ಲುತ್ತೇನೆ, ಹಾಗೆಯೇ ಈ ಬಗ್ಗೆ ಯಾರೂ ಕೆಟ್ಟದಾಗಿ ಭಾವಿಸಬಾರದು. ” ಎಂದರು.

ಪೌರತ್ವ [ತಿದ್ದುಪಡಿ] ಕಾಯ್ದೆಯಲ್ಲಿ ಆಕ್ಷೇಪಾರ್ಹ ಅಂಶಗಳಾವುದೂ ಇಲ್ಲ ಎಂದು ಸ್ವಾಮಿ ಹೇಳಿದ್ದಾರೆ.”ಕಾಂಗ್ರೆಸ್ ಮತ್ತು ಮಹಾತ್ಮ ಗಾಂಧಿ ಇದನ್ನು (ಸಿಎಎ) ಕೋರಿದ್ದರು. ಮನಮೋಹನ್ ಸಿಂಗ್ ಅವರು 2003 ರಲ್ಲಿ ಸಂಸತ್ತಿನಲ್ಲಿ ಈ ಕಾಯ್ದೆ ಜಾರಿಯಾಗಬೇಕೆಂದು ಮನವಿ ಮಾಡಿದ್ದರು.ಈಗ ನಾವಿದನ್ನು ಜಾರಿ ಮಾಡಿದ್ದೇವೆ. ಆದರೆ ನಾವು ಪಾಕಿಸ್ತಾನದ ಮುಸ್ಲಿಮರಿಗೆ ನಾವು ಅನ್ಯಾಯ ಮಾಡುತ್ತಿದ್ದೇವೆಂದು ಅವರು (ಕಾಂಗ್ರೆಸ್ ಹಾಗೂ ವಿಪಕ್ಷ) ಇದನ್ನು ಒಪ್ಪಿಕೊಳ್ಳುತ್ತಿಲ್ಲ. ಆದರೆ ಸತ್ಯವೆಂದರೆ ಪಾಕ್ ಮುಸ್ಲಿಮರು ಭಾರತಕ್ಕೆ ಬರಲು ಬಯಸುವುದಿಲ್ಲ. ನಾವವರನ್ನು ಒತ್ತಾಯಿಸಲು ಸಾಧ್ಯವಿಲ್ಲ “ಎಂದು ಸ್ವಾಮಿ ಹೇಳಿದ್ದಾರೆ.

ಇದಕ್ಕೆ ಮುನ್ನ ಉಪನ್ಯಾಸದಲ್ಲಿ ಸ್ವಾಮಿಮುಸ್ಲಿಮರು ಮತ್ತು ಹಿಂದೂಗಳ ಡಿಎನ್‌ಎ ಬ್ರಾಹ್ಮಣರು ಮತ್ತು ದಲಿತರ ಡಿಎನ್‌ಎ ಗಳಂತಿದೆ ಎಂದು ಹೇಳೀದ್ದರು.

ಕಳೆದ 70 ವರ್ಷಗಳಲ್ಲಿ ಸಾಧ್ಯವಾಗದ ಕಾಯ್ದೆ ಜಾರಿಯನ್ನು ಸುಪ್ರೀಂ ಕೋರ್ಟ್ ಮತ್ತು ಸಂವಿಧಾನದ 44 ನೇ ಪರಿಚ್ಚೇದದ ಮೂಲಕ ಬಿಜೆಪಿ ಶೀಘ್ರದಲ್ಲೇ ಏಕರೂಪ ಸಿವಿಲ್ ಕೋಡ್ (ಯುಸಿಸಿ) ಯನ್ನು ಪರಿಚಯಿಸಲಿದೆ ಎಂದು ಸ್ವಾಮಿ ಹೇಳಿದ್ದಾರೆ.ಹೆಚ್ಚುತ್ತಿರುವ ಜನಸಂಖ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಸ್ವಾಮಿ, 2025 ರ ವೇಳೆಗೆ ಭಾರತ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿ ಚೀನಾವನ್ನು ಹಿಂದಿಕ್ಕಲಿದೆ ಎಂದು ಹೇಳಿದರು.

Comments are closed.