ಅಂತರಾಷ್ಟ್ರೀಯ

ಬಂಡವಾಳ ಹೂಡುವುದಾದರೆ ನಮ್ಮ ದೇಶಕ್ಕೆ ಬನ್ನಿ: ಮೋದಿ

Pinterest LinkedIn Tumblr


ನ್ಯೂಯಾರ್ಕ್​: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬ್ಲೂಮ್​ಬರ್ಗ್​ನ ಜಾಗತಿಕ ಉದ್ಯಮ ವೇದಿಕೆಯಲ್ಲಿ ಮಾತನಾಡಿ, ನೀವೇನಾದರೂ ಮಾರುಕಟ್ಟೆಯಲ್ಲಿ ಬಂಡವಾಳ ಹೂಡುವುದಾದರೆ, ಅತಿದೊಡ್ಡ ಮೂಲಸೌಕರ್ಯ ಪರಿಸರ ವ್ಯವಸ್ಥೆ ಮತ್ತು ನಗರೀಕರಣ ಒಂದರಲ್ಲಿ ಬಂಡವಾಳ ಹೂಡುವುದಾದರೆ ಭಾರತಕ್ಕೆ ಬನ್ನಿ ಎಂದು ಉದ್ಯಮಿಗಳಿಗೆ ಆಹ್ವಾನ ನೀಡಿದರು.

ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಸರ್ಕಾರ ಇಂದು ದೇಶದಲ್ಲಿ ಉದ್ಯಮ ವಾತಾವರಣವನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಕಾರ್ಪೋರೇಟ್​ ತೆರಿಗೆ ಕಡಿತಗೊಳಿಸಿರುವ ಭಾರತದ ನಿರ್ಧಾರದ ಬಗ್ಗೆ ಧನಾತ್ಮಕ ಸಂದೇಶಗಳು ಬರುತ್ತಿವೆ ಎಂದು ಹೇಳಿದರು.

ಅತ್ಯಾಧುನಿಕ ಮೂಲಸೌಕರ್ಯ ಮೇಲೆ ಮುಂದಿನ ವರ್ಷಗಳಲ್ಲಿ ಭಾರತ ಸುಮಾರು 1.3 ಡಾಲರ್​ ಅನ್ನು ವ್ಯಯಿಸಲಿದೆ. ಅಲ್ಲದೆ, ದೇಶದ ಸಾಮಾಜಿಕ ಮೂಲಸೌಕರ್ಯಕ್ಕೂ ಲಕ್ಷ ಕೋಟಿ ರೂ.ಗಳನ್ನು ಸರ್ಕಾರ ಖರ್ಚು ಮಾಡಲಿದೆ ಎಂದು ಭರವಸೆ ನೀಡಿದರು.

ಆತ್ಮೀಯ ಸ್ನೇಹಿತರೇ ನಿಮ್ಮ ಆಸೆ ಮತ್ತು ಕನಸು ನಮಗೆ ಸರಿಯಾಗಿ ಹೊಂದುತ್ತವೆ. ನಿಮ್ಮ ತಂತ್ರಜ್ಞಾನ ಮತ್ತು ನಮ್ಮ ಪ್ರತಿಭೆ ವಿಶ್ವವನ್ನೇ ಬದಲಾಯಿಸಬಹುದು. ನಿಮ್ಮ ಅಳತೆಗೋಲು ಹಾಗೂ ಕೌಶಲ್ಯ ಜಾಗತಿಕ ಆರ್ಥಿಕ ಬೆಳವಣಿಗೆಗೆ ವೇಗವನ್ನು ನೀಡಲಿದೆ. ಪ್ರಜಾಪ್ರಭುತ್ವ, ಜನಸಂಖ್ಯೆ, ಬೇಡಿಕೆ ಮತ್ತು ನಿರ್ಣಾಯಕತೆ ಈ ನಾಲ್ಕು ಸಂಗತಿಗಳು ಹೂಡಿಕೆದಾರರಿಗೆ ಭಾರತದ ಮೇಲೆ ವಿಶ್ವಾಸವನ್ನು ಮೂಡಿಸುತ್ತದೆ ಹಾಗೂ ಭಾರತವನ್ನು ವಿಶೇಷವನ್ನಾಗಿಸುತ್ತದೆ ಎಂದು ಹೇಳಿದರು.

ಭಾರತದ ಈಗ 5 ಟ್ರಿಲಿಯನ್​ ಡಾಲರ್​ ಆರ್ಥಿಕತೆಯ ಗುರಿಯನ್ನು ರೂಪಿಸಿದೆ. ಈ ಗುರಿಯನ್ನು ಮುಟ್ಟಲು ನಾವು ಸಮರ್ಥರಾಗಿದ್ದೇವೆ. ಭಾರತವು ಏಕಬಳಕೆ ಪ್ಲ್ಯಾಸ್ಟಿಕ್​ ಅನ್ನು ನಿಷೇಧಿಸಿದೆ. ಇದರ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ದೊಡ್ಡ ಚಳುವಳಿ ಆರಂಭವಾಗಿದೆ. ಏಕಬಳಕೆ ಪ್ಲ್ಯಾಸ್ಟಿಕ್​ ವಿರುದ್ಧ ಅಕ್ಟೋಬರ್​ 2ರ ಮಹಾತ್ಮ ಗಾಂಧೀಜಿಯವರ ಜನ್ಮ ದಿನದ ಆಚರಣೆಯೆಂದು ರಾಷ್ಟ್ರವ್ಯಾಪಿ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

Comments are closed.