ನವದೆಹಲಿ: ನ್ಯೂಯಾರ್ಕ್ನ ಗಾಲಾದಲ್ಲಿ ಮಂಗಳವಾರ ನಡೆದ 47ನೇ ಎಮ್ಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನವಾಜುದ್ದೀನ್ ಸಿದ್ದಿಕಿ, ಕರಣ್ ಜೋಹರ್, ಝೋಯಾ ಅಖ್ತರ್, ರಾಧಿಕಾ ಆಪ್ಟೆ, ಕುಬ್ರ ಸೈಟ್ ಅವರಿಗೆ ರೆಡ್ ಕಾರ್ಪೆಟ್ ಸ್ವಾಗತ ದೊರೆಯಿತು. ಈ ಪ್ರಶಸ್ತಿಯು ಅಂತರಾಷ್ಟ್ರೀಯ ಮಟ್ಟದ ಖ್ಯಾತಿ ಪಡೆದಿದೆ.
ಯುಕೆಯ ಜನಪ್ರಿಯ ಶೋ ಮ್ಯಾಕ್ ಮಾಫಿಯಾ ಮತ್ತು ಸ್ಯಾಕ್ರಡೆ ಗೇಮ್ಸ್ ಎಂಬ ಶೋಗಳಲ್ಲಿ ಸಿದ್ದಿಕಿ ನಟಿಸುತ್ತಿದ್ದಾರೆ. ಸ್ಯಾಕ್ರಡೆ ಗೇಮ್ಸ್ ಶೋನಲ್ಲಿ ಮುಂಬೈನ ಭೂಗತ ಲೋಕದ ಗಣೇಶ್ ಗಾಯ್ತೊಂಡೆ ಪಾತ್ರ ನಿಭಾಯಿಸುತ್ತಿದ್ದರೆ, ಮ್ಯಾಕ್ ಮಾಫಿಯಾ ಶೋನಲ್ಲಿ ರಷ್ಯಾ ಮೂಲದ ಭೂಗತ ದೊರೆಯ ಭಾರತದ ಪಾಲುದಾರನ ಪಾತ್ರ ನಿಭಾಯಿಸುತ್ತಿದ್ದಾರೆ.
ಮ್ಯಾಕ್ ಮಾಫಿಯಾ ಶೋಗೆ ಪ್ರತಿಷ್ಠಿತ ಎಮ್ಮಿ ಪ್ರಶಸ್ತಿ ದೊರೆತಿದ್ದು, ತಂಡದ ಜತೆ ಪ್ರಶಸ್ತಿ ಪಡೆಯಲು ನ್ಯೂಯಾರ್ಕ್ನ ಸಮಾರಂಭದಲ್ಲಿ ಸಿದ್ದಿಕಿ ವೇದಿಕೆಯೇರಿದ್ದರು. ಮ್ಯಾಕ್ ಮಾಫಿಯಾ ಶೋನ ನಿರ್ಮಾಪಕ ಡಿಕ್ಸಿ ಲಿಂಡರ್ ಮತ್ತು ನಿದೇರ್ಶಕ ಜೇಮ್ಸ್ ವಾಟ್ಕಿನ್ಸ್ ಜತೆ ಪ್ರಶಸ್ತಿ ಪಡೆದು ಸಿದ್ಧಿಖಿ ಸಂಭ್ರಮಿಸಿದರು.
ಪ್ರಶಸ್ತಿ ಪಡೆದ ತಂಡದ ಜತೆಗಿನ ಫೋಟೋವನ್ನು ಜಾಲತಾಣದಲ್ಲಿ ಹಂಚಿಕೊಂಡ ಸಿದ್ದಿಕಿ, ಇದು ನಿಜವಾದ ಸಂತೋಷದ ಸಮಯ, ನನ್ನ ನೆಚ್ಚಿನ ನಿದೇರ್ಶಕ ಜೇಮ್ಸ್ ವಾಟ್ಕಿನ್ಸ್ ಜತೆ ಪ್ರಶಸ್ತಿ ಪಡೆಯುತ್ತಿರುವುದು ಸಂತಸವಾಗಿದೆ. ಇಡೀ ತಂಡಕ್ಕೆ ಅಭಿನಂದನೆಗಳು ಎಂದಿದ್ದಾರೆ.
ನಟಿ ರಾಧಿಕಾ ಆಪ್ಟೆ ನಟಿಸುತ್ತಿರುವ ಲಸ್ಟ್ ಸ್ಟೋರಿಸ್ ಶೋ ಎರಡು ವಿಭಾಗಗಳಲ್ಲಿ ನಾಮಿನೇಷನ್ ಪಟ್ಟಿಯಲ್ಲಿತ್ತು. ಸ್ಯಾಕ್ರಡೆ ಗೇಮ್ಸ್ ಶೋ ಉತ್ತಮ ಕೌಟುಂಬಿಕ ವಿಭಾಗದಲ್ಲಿ ಮತ್ತು ದಿ ರೆಮಿಕ್ಸ್ ಶೋ ಸ್ಕ್ರಿಪ್ಟ್ ಇಲ್ಲದ ನೇರ ನಿರೂಪಣೆಯ ವಿಭಾಗದಲ್ಲಿ ಸ್ಥಾನ ಪಡೆದಿದ್ದವು.
.
Comments are closed.