ವೈದ್ಯಕೀಯ ಪರೀಕ್ಷೆಗಳು ಮತ್ತು ಶಸ್ತ್ರಚಿಕಿತ್ಸೆಗಳು ಕೆಲವೊಮ್ಮೆ ಭಯಾನಕ ಫಲಿತಾಂಶ ನೀಡುತ್ತವೆ. ಈ ಸಂದರ್ಭದಲ್ಲಿ ವೈದ್ಯರು ಅನೇಕ ವಿಲಕ್ಷಣ ವಿಷಯಗಳನ್ನು ಎದುರಿಸಬೇಕಾಗುತ್ತದೆ.
ಚೀನಾದ ಜೆಜಿಯಾಂಗ್ ಪ್ರಾಂತ್ಯದಲ್ಲಿ ಭಯಾನಕ ಮತ್ತು ವೈಜ್ಞಾನಿಕ ಚಲನಚಿತ್ರಗಳಲ್ಲಿ ಕಾಣುವಂತಹ ಇಂಥದ್ದೊಂದು ಪ್ರಕರಣ ನಡೆದಿದೆ. ಒಂದು ತಿಂಗಳಿಂದ ಸತತ ತಲೆನೋವಿನಿಂದ ನರಳುತ್ತಿದ್ದ ವ್ಯಕ್ತಿಯೊಬ್ಬನನ್ನು ವೈದ್ಯಕೀಯ ತಪಾಸಣೆ ನಡೆಸಿದಾಗ ಹುಳುಗಳ ಸೋಂಕಿನಿಂದ ಆತನಿಗೆ ತೆನಿಯಾಸಿಸ್ ಎಂಬ ಕಾಯಿಲೆ ಇರುವುದು ಪತ್ತೆಯಾಗಿದೆ.
ಆತನ ಪ್ರಮುಖ ಅಂಗಾಂಗಗಳ ಸ್ಕ್ಯಾನ್ ಮಾಡಿದಾಗ ಆಸ್ಪತ್ರೆಯ ಇಡೀ ವೈದ್ಯಕೀಯ ಸಿಬ್ಬಂದಿ ದಂಗಾಗಿತ್ತು. ರೋಗಿಯ ಮೆದುಳು, ಎದೆ ಮತ್ತು ಶ್ವಾಸಕೋಶಗಳಲ್ಲಿ 700ಕ್ಕೂ ಹೆಚ್ಚು ಹುಳುಗಳು ಇರುವುದು ಕಂಡುಬಂದಿದೆ.
ಹಂದಿ ಮಾಂಸ ಸೇವನೆ ಇದಕ್ಕೆ ಕಾರಣ ಎಂದು ವೈದ್ಯರು ಹೇಳಿದ್ದು, ಹುಳುಗಳು ಆತನ ಅಂಗಾಂಗಗಳಿಗೆ ಹಾನಿಯನ್ನು ಉಂಟುಮಾಡಿವೆ ಎಂದು ತಿಳಿಸಿದ್ದಾರೆ. ಸರಿಯಾಗಿ ಬೇಯಿಸದ ಹಂದಿ ಮಾಂಸದಲ್ಲಿ ಇರುವ ಹುಳುಗಳ ಮೊಟ್ಟೆಗಳನ್ನು ತಿನ್ನುವುದರಿಂದ ಮನುಷ್ಯನ ದೇಹದಲ್ಲಿ ಹುಳುಗಳು ಉತ್ಪತ್ಪಿಯಾಗುತ್ತವೆ ಎಂದು ಹೇಳಲಾಗಿದೆ.

Comments are closed.