ಅಂತರಾಷ್ಟ್ರೀಯ

ಪಾಕಿಸ್ತಾನದಲ್ಲಿ 1 ಕೆ.ಜಿ. ಟೊಮೆಟೋಗೆ 320 ರೂ.

Pinterest LinkedIn Tumblr


ಕರಾಚಿ: ಪಾಕಿಸ್ಥಾನದ ಬಂದರು ನಗರಿ ಕರಾಚಿಯಲ್ಲಿ ತರಕಾರಿ ಮಾರುಕಟ್ಟೆಗಿಳಿದ ಜನರು ಶನಿವಾರ ಟೊಮೆಟೋ ದರ ಕೇಳಿ ಹೌಹಾರುವಂತಾಗಿದೆ. ಕಾರಣ ಕೆ.ಜಿ. ಒಂದಕ್ಕೆ ಅದರ ಬೆಲೆ ಬರೋಬ್ಬರಿ 320 ರೂ. ಆಗಿತ್ತು. ಇದೇ ವೇಳೆ ಈರುಳ್ಳಿ ಬೆಲೆ 80 ರೂ. ಆಗಿದೆ. ಟೊಮೆಟೋ ಬೆಲೆ ಒಂದೇ ದಿನದಲ್ಲಿ 160 ರೂ. ಏರಿಕೆ ಕಂಡಿದ್ದು ಬೆಲೆ ಇಷ್ಟೊಂದು ಏರಲು ಕಾರಣವಾಗಿದೆ.

ಟೊಮೆಟೋ ಬೆಲೆ ಏರಿದ್ದರಿಂದ ಇಡೀ ದಿನದಲ್ಲಿ ಇಬ್ಬರು ಗ್ರಾಹಕರು ಮಾತ್ರ ಅರ್ಧ ಕಿಲೋ ಟೊಮೆಟೋ ಖರೀದಿಸಿದ್ದಾರೆ. 12-15 ಗ್ರಾಹಕರು 250 ಗ್ರಾಂ ಟೊಮೆಟೋ ಖರೀದಿಸಿದ್ದಾರೆ ಎಂದು ಮಾರಾಟಗಾರರೊಬ್ಬರು ಹೇಳಿದ್ದಾರೆ. ಅಂದಹಾಗೆ ಶುಕ್ರವಾರ ಟೊಮೆಟೋ ದರ 120-140 ರೂ. ಇತ್ತು. ಕರಾಚಿಗೆ ಕ್ವೆಟ್ಟಾ ಹಾಗೂ ಸ್ವಾತ್‌ ಭಾಗದಿಂದ ಟೊಮೆಟೋ ಪೂರೈಕೆಯಾಗುತ್ತದೆ. ಅಲ್ಲಿಂದ ಪೂರೈಕೆ ತೀವ್ರವಾಗಿ ಇಳಿದಿದೆ.

ಇದೇ ವೇಳೆ ಕ್ಸಾಪ್ಸಿಕಂ ದರವೂ ಕೆ.ಜಿ. ಒಂದಕ್ಕೆ 240 ರೂ. ಆಗಿದೆ. ಕಳೆದ ವಾರ ಇದರ ದರ ಅತ್ಯಧಿಕ 280-320 ರೂ. ಆಗಿತ್ತು. ಇನ್ನು ಕ್ಯಾಬೇಜ್‌, ಬದನೆ, ಕ್ಯಾರೆಟ್‌ ಎಲ್ಲದರ ದರವೂ 60-80 ರೂ. ಆಸುಪಾಸಿನಲ್ಲಿದೆ. ಕಳೆದ ವಾರ ಇವುಗಳ ದರ 100 ರೂ. ಸನಿಹದಲ್ಲಿತ್ತು.

ಪಾಕಿಸ್ಥಾನದಲ್ಲಿ ತರಕಾರಿ ದರ ದಿನೇ ದಿನೇ ಏರುತ್ತಿರುವುದು ಅಲ್ಲಿನ ಆಡಳಿತ ಮತ್ತು ಜನರಿಗೆ ತಲೆನೋವು ತರಿಸಿದೆ. ಈ ಮೊದಲು ಭಾರತದಿಂದ ತರಕಾರಿ ಪೂರೈಕೆಯಾಗುತ್ತಿದ್ದು, ಈಗ ಅದು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಇದರಿಂದ ಮಾರುಕಟ್ಟೆ ದರ ಬೇಕಾಬಿಟ್ಟಿಯಾಗಿದ್ದು, ಗ್ರಾಹಕರು ಖರೀದಿಗೆ ಬವಣೆ ಪಡುವಂತಾಗಿದೆ.

Comments are closed.