ಅಂತರಾಷ್ಟ್ರೀಯ

ಯೆಮೆನ್ -ಹೌತಿ ಬಂಡುಕೋರರ ನಡುವಿನ ಯುದ್ಧದಲ್ಲಿ 5,000 ಕ್ಕೂ ಹೆಚ್ಚು ಮಕ್ಕಳ ಸಾವು!

Pinterest LinkedIn Tumblr


ಸನಾ` [ಯೆಮೆನ್]: ಮಾರ್ಚ್ 2015 ರಲ್ಲಿ ಯೆಮೆನ್ ಸರ್ಕಾರ ಮತ್ತು ಹೌತಿ ಬಂಡುಕೋರರ ನಡುವಿನ ಯುದ್ಧವು ಭುಗಿಲೆದ್ದ ನಂತರ 5,000 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ. ಆದರೆ ಅರ್ಧ ಮಿಲಿಯನ್ ಜನರು ಯೆಮನ್‌ನಲ್ಲಿ ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ಯುನಿಸೆಫ್ ಬುಧವಾರ ತಿಳಿಸಿದೆ.

“ಯೆಮೆನ್ ಮಕ್ಕಳ ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ” ಎಂದು ಕ್ಸಿನ್ಹುವಾ ಯುನಿಸೆಫ್ ಪ್ರತಿನಿಧಿ ಸಾರಾ ಬೈಸೊಲೊ ನ್ಯಾಂತ್ ಹೇಳಿದ್ದಾರೆ. “ಹೆಚ್ಚುತ್ತಿರುವ ಸಂಘರ್ಷವು ಸುಮಾರು ಅರ್ಧ ಮಿಲಿಯನ್ ಯೆಮೆನ್ ಮಕ್ಕಳನ್ನು ಶಾಲೆಯಿಂದ ಹೊರಗುಳಿಸಿದೆ” ಎಂದು ನ್ಯಾಂತ್ ಹೇಳಿದರು.

ಯುನೆಸೆಫ್‌ನ ಇತ್ತೀಚಿನ ವರದಿಯ ಪ್ರಕಾರ, ಯೆಮನ್‌ನಲ್ಲಿ ಅಂದಾಜು 2 ಮಿಲಿಯನ್ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ, ಇದರಲ್ಲಿ ಐದು ವರ್ಷದೊಳಗಿನ 360,000 ಮಕ್ಕಳು ಸೇರಿದ್ದಾರೆ ಎಂದು ತಿಳಿದುಬಂದಿದೆ.

24.1 ಮಿಲಿಯನ್ ಜನರಿಗೆ, ಅಥವಾ ಜನಸಂಖ್ಯೆಯ ಸುಮಾರು 80 ಪ್ರತಿಶತದಷ್ಟು ಜನರಿಗೆ ಕೆಲವು ರೀತಿಯ ಮಾನವೀಯ ನೆರವು ಮತ್ತು ರಕ್ಷಣೆಯ ಅಗತ್ಯವಿದೆ ಎಂದು ಯುನಿಸೆಫ್ ತಿಳಿಸಿದೆ.

Comments are closed.