ಅಂತರಾಷ್ಟ್ರೀಯ

ಮಗುವಿನ ಪಕ್ಕದಲ್ಲಿ ಭೂತ ಮಲಗಿದೆ ಎಂದು ಭಾವಿಸಿದ ಮಹಿಳೆ, ಮುಂದೆ…!

Pinterest LinkedIn Tumblr


ಸಾಮಾನ್ಯವಾಗಿ ಮನೆಯಲ್ಲಿ ಒಬ್ಬರೇ ಇದ್ದಾಗ ಅದರಲ್ಲೂ ರಾತ್ರಿ ಸಮಯದಲ್ಲಿ ಒಬ್ಬರೇ ಇದ್ದರೆ ಏನೇ ಒಂದು ಸಣ್ಣ ಶಬ್ಧವಾದರೂ ಅಯ್ಯೋ, ಭೂತ ಎನಾದ್ರೂನಾ…. ಎಂದು ಭಾವಿಸುವ ಮಂದಿಯೇ ಹೆಚ್ಚು. ಆದರೆ ಇಲ್ಲೊಬ್ಬ ಮಹಿಳೆ ಸಿಸಿಟಿವಿ ಮೂಲಕ ತನ್ನ ಮಗುವನ್ನು ಮಲಗಿಸಿದ್ದ ಕೋಣೆಯಲ್ಲಿ ಏನನ್ನೂ ಕಂಡು ಮಗುವಿನ ಪಕ್ಕದಲ್ಲಿ ಭೂತ ಮಲಗಿದೆ ಎಂದು ಭಯಭೀತರಾಗಿದ್ದಾರೆ. ಆದರೆ ವಾಸ್ತವತೆಯು ಎಲ್ಲರ ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತದೆ.

ಹೌದು, ಮಹಿಳೆಯೊಬ್ಬರು ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಘಟನೆಯ ಪೋಸ್ಟ್ ವೈರಲ್ ಆಗಿದೆ. ಮಹಿಳೆಯು ತನ್ನ ಮಗು ಮಲಗಿದ್ದ ಕೊಠಡಿಯ ಸಿಸಿಟಿವಿ ನೋಡುವಾಗ ಮಗುವಿನ ಪಕ್ಕದಲ್ಲಿ ಇನ್ನೊಂದು ಪುಟ್ಟ ಮಗು ರೀತಿ ಇರುವುದನ್ನು ಕಂಡು ಅದು ಭೂತ ಎಂದು ಭಾವಿಸಿದ್ದರಂತೆ. ಆದರೆ ಸತ್ಯವೇ ಬೇರೆ…

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿರುವ ಮಹಿಳೆ, ‘ಕಳೆದ ರಾತ್ರಿ ನನ್ನ ಮಗ ಮಲಗಿದ್ದ ಹಾಸಿಗೆಯ ಮೇಲೆ ಮಗುವಿನ ಭೂತ ಇದೇ ಎಂದು ನಾನು ಸಕಾರಾತ್ಮಕವಾಗಿದ್ದೆ. ಬಳಿಕ ನಾನು ನನ್ನ ಮಗ ಮಲಗಿದ್ದ ಸ್ಥಳಕ್ಕೆ ಫ್ಲ್ಯಾಷ್‌ಲೈಟ್‌ನೊಂದಿಗೆ ತೆವಳಲು ಪ್ರಯತ್ನಿಸಿದೆ’. ನಂತರ ನಿಜವಾದ ಟ್ವಿಸ್ಟ್ ಬಂದಿತು, “ಸರಿ, ಈ ಬೆಳಿಗ್ಗೆ ನಾನು ಸ್ವಲ್ಪ ಹೆಚ್ಚಿನ ತನಿಖೆ ನಡೆಸಲು ಹೋಗುತ್ತೇನೆ. ನನ್ನ ಪತಿ ಹಾಳೆಗಳನ್ನು ಬದಲಾಯಿಸಿದಾಗ ಬೆಡ್ ಶೀಟ್ ಹಾಕಲು ಮರೆತಿದ್ದಾನೆ. ಐ ಕುಡ್ ಕಿಲ್ ಹಿಮ್” ಎಂದು ಬರೆದಿದ್ದಾರೆ.

ವಾಸ್ತವವಾಗಿ, ಮಗುವಿನ ಭೂತದಂತೆ ಕಂಡದ್ದು ಕೇವಲ ಚಿತ್ರವಾಗಿತ್ತು ಎಂದು ಬಳಿಕ ಮಹಿಳೆಗೆ ಮನವರಿಕೆಯಾಗಿದೆ.

ಮಾರಿಟ್ಜಾ ಎಲಿಜಬೆತ್ ತನ್ನ ಮಗನ ರೂಮಿನೊಳಗೆ ಮಗುವಿನ ಭೂತವಿದೆ ಎಂದು ಯೋಚಿಸುತ್ತಾ ಇಡೀ ರಾತ್ರಿ ಕಳೆದಳು, ಬೆಳಿಗ್ಗೆ ಅದು ಹಾಸಿಗೆಯ ಲೇಬಲ್‌ನಲ್ಲಿರುವ ಚಿತ್ರ ಎಂದು ಅರಿತ ಬಳಿಕ ಆಕೆ ಭೂತವೆಂದು ತಪ್ಪಾಗಿ ಭಾವಿಸಿರುವುದು ಗೊತ್ತಾಗಿದೆ.

ಮಾರಿಟ್ಜಾ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಮೊದಲಿಗೆ ಆ ಫೋಟೋ ಕಂಡ ಕೆಲವು ಜನರು ಮಾರಿಟ್ಜಾ ಅವರಂತೆಯೇ ಭಾವಿಸಿದರು. ಮೊದಲ ಚಿತ್ರ ನಿಜಕ್ಕೂ ತೆವಳುವ ಭೂತದಂತೆ ಕಾಣುತ್ತದೆ ಎಂದು ಹೇಳಿದರು. ಒಬ್ಬ ವ್ಯಕ್ತಿಯು ನೀವು ತನಿಖೆ ಮಾಡಲು ಬೆಳಿಗ್ಗೆವರೆಗೂ ಏಕೆ ಕಾದಿರಿ. ನಿಮ್ಮ ಮಗನಿಗೆ ಏನಾದರೂ ತೊಂದರೆಯಾಗಿದ್ದರೆ ಎಂದು ಬರೆದಿದ್ದಾರೆ.

Comments are closed.