ಅಂತರಾಷ್ಟ್ರೀಯ

ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಸ್ಫೋಟಗೊಂಡು ಪತನವಾದ ಸ್ಥಳವನ್ನು ಪತ್ತೆ ಹಚ್ಚಿದ್ದ ಭಾರತೀಯ ಟೆಕ್ಕಿ

Pinterest LinkedIn Tumblr

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಹತ್ವಾಕಾಂಕ್ಷೆಯ ಯೋಜನೆ ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ಪತ್ತೆ ಹಚ್ಚಲಾಗಿದೆ. ಲ್ಯಾಂಡರ್ ಸ್ಪೋಟಗೊಂಡ ಸ್ಥಳದ ಛಾಯಾಚಿತ್ರವನ್ನು ಅಮೆರಿಕದ ‘ನಾಸಾ’ ಬಿಡುಗಡೆ ಮಾಡಿದೆ. ಆದರೆ, ಈ ಸ್ಥಳವನ್ನು ಪತ್ತೆ ಹಚ್ಚಿದ ವ್ಯಕ್ತಿ ಯಾರು? ಎಂಬ ವಿಚಾರ ಇದೀಗ ಎಲ್ಲೆಡೆ ಕುತೂಹಲಕ್ಕೆ ಕಾರಣವಾಗಿದೆ.

ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಸ್ಫೋಟಗೊಂಡು ಪತನವಾದ ಸ್ಥಳವನ್ನು ಪತ್ತೆ ಹಚ್ಚಿದ್ದು ಓರ್ವ ಭಾರತೀಯ. ತಮಿಳುನಾಡಿನ ಚೆನ್ನೈ ಮೂಲದ 33 ವರ್ಷದ ಟೆಕ್ಕಿ ಹಾಗೂ ಹವ್ಯಾಸಿ ಬಾಹ್ಯಾಕಾಶ ಉತ್ಸಾಹಿ ‘ಷನ್ಮುಖ ಸುಬ್ರಮಣ್ಯಂ’ ಎಂಬುದು ಈ ಎಲ್ಲಾ ಕುತೂಹಲಕ್ಕೆ ಕಾರಣ.

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಈತನ ಕೆಲಸಕ್ಕೆ ತನ್ನ ಟ್ವಿಟರ್ ಖಾತೆಯಲ್ಲಿ ಮೆಚ್ಚುಗೆಯನ್ನೂ ಸಹ ಸೂಚಿಸಿದೆ. ಚಂದ್ರನ ದಕ್ಷಿಣ ಧೃವದ ಅಧ್ಯಯನಕ್ಕಾಗಿ ಇಸ್ರೋ ಸಂಸ್ಥೆ ಕಳೆದ ಜುಲೈ ತಿಂಗಳಿನಲ್ಲಿ ಚಂದ್ರಯಾನ-2 ಯೋಜನೆಯನ್ನು ಕೈಗೊಂಡಿತ್ತು. ಆದರೆ, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಭೂ ಸ್ಪರ್ಶ ಮಾಡಲು ಇನ್ನೂ ಕೇವಲ 2.1 ಕಿಮೀ ದೂರದಲ್ಲಿ ಇದ್ದಾಗ ಲ್ಯಾಂಡರ್​ ಅನಿರೀಕ್ಷಿತವಾಗಿ ಸ್ಪೋಟಗೊಂಡಿತ್ತು.

Comments are closed.