ಕರಾವಳಿ

ಪ್ಲಾಸ್ಟಿಕ್ ನಿಷೇಧ : ನವೆಂಬರ್ 30ರ ಒಳಗಾಗಿ ಸ್ವಯಂ ಪ್ರೇರಿತವಾಗಿ ಬಳಕೆ ನಿಲ್ಲಿಸದಿದ್ದರೆ ದಂಡ ವಸೂಲಿ

Pinterest LinkedIn Tumblr

ಮಂಗಳೂರು ನವೆಂಬರ್ 22 : ಏಕಬಳಕೆ ಪ್ಲಾಸ್ಟಿಕ್ ವಸ್ತುಗಳಲ್ಲಿ ಆಹಾರ ಪದಾರ್ಥಗಳ ಸೇವನೆಯಿಂದ ಆರೋಗ್ಯಕ್ಕೆ ಹಾನಿ ಆಗುವುದರಿಂದ, ಏಕಬಳಕೆ ಪ್ಲಾಸ್ಟಿಕ್ ವಸ್ತುಗಳು ರಿಸೈಕಲ್ ಭೂ ಆಗದಿರುವುದರಿಂದ, ಭೂಮಿಯಲ್ಲಿ ಕರಗದೆ ಇರುವುದರಿಂದ ಮತ್ತು ಸುಟ್ಟಲ್ಲಿ ಕ್ಯಾನ್ಸರ್ ಆಗುವುದರಿಂದ ಪುರಸಭಾ ವ್ಯಾಪ್ತಿಯ ನಾಗರಿಕರು ಮತ್ತು ಉದ್ದಿಮೆದಾರರು ನವೆಂಬರ್ 30ರ ಒಳಗಾಗಿ ಸ್ವಯಂ ಪ್ರೇರಿತವಾಗಿ ಬಳಕೆಯನ್ನು ಮತ್ತು ಖರೀದಿಯನ್ನು ನಿರಾಕರಿಸುವ ಕುರಿತಾಗಿ ಕಾರ್ಯ ಪ್ರವೃತ್ತರಾಗಬೇಕು. ತದನಂತರ ಮೂಡಬಿದ್ರೆ ಪುರಸಭಾ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಮತ್ತು ಬಳಕೆ ಮಾಡಿದಲ್ಲಿ ಪುರಸಭೆಯಿಂದ ಜಪ್ತಿ ಮಾಡಿಕೊಂಡು ನಿಗದಿತ ದಂಡ ವಿಧಿಸಲಾಗುವುದು ಎಂದು ಮುಖ್ಯಾಧಿಕಾರಿ ಮೂಡುಬಿದಿರೆ ಪುರಸಭೆ ಪ್ರಕಟಣೆ ತಿಳಿಸಿದೆ.

Comments are closed.