ರಾಷ್ಟ್ರೀಯ

ಕಾಂಗ್ರೆಸ್ ನಾಯಕ ಚಿದಂಬರಂಗೆ ಜೈಲಿನಲ್ಲಿಯೇ ದೀಪಾವಳಿ

Pinterest LinkedIn Tumblr


ನವದೆಹಲಿ (ಅ.24): ಸಿಬಿಐ ದಾಖಲಿಸಿರುವ ಐಎನ್​ಎಕ್ಸ್​ ಮೀಡಿಯಾ ಭ್ರಷ್ಟಾಚಾರ ಪ್ರಕರಣ ಸಂಬಂಧ ಪಿ.ಚಿದಂಬರಂ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಅ. 30 ರವರೆಗೆ ವಿಸ್ತರಿಸಿ ದೆಹಲಿ ನ್ಯಾಯಾಲಯ ಆದೇಶ ನೀಡಿದೆ. ಇದರಿಂದಾಗಿ ಕಾಂಗ್ರೆಸ್​ ನಾಯಕ ಜೈಲಿನಲ್ಲಿಯೇ ದೀಪಾವಳಿ ಆಚರಿಸುವಂತೆ ಆಗಿದೆ.

74 ವರ್ಷದ ಕಾಂಗ್ರೆಸ್​ನ ಹಿರಿಯ ಮುಖಂಡ ಚಿದಂಬರಂ ಅವರಿಗೆ ಐಎನ್​ಎಕ್ಸ್​ ಪ್ರಕರಣ ಸಂಬಂಧ ಸಿಬಿಐ ಪ್ರಕರಣದಲ್ಲಿ ಸಿಬಿಐನಿಂದ ನ್ಯಾಯಾಲಯ ಬಂಧನಕ್ಕೆ ಒಳಗಾಗಿದ್ದ ಅವರಿಗೆ ಸುಪ್ರೀಂಕೋರ್ಟ್​ ಮಂಗಳವಾರ ಷರತ್ತುಬದ್ಧ ಜಾಮೀನು ನೀಡಿತ್ತು. ಬಳಿಕ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು.,

ಪಿ. ಚಿದಂಬರಂ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ 2007 ರಲ್ಲಿ 305 ಕೋಟಿ ರೂ. ವಿದೇಶಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದರು ಎಂದು ಆರೋಪಿಸಿ ಸಿಬಿಐ ಅವರ ವಿರುದ್ಧ 2017 ಮೇ 15 ರಂದು ಎಫ್​ಐಆರ್​ ದಾಖಲು ಮಾಡಿತ್ತು. ಅಲ್ಲದೆ, ನಿರಂತರವಾಗಿ ವಿಚಾರಣೆ ನಡೆಸಿತ್ತು. ಈ ನಡುವೆ ಕಳೆದ ಆಗಸ್ಟ್​ 22 ರಂದು ನಡೆದ ನಾಟಕೀಯ ಬೆಳವಣಿಗೆಯಲ್ಲಿ ಸಿಬಿಐ ಅಧಿಕಾರಿಗಳು ಪಿ. ಚಿದಂಬರಂ ಅವರನ್ನು ಬಂಧಿಸಿದ್ದರು.

ಇನ್ನು ಈ ಪ್ರಕರಣಕ್ಕೆ ಸಂಬಂಧ ಸಿಬಿಐ ಹಾಗೂ ಇಡಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು.

Comments are closed.