ರಾಷ್ಟ್ರೀಯ

ಸುಮಾರು 7 ಲಕ್ಷ ಕೇಂದ್ರ ಸರ್ಕಾರಿ ನೌಕರಿಗಳು ಖಾಲಿ

Pinterest LinkedIn Tumblr


ನವದೆಹಲಿ: ಕಳೆದ ವರ್ಷ ಮಾರ್ಚ್ ಒಂದಕ್ಕೆ ಕೇಂದ್ರ ಸರ್ಕಾರ ವಿವಿಧ ಇಲಾಖೆಗಳಲ್ಲಿ ಸುಮಾರು ಏಳು ಲಕ್ಷ ಉದ್ಯೋಗಗಳು ಖಾಲಿಯಾಗಿವೆ ಎಂದು ಗುರುವಾರ ರಾಜ್ಯಸಭೆಗೆ ಮಾಹಿತಿ ನೀಡಲಾಗಿದೆ.

ಒಟ್ಟು 6,83,823 ಉದ್ಯೋಗಗಳು ಖಾಲಿ ಇದ್ದು, ಅವುಗಳಲ್ಲಿ 5,74,289 ಕೆಲಸಗಳು ಸಿ ದರ್ಜೆಯದ್ದಾಗಿವೆ. ಉಳಿದಂತೆ ಬಿ ದರ್ಜೆಯಲ್ಲಿ 89,638 ಹಾಗೂ ಎ ದರ್ಜೆಯಲ್ಲಿ 19,896 ಉದ್ಯೋಗಗಳು ಖಾಲಿ ಇವೆ ಎಂದು ಸಚಿವ ಜಿತೇಂದ್ರ ಸಿಂಗ್ ಅವರು ರಾಜ್ಯಸಭೆಗೆ ಲಿಖಿತ ಮಾಹಿತಿ ನೀಡಿದ್ದಾರೆ.

ಖಾಲಿ ಇರುವ ಉದ್ಯೋಗಕ್ಕೆ ಸಿಬ್ಬಂದಿ ಆಯ್ಕೆ ಆಯೋಗವು (ಎಸ್​ಎಸ್​ಸಿ) ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, 2019-20ನೇ ಸಾಲಿನಲ್ಲಿ 1,05,338 ಸ್ಥಾನಗಳನ್ನು ಭರ್ತಿ ಮಾಡಲಿದೆ ಎಂದು ತಿಳಿಸಿದ್ದಾರೆ.

2017-18ರ ಅವಧಿಯಲ್ಲಿ, ವಿವಿಧ ಗ್ರೂಪ್ ಸಿ ಮತ್ತು ಲೆವೆಲ್ -1 ವರ್ಗದ 1,27,573 ಸಂಯೋಜಿತ ಖಾಲಿ ಹುದ್ದೆಗಳಿಗೆ ಕೇಂದ್ರೀಕೃತ ಉದ್ಯೋಗ ಅಧಿಸೂಚನೆಗಳನ್ನು (ಸಿಇಎನ್) ರೈಲ್ವೆ ಮತ್ತು ರೈಲ್ವೆ ನೇಮಕಾತಿ ಮಂಡಳಿ(ಆರ್‌ಆರ್‌ಬಿ) ಸಚಿವಾಲಯವು ಹೊರಡಿಸಿದ್ದು, ಎರಡು ವರ್ಷದಲ್ಲಿ ಹೊಸ ಉದ್ಯೋಗಗಳ ಸೃಷ್ಟಿಯಾಗಲಿವೆ ಎಂದು ಸಚಿವರು ತಿಳಿಸಿದರು.

ಇಲಾಖೆ ಉದ್ಯೋಗಗಳಿಗೆ ಪರೀಕ್ಷೆಯನ್ನು ಆಯೋಜಿಸಲಾಗಿದೆ ಮತ್ತು 19,522 ಖಾಲಿ ಸ್ಥಾನಗಳನ್ನು ಭರ್ತಿ ಮಾಡಲಾಗಿದೆ. ಉಳಿದಂತೆ ಹಲವು ವಿಭಾಗಗಳ ಉದ್ಯೋಗಗಳ ನೇಮಕಾತಿ ಎಸ್​ಎಸ್​ಸಿ ಮೂಲಕ ನಡೆಯಲಿದೆ ಎಂದು ಜಿತೇಂದ್ರ ಸಿಂಗ್ ತಿಳಿಸಿದರು.

4,08,591 ಉದ್ಯೋಗಗಳನ್ನು ನೇಮಕಾತಿ ಪ್ರಕ್ರಿಯೆ ಮೂಲಕ ಎಸ್​ಎಸ್​ಸಿ, ಆರ್​ಆರ್​ಬಿ ಭರ್ತಿ ಮಾಡಲಿದೆ. ಮತ್ತು ಇಲಾಖಾ ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿದೆ ಎಂದು ಸಿಂಗ್ ತಿಳಿಸಿದರು.

Comments are closed.