ಅಂತರಾಷ್ಟ್ರೀಯ

ಅಮೆರಿಕಾದಲ್ಲಿ ಹ್ಯೂಸ್ಟನ್ ವಿಮಾನ ನಿಲ್ದಾಣದಲ್ಲಿ ಕೆಳಗೆ ಬಿದ್ದ ಹೂವಿನ ಕಡ್ಡಿ ಎತ್ತಿ ಸ್ವಚ್ಛತೆ ಸಾರಿದ ಪ್ರಧಾನಿ ಮೋದಿಗೆ ಎಲ್ಲೆಡೆ ಪ್ರಶಂಸೆ

Pinterest LinkedIn Tumblr

ಹ್ಯೂಸ್ಟನ್: ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹ್ಯೂಸ್ಟನ್ ವಿಮಾನ ನಿಲ್ದಾಣದಲ್ಲಿ ಸ್ವಚ್ಛತೆಯನ್ನು ಸಾರಿದ್ದು, ಮೋದಿಯವರ ಸರಳತೆಗೆ ಇದೀಗ ಎಲ್ಲೆಡೆ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.

1 ವಾರಗಳ ಕಾಲ ಅಮೆರಿಕಾ ಪ್ರವಾಸದಲ್ಲಿರುವ ಮೋದಿಯವರನ್ನು ಇಂದು ಹ್ಯೂಸ್ಟನ್ ಜಾರ್ಜ್ ಬುಷ್ ಇಂಟರ್ ಕಾಂಟಿನೆಂಟರ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಈ ವೇಳೆ ಭಾರತದಲ್ಲಿನ ಅಮೆರಿಕಾ ರಾಯಭಾರಿ ಕೆನ್ನೆತ್ ಜಸ್ಟರ್, ಅಮೆರಿಕಾದಲ್ಲಿನ ಭಾರತದ ರಾಯಭಾರಿ ಹರ್ಷವರ್ಥನ್ ಶ್ರಿಂಗಾಲಾ ಮತ್ತಿತರರ ಅಧಿಕಾರಿಗಳು ಹೂಗುಚ್ಛ ನೀಡುವ ಮೂಲಕ ಸ್ವಾಗತಿಸಿದರು.

ಇದಾದ ಬಳಿಕ ವಿಮಾನದಿಂದ ಇಳಿದು, ತಮ್ಮನ್ನು ಸ್ವಾಗಿತಸಲು ನಿಂತಿದ್ದ ಭಾರತೀಯ ಮತ್ತು ಅಮೆರಿಕಾ ಅಧಿಕಾರಿಗಳಿಗೆ ಹಸ್ತಲಾಘವ ನೀಡುತ್ತಾ ಬರುತ್ತಿದ್ದ ವೇಳೆ ಮಹಿಳಾ ಅಧಿಕಾರಿಯೊರ್ವರು ಹೂಗುಚ್ಛ ನೀಡಿದರು. ಈ ವೇಳೆ ಹೂಗುಚ್ಛದ ಸಣ್ಣ ಭಾಗವೊಂದು ತುಂಡಾಗಿ ಕೆಂಪು ಹಾಸಿಗೆ ಮೇಲೆ ಬಿದ್ದಿತ್ತು. ಇದನ್ನು ಕಂಡ ಪ್ರಧಾನಿ ಮೋದಿಯವರು ಕೂಡಲೇ ಅವುಗಳನ್ನು ಎತ್ತಿಕೊಂಡು ಭದ್ರತಾ ಸಿಬ್ಬಂದಿಯವರಿಗೆ ನೀಡಿ, ಅಧಿಕಾರಿಗಳನ್ನು ಪರಿಚಯ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಮುಂದುವರೆಸಿದರು.

ಮೋದಿಯವರ ಈ ಸರಳತೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಭಾರೀ ಪ್ರಶಂಸೆಗಳು ವ್ಯಕ್ತವಾಗತೊಡಗಿವೆ.

ಅಮೆರಿಕಾದ ಟೆಕ್ಸಾಸ್ ರಾಜ್ಯದ ಹ್ಯೂಸ್ಟನ್’ನಲ್ಲಿ ಹೌಡಿ ಮೋದಿ ಎಂಬ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿಯವರು ಭಾಷಣ ಮಾಡಲಿದ್ದಾರೆ. 50 ಸಾವಿರ ಮಂದಿ ಈ ಸಮಾವೇಶಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ವಿದೇಶಿ ಚುನಾಯಿತಿ ಪ್ರತಿನಿಧಿಯ ಭಾಷಣ ಆಲಿಸಲು ಅಮೆರಿಕಾದಲ್ಲಿ ಇಷ್ಟೊಂದು ಜನಸೇರಿದ ಇತಿಹಾಸವೇ ಇಲ್ಲ. ಕ್ರೈಸ್ತರ ಪರಮೋಚ್ಛ ಗುರು ಪೋಪ್ ಹೊರತುಪಡಿಸಿ ಅತಿ ಹೆಚ್ಚು ಜನರನ್ನುದ್ದೇಶಿಸಿ, ಭಾಷಣ ಮಾಡುತ್ತಿರುವ ಮೊದಲ ವಿಶ್ವ ನಾಯಕ ಮೋದಿ ಅವರಾಗಿದ್ದಾರೆಂಬುದು ಈ ರ್ಯಾಲಿಯ ವಿಶೇಷವಾಗಿದೆ.

ಇಂದು ರಾತ್ರಿ 8.30ಕ್ಕೆ (ಭಾರತೀಯ ಕಾಲಮಾನ), ಹೌಡಿ ಮೋದಿ ಕಾರ್ಯಕ್ರಮ ಪ್ರಾರಂಭವಾಗಲಿದೆ. ಅಮೆರಿಕಾದ ವಿವಿಧೆಡೆಯ 400 ಭಾರತೀಯ ಮೂಲದ ಕಲಾವಿದರು ಒಂದೂವರೆ ತಾಸು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅದಾದ ಬಳಿಕ ರಾತ್ರಿ 10ಕ್ಕೆ ಮೋದಿ ಅವರ ಭಾಷಣ ಪ್ರಾರಂಭವಾಗಲಿದೆ. ಮೋದಿಯವರ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಇದೇ ಕಾರ್ಯಕ್ರಮದಲ್ಲಿ ಮಹತ್ವದ ಘೋಷಣೆಯೊಂದನ್ನು ಟ್ರಂಪ್ ಪ್ರಕಟಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.

Comments are closed.