ಕರಾವಳಿ

ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ, ಸೋಲು ಗೆಲುವು ಮುಖ್ಯವಲ್ಲ : ಟಿ.ಎನ್. ಶಿವಶಂಕರ

Pinterest LinkedIn Tumblr

ನಾಲ್ಕು ಜಿಲ್ಲೆಯ ಗೃಹರಕ್ಷಕರ ವೃತ್ತಿಪರ ಕ್ರೀಡಾಕೂಟಕ್ಕೆ ಚಾಲನೆ

ಮಂಗಳೂರು : ಗೃಹರಕ್ಷಕರ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟ 2019 ಉದ್ಘಾಟನಾ ಸಮಾರಂಭ ಡಿಸೆಂಬರ್ 1 ರಂದು ಪೊಲೀಸ್ ಪೆರೇಡ್ ಮೈದಾನದಲ್ಲಿ ನಡೆಯಿತು.

ತುಕಡಿ ನಾಯಕರಾದ ವಸಂತ್ ಕುಮಾರ್ ಇವರ ನೇತೃತ್ವದಲ್ಲಿ ಅತಿಥಿಗಳಿಗೆ ಗೌರವ ವಂದನೆಯನ್ನು ನೀಡಲಾಯಿತು. ಕ್ರೀಡಾ ಜ್ಯೋತಿಯ ಆಗಮನವನ್ನು ಚೇತನ್, ಮಂಗಳೂರು ಘಟಕ ಇವರು ನಿರ್ವಹಿಸಿದರು. ಉಪ ಸಮಾದೇಷ್ಟ ರಮೇಶ್ ಪ್ರತಿಜ್ಞಾ ವಿಧಿ ಭೋದಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಅಗ್ನಿಶಾಮಕಾಧಿಕಾರಿ ಟಿ.ಎನ್. ಶಿವಶಂಕರ ನೆರವೇರಿಸಿ ಮಾತನಾಡಿ ನಾಲ್ಕು ಜಿಲ್ಲೆಯವರು ಸೇರಿ ಆಟ ಆಡುವ ಈ ಕ್ರೀಡಾಕೂಟವು ಒಂದು ಹಬ್ಬ. ಸಮವಸ್ತ್ರ ಧರಿಸುವ ಸಿಬ್ಬಂದಿಗಳಿಗೆ ಕ್ರೀಡೆಯೂ ಅತಿ ಅಗತ್ಯ ಎಂದು ನುಡಿದರು. ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ, ಸೋಲು ಗೆಲುವು ಮುಖ್ಯವಲ್ಲ ಎಂದರು.

ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಠ ಡಾ| ಮುರಲೀ ಮೋಹನ್ ಚೂಂತಾರು ಇವರು ಮಾತನಾಡಿ ಇಂದು ನಾಳೆ ಕ್ರೀಡಾ ಸ್ಪೂರ್ತಿಯಿಂದ ಕ್ರೀಡಾ ಕೂಟದಲ್ಲಿ ಆಡಬೇಕು. ವೈಯಕ್ತಿಕ ಗೆಲುವಿಗಿಂತ ಕ್ರೀಡೆ ಗೆಲ್ಲಬೇಕು ಹಾಗೂ ಪ್ರಾಮಾಣಿಕವಾಗಿ ಆಟ ಆಡಿ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹೆಚ್ಚಿಸಬೇಕು ಎಂದು ನುಡಿದರು.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಗೃಹರಕ್ಷಕರು ಉತ್ತಮ ಆಟ ಆಡಿ ಜಿಲ್ಲೆಯ ಘನತೆ ಹೆಚ್ಚಿಸಿ ಎಂದರು.

ರಮೇಶ್ ಡೆಪ್ಯೂಟಿ ಕಮಾಂಡೆಂಟ್, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಇವರು ಸ್ವಾಗತಿಸಿದರು. ಮಾರ್ಕ್‍ಶೇರ್, ಘಟಕಾಧಿಕಾರಿ, ಮಂಗಳೂರು ಘಟಕ ವಂದನಾರ್ಪಣೆ ಮಾಡಿದರು ಕಛೇರಿ ಅಧೀಕ್ಷಕರಾದ ರತ್ನಾಕರ್, ಮಾರ್ಕ್‍ಶೇರ್, ಘಟಕಾಧಿಕಾರಿ ಹಾಗೂ ನಾಲ್ಕು ಜಿಲ್ಲೆಯ ಗೃಹರಕ್ಷಕ ಮತ್ತು ಗೃಹರಕ್ಷಕಿಯರುಗಳು ಉಪಸ್ಥಿತರಿದ್ದರು.

Comments are closed.