ಅಂತರಾಷ್ಟ್ರೀಯ

37 ಸಾವಿರ ಅಡಿ ಎತ್ತರದಲ್ಲಿ ನಡೆದ ಮದುವೆ

Pinterest LinkedIn Tumblr


ಮೆಲ್ಬರ್ನ್: ನ್ಯೂಜಿಲೆಂಡ್ ಮಹಿಳೆ ಹಾಗೂ ಆಸ್ಟ್ರೇಲಿಯಾದ ವ್ಯಕ್ತಿ ವಿಮಾನದಲ್ಲಿ ಪ್ರಯಾಣಿಸುತ್ತ 37 ಸಾವಿರ ಅಡಿ ಎತ್ತರದಲ್ಲಿ ವಿವಾಹವಾಗಿದ್ದಾರೆ.

ಕಮರ್ಷಿಯಲ್ ಜೆಟ್‍ಸ್ಟಾರ್ ಫ್ಲೈಟ್ 201ನಲ್ಲಿ ಪ್ರೇಮಿಗಳಾದ ನ್ಯೂಜಿಲೆಂಡ್‍ನ ಡೇವಿಡ್ ವ್ಯಾಲಿಯಂಟ್ ಹಾಗೂ ಆಸ್ಟ್ರೇಲಿಯಾದ ವ್ಯಕ್ತಿ ಕ್ಯಾಥೆ ವಿವಾಹವಾಗಿದ್ದಾರೆ. ವಿಶೇಷ ಸಂಭ್ರಮಕ್ಕೆ ಸಹ ಪ್ರಯಾಣಿಕರು ಕೂಡ ಸಾಕ್ಷಿಯಾದರು. ಅಷ್ಟೇ ಅಲ್ಲದೆ ಈ ಮದುವೆಗೆ ವಿಮಾನಯಾನ ಕಂಪನಿ ದಂಪತಿಗಳಿಂದ ಯಾವುದೇ ರೀತಿಯ ಹೆಚ್ಚುವರಿ ಶುಲ್ಕ ವಿಧಿಸಲಿಲ್ಲ. ಆದರೆ ಅವರ ಇಚ್ಛೆಗೆ ಸಂಪೂರ್ಣ ಬೆಂಬಲ ನೀಡಿದೆ.

ವಿಮಾನವು ಸಿಡ್ನಿಯಿಂದ ಹೊರಟ ತಕ್ಷಣ, ವಧು-ವರರು ತಮ್ಮ ಪ್ರೀತಿ ವ್ಯಕ್ತಪಡಿಸಿದರು. ಬಳಿಕ ಒಟ್ಟಿಗೆ ಜೀವನ ನಡೆಸುವ ಭರವಸೆ ನೀಡಿದರು. ಹೀಗಾಗಿ ಪ್ರಯಾಣದ ಅರ್ಧ ದಾರಿಯಲ್ಲಿ ವಿವಾಹ ಸಮಾರಂಭವನ್ನು ನಡೆಸಲಾಯಿತು.

ಮದುವೆಯ ನಂತರ ವಧು ಕ್ಯಾಥಿ ಮಾತನಾಡಿ, ಇದು ಅತ್ಯಂತ ಅದ್ಭುತ ಅನುಭವ. ನನ್ನ ಜೀವನದುದ್ದಕ್ಕೂ ನಾವು ಅದನ್ನು ನೆನಪಿಸಿಕೊಳ್ಳುತ್ತೇವೆ. 2011ರಲ್ಲಿ ಡೇವಿಸ್ ಪರಿಚಯವಾಗಿದ್ದರು. ಎರಡು ವರ್ಷಗಳ ನಂತರ ಅಂದ್ರೆ 2013ರಲ್ಲಿ ನಾನು ಸಿಡ್ನಿ ವಿಮಾನ ನಿಲ್ದಾಣದಲ್ಲಿ ಅವರನ್ನು ಭೇಟಿಯಾದೆ. ವಿಮಾನ ಪ್ರಯಾಣದ ಮೇಲಿನ ನಮ್ಮ ಪ್ರೀತಿ ನಮ್ಮನ್ನು ಈ ಹಂತಕ್ಕೆ ಕರೆತಂದಿತು ಎಂದು ಹೇಳಿಕೊಂಡಿದ್ದಾರೆ.

ನನ್ನ ಮದುವೆಯಲ್ಲಿ ಸ್ಮರಣೀಯವಾದದ್ದನ್ನು ಮಾಡಲು ಬಯಸಿದ್ದೆ. ನನ್ನ ಕಲ್ಪನೆಯನ್ನು ಜೆಟ್‍ಸ್ಟಾರ್ ನ ಫೇಸ್‍ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದೆ. ಇದಕ್ಕೆ ಜೆಟ್‍ಸ್ಟಾರ್ ಒಪ್ಪಿಕೊಂಡರು ಮತ್ತು ಹಣವಿಲ್ಲದೆ ಎಲ್ಲಾ ವ್ಯವಸ್ಥೆ ಮಾಡಿದರು ಎಂದು ಕ್ಯಾಥಿ ತಿಳಿಸಿದ್ದಾರೆ.

ಈ ಕುರಿತು ಜೆಟ್‍ಸ್ಟಾರ್ ಸಿಬ್ಬಂದಿ ರಾಬಿನ್ ಹಾಲ್ಟ್ ಮಾತನಾಡಿ, ಪ್ರಯಾಣಿಕರು ಡೇವಿಡ್ ಮತ್ತು ಕ್ಯಾಥಿ ಅವರ ಮದುವೆಯನ್ನು ಆನಂದಿಸಿದ್ದಾರೆ. ಈ ವಿವಾಹದ ಮಾಹಿತಿಯನ್ನು ಪ್ರಯಾಣಿಕರಿಗೆ ಇ-ಮೇಲ್ ಮೂಲಕ ಮೊದಲೇ ನೀಡಲಾಗಿತ್ತು. ಒಂದು ವೇಳೆ ಅವರು ಬಯಸಿದರೆ ವಿಮಾನವನ್ನು ಬದಲಾಯಿಸಲು ಸಹ ಅವಕಾಶ ಕಲ್ಪಿಸಲಾಗಿತ್ತು. ವಿವಾಹಕ್ಕಾಗಿ ದಂಪತಿಗಳಿಂದ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಡೆದಿಲ್ಲ ಎಂದು ಹೇಳಿದ್ದಾರೆ.

Comments are closed.