ಅಂತರಾಷ್ಟ್ರೀಯ

ಸ್ವಾತಂತ್ರ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಗೆ ಮೊರೆ ಇಟ್ಟ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜನತೆ

Pinterest LinkedIn Tumblr

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಅಲ್ಲಿನ ಜನತೆ ಸ್ವಾತಂತ್ರ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಗೆ ಮೊರೆ ಇಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸದಲ್ಲಿದ್ದು, ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಹೂಸ್ಟನ್ ನಲ್ಲಿ ಸಿಂಧಿ ಕಾರ್ಯಕರ್ತರು ಜಮಾಯಿಸಿದ್ದಾರೆ.

ಮೋದಿ ಈ ಪ್ರದೇಶದಲ್ಲಿ ಹಾದುಹೋಗುವಾಗ ನಮಗೆ ಸ್ವಾತಂತ್ರ್ಯ ಕೊಡಿಸುವುದಕ್ಕೆ ಸಹಾಯ ಮಾಡಿ ಎಂಬ ಸಂದೇಶವನ್ನು ರವಾನೆ ಮಾಡುತ್ತೇವೆ, ನಮಗೆ ಮೋದಿ ಹಾಗೂ ಟ್ರಂಪ್ ಸಹಾಯ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ಸಿಂಧ್ ವಿಮೋಚನೆ ಕಾರ್ಯಕರ್ತರಾದ ಝಫರ್ ಎಎನ್ಐ ಗೆ ಹೇಳಿದ್ದಾರೆ.

ಭಾರತ 1971 ರಲ್ಲಿ ಪಾಕಿಸ್ತಾನದಿಂದ ಸ್ವಾತಂತ್ರ್ಯ ಗಳಿಸಿಕೊಳ್ಳುವುದಕ್ಕೆ ಬಾಂಗ್ಲಾದೇಶಕ್ಕೆ ಸಹಾಯ ಮಾಡಿತ್ತು. ಈಗ ಸಿಂಧ್ ಸಮುದಾಯಕ್ಕೆ ಪಾಕಿಸ್ತಾನದಿಂದ ವಿಮೋಚನೆಗೊಳ್ಳುವುದಕ್ಕೆ ಸಹಾಯ ಮಾಡಬೇಕೆಂದು ಝಫರ್ ಹೇಳಿದ್ದಾರೆ.

ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿರುವ ಝಫರ್, ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿಯಲು ಸರ್ಕಾರ ಇಸ್ಲಾಮಿಕ್ ತೀವ್ರವಾದವನ್ನು ಬಳಕೆ ಮಾಡಿಕೊಳ್ಳುತ್ತಿದೆ. ಪಾಕಿಸ್ತಾನದ ವಿರುದ್ಧ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ಕ್ರಮ ಜರುಗಿಸಬೇಕು ಹಾಗೂ ಪಾಕಿಸ್ತಾನದ ಸೇನೆ, ಐಎಸ್ಐ ನ್ನು ಉಗ್ರ ಸಂಘನೆಗಳೆಂದು ಘೋಷಿಸಬೇಕೆಂದು ಝಫರ್ ಹೇಳಿದ್ದಾರೆ.

Comments are closed.