ಮುಂಬೈ

ಸೂಟ್​ಕೇಸ್‌ನಲ್ಲಿ ವ್ಯಕ್ತಿಯ ಮೃತದೇಹದ ತುಂಡು ಪತ್ತೆ.

Pinterest LinkedIn Tumblr

ಮುಂಬೈ : ಅಪರಿಚಿತ ವ್ಯಕ್ತಿಯ ಮೃತದೇಹದ ತುಂಡುಗಳನ್ನು ಸೂಟ್​ಕೇಸ್​ನಲ್ಲಿ ತುಂಬಿ ಸಮುದ್ರಕ್ಕೆ ಎಸೆದ ಘಟನೆ ಮುಂಬೈನಲ್ಲಿ ನಡೆದಿದೆ. ಸೂಟ್​ಕೇಸನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅದರೊಳಗಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಮುಂಬೈನ ಮಹೀಂ ಸಮುದ್ರದ ತೀರದಲ್ಲಿ ಓಡಾಡುತ್ತಿದ್ದವರಲ್ಲಿ ಒಬ್ಬರಿಗೆ ಅಲ್ಲೇ ದಡದಲ್ಲಿ ಬಿದ್ದಿದ್ದ ಕಪ್ಪುಬಣ್ಣದ ಸೂಟ್​ಕೇಸ್ ಕಂಡಿತ್ತು. ದೊಡ್ಡದಾಗಿದ್ದ ಮತ್ತು ಹೊಸತಾಗಿದ್ದ ಸೂಟ್​ಕೇಸನ್ನು ಅಲ್ಲೇಕೆ ಎಸೆಯಲಾಗಿದೆ ಎಂಬ ಅನುಮಾನದಿಂದ ಈ ವಿಷಯವನ್ನು ಆ ವ್ಯಕ್ತಿ ಸ್ಥಳೀಯ ಪೊಲೀಸರಿಗೆ ತಿಳಿಸಿದ್ದಾನೆ.

ಮಹೀಂ ಸಮುದ್ರ ತೀರಕ್ಕೆ ಆಗಮಿಸಿದ ಪೊಲೀಸರು ಸೂಟ್​ಕೇಸನ್ನು ಪರಿಶೀಲಿಸಿದ್ದಾರೆ. ಸೂಟ್​ಕೇಸ್ ತೆರೆದು ನೋಡಿದಾಗ ಮುರಿದ ಕೈಗಳು, ಕಾಲಿನ ತುಂಡು ಮತ್ತು ಗಂಡಿನ ಖಾಸಗಿ ಭಾಗಗಳನ್ನು ಪ್ಲಾಸ್ಟಿಕ್​ ಬ್ಯಾಗ್​ನಲ್ಲಿ ಹಾಕಿ ಸೂಟ್​ಕೇಸ್​ನೊಳಗಿಟ್ಟಿರುವುದು ಗೊತ್ತಾಯಿತು. ಆ ಮೃತವ್ಯಕ್ತಿ ಯಾರೆಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

ಮೃತದೇಹದ ಉಳಿದ ಭಾಗಗಳ ಹುಡುಕಾಟಕ್ಕಾಗಿ ಸ್ಥಳೀಯ ಮೀನುಗಾರರು ಮತ್ತು ಪೊಲೀಸರ ತಂಡವೊಂದನ್ನು ರಚಿಸಲಾಗಿದೆ. ಅಲ್ಲದೆ, ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಹಾಗೇ, ನಾಪತ್ತೆಯಾದವರ ಬಗ್ಗೆ ದಾಖಲಾಗಿರುವ ದೂರುಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.