ಅಂತರಾಷ್ಟ್ರೀಯ

ಅಮೇರಿಕಾದಿಂದ ಸೌದಿ ಅರೇಬಿಯಾಗೆ ಹೆಚ್ಚುವರಿ ಸೇನಾ ನೆರವು ನೀಡಲು ನಿರ್ಧಾರ

Pinterest LinkedIn Tumblr


ವಾಷಿಂಗ್ಟನ್‌ ಡಿಸಿ: ಸೌದಿ ಅರೇಬಿಯಾದ ಅತೀ ದೊಡ್ಡ ತೈಲ ಘಟಕದ ಮೇಲೆ ಡ್ರೋನ್‌ ದಾಳಿಯ ನಂತರ ಈಗ ಅಮೇರಿಕಾ ಗಲ್ಫ್‌ ರಾಷ್ಟ್ರಕ್ಕೆ ತನ್ನ ಹೆಚ್ಚುವರಿ ಸೇನಾ ಪಡೆಯನ್ನು ಕಳುಹಿಸಲು ನಿರ್ಧರಿಸಿದೆ. ಸೌದಿ ಅರೇಬಿಯಾದ ವಾಯು ಮತ್ತು ಕ್ಷಿಪಣಿ ಪಡೆಯ ಬಲವರ್ಧನೆಗೆ ಅಮೇರಿಕಾದ ನೆರವು ನೀಡಲು ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಶುಕ್ರವಾರ ಒಪ್ಪಿಗೆ ನೀಡಿದ್ದಾರೆ ಎಂದು ವರದಿಯಾಗಿದೆ.

ಮಧ್ಯಮ ಸಂಖ್ಯೆಯ ತಂಡವನ್ನು ಸೌದಿ ಅರೇಬಿಯಾಗೆ ಕಳುಹಿಸಲು ಅಮೇರಿಕಾ ನಿರ್ಧರಿಸಿದೆ. ಇದರೊಂದಿಗೆ ಸೌದಿ ಮತ್ತು ಸಂಯುಕ್ತ ಅರಬ್‌ ಸಂಸ್ಥಾನಕ್ಕೆ ಮಿಲಿಟರಿ ಉಪಕರಣಗಳನ್ನು ವಿತರಿಸಲಿದೆ ಎಂದು ವರದಿಯಾಗಿದೆ.

ಸೌದಿ ಅರೇಬಿಯಾದ ಮನವಿಯ ಮೇರೆಗೆ, ಅಧ್ಯಕ್ಷರು ಗಲ್ಫ್‌ ರಾಷ್ಟ್ರದಲ್ಲಿ ಸೇನಾ ಪಡೆ ನಿಯೋಜಿಸಲು ನಿರ್ಧರಿಸಿದ್ದಾರೆ ಎಂದು ಅಮೇರಿಕಾ ರಕ್ಷಣಾ ಸಚಿವ ಮಾರ್ಕ್‌ ಎಸ್ಪರ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.