ಅಂತರಾಷ್ಟ್ರೀಯ

‘ಬಾಗ್ದಾದಿ’ ನಂತರ ಐಸಿಸ್ ನ ವಾರಸುದಾರ ಬಂದೇಬಿಟ್ನಾ?!

Pinterest LinkedIn Tumblr


ಏಜನ್ಸಿಸ್‌: ಇಡೀ ವಿಶ್ವವೇ ಐಸಿಸ್‌ ಉಗ್ರ ಸಂಘಟನೆಯ ಮುಖ್ಯಸ್ಥ ಅಬೂಬಕ್ಕರ್- ಅಲ್- ಬಾಗ್ದಾದಿಯ ಅಂತ್ಯದಿಂದ ಸಾಮಾಧಾನ ವ್ಯಕ್ತಪಡಿಸಿರುವ ಸಂದರ್ಭದಲ್ಲಿ ಆಘಾತಕಾರಿ ಬೆಳವಣಿಗೆಯೊಂದು ನಡೆದಿದೆ. ಬಾಗ್ದಾದಿ ಹತ್ಯೆ ಬೆನ್ನಲ್ಲೇ ಬಾಗ್ದಾದಿ ಸ್ಥಾನಕ್ಕೆ ನೂತನ ವಾರಸುದಾರನೊಬ್ಬನ ನೇಮಕವಾಗಿದೆ.

ಅಂದರೆ, ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾ (ಐಸಿಸ್) ಉಗ್ರ ಸಂಘಟನೆಗೆ ನೂತನ ಮುಖ್ಯಸ್ಥನನ್ನು ನೇಮಕ ಮಾಡಲಾಗಿದೆ. ಐಸಿಸ್‍ಗೆ ನೂತನ ನಾಯಕನಾಗಿ ಬಗ್ದಾದಿಯ ಬಲಗೈ ಬಂಟನಾಗಿದ್ದ ‘ಅಬ್ದುಲ್ಲಾ ಖಾರ್ಡಾಶ್’ ಎಂಬುವನನ್ನು ನೇಮಕ ಮಾಡಲಾಗಿದೆ.

ಯಾರಿದು ಅಬ್ದುಲ್ಲಾ ಖಾರ್ಡಾಶ್?
ಖಾರ್ಡಾಶ್ ಇರಾಕಿನ ಮಾಜಿ ಅಧ್ಯಕ್ಷ, ಸರ್ವಾಧಿಕಾರಿ ಸದ್ದಾಂ ಹುಸೇನ್ ಸೈನ್ಯದಲ್ಲಿ ಅಧಿಕಾರಿಯಾಗಿದ್ದ. ಬಾಗ್ದಾದಿ ಹತ್ಯೆಯಾಗಿರುವ ಕುರಿತು ಅಮೆರಿಕ ಘೋಷಣೆ ಮಾಡಿದ ಕೂಡಲೇ ಖಾರ್ಡಾಶ್‌ ಐಸಿಸ್‍ನ ದಿನನಿತ್ಯದ ಕಾರ್ಯವನ್ನು ನಿಯಂತ್ರಿಸುತ್ತಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸ್ಥಳೀಯ ಗುಪ್ತಚರ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ ಪ್ರಕಾರ, ಖಾರ್ಡಾಶ್ ಈಗ ಐಸಿಸ್‍ನ ಹೊಸ ನಾಯಕ ಆಗಲಿದ್ದಾನೆ. ಬಾಗ್ದಾದಿಯಕಳೆದ ಆಗಸ್ಟ್‌ನಲ್ಲಿ ವಾಯುದಾಳಿಯಲ್ಲಿ ಗಾಯಗೊಂಡಾಗಲೇ ಕಾರ್ಡಾಶ್‌ನನ್ನು ಉತ್ತರಾಧಿಕಾರಿಯಾಗಿ ನೇಮಿಸಲಾಗಿತ್ತು ಎನ್ನಲಾಗಿದೆ. ಆ ಸಮಯದಲ್ಲಿ ಬಾಗ್ದಾದಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ. ಅನಾರೋಗ್ಯದ ಕಾರಣ ಬಾಗ್ದಾದಿ ಕೆಲಸದಲ್ಲಿ ಭಾಗವಹಿಸುತ್ತಿರಲಿಲ್ಲ ಎಂದು ಹೇಳಲಾಗಿದೆ.

ಬಾಗ್ದಾದಿ ಮತ್ತು ಖಾರ್ಡಾಶ್ ದೀರ್ಘಕಾಲದ ಸ್ನೇಹಿತರು. ಜೊತೆಗೆ 2003ರಲ್ಲಿ ಅಲ್ ಖೈದಾ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಇರಾಕ್‍ನ ಬಾಸ್ರಾದಲ್ಲಿರುವ ಜೈಲಿನಲ್ಲಿ ಇಬ್ಬರೂ ಒಟ್ಟಿಗೆ ಸೆರೆವಾಸ ಅನುಭವಿಸಿದ್ದರು.

Comments are closed.