ಅಂತರಾಷ್ಟ್ರೀಯ

ಅಮೆರಿಕಾದಲ್ಲಿ ಮೋದಿ ವಿರುದ್ಧ ಮೊಕದ್ದಮೆ ದಾಖಲು!

Pinterest LinkedIn Tumblr


ಹೌಸ್ಟನ್: ಪ್ರಧಾನಮಂತ್ರಿ ನರೇಂದ್ರ ವಿರುದ್ಧ ಇಬ್ಬರು ಕಾಶ್ಮೀರ ಕಾರ್ಯಕರ್ತರು ಅಮೆರಿಕಾದ ಹೌಸ್ಟನ್ ನಲ್ಲಿ ಮೊಕದ್ದಮೆ ಹೂಡಿದ್ದಾರೆ.

ಕಾಶ್ಮೀರಿಗಳ ಹಕ್ಕನ್ನು ಪ್ರಧಾನಿ ನರೇಂದ್ರ ಮೋದಿ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಮಧ್ಯೆ ಅಮೆರಿಕಾಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ವಿರುದ್ಧ ಸಿಖ್ ಗುಂಪು ಮತ್ತು ಪಾಕಿಸ್ತಾನೀಯರು ನಾಳೆ ಹೌಸ್ಟನ್ ನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಪ್ರಧಾನಿಯವರ ಭದ್ರತೆ ಕುರಿತು ಕೇಂದ್ರ ಸರ್ಕಾರ ಅಮೆರಿಕಾ ಸರ್ಕಾರದೊಂದಿಗೆ ಸಂಪರ್ಕದಲ್ಲಿದೆ. ಪ್ರಧಾನಿಯವರ ವಿರುದ್ಧ ಹೂಡಿರುವ ಫೆಡರಲ್ ಮೊಕದ್ದಮೆಯ ಪರಿಣಾಮಗಳನ್ನು ತಿಳಿಯುವ ನಿಟ್ಟಿನಲ್ಲಿ ಭಾರತೀಯ ರಾಯಭಾರ ಕಚೇರಿ ಕಾರ್ಯನಿರ್ವಹಿಸುತ್ತಿದೆ.

ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ಮೂಲಕ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಭಾರತೀಯ ಸೇನೆಯ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕನ್ವಾಲ್ ಜೀತ್ ಸಿಂಗ್ ದಿಲ್ಲೊನ್ ಕಾಶ್ಮೀರಿಗಳ ಮೇಲೆ ಕ್ರೂರ, ಅಮಾನವೀಯ ವರ್ತನೆ ತೋರಿಸಿದ್ದಾರೆ, ಜಮ್ಮು-ಕಾಶ್ಮೀರದಲ್ಲಿ ಕಾನೂನುಬಾಹಿರ ಹತ್ಯೆ, ಸಂಘರ್ಷಗಳಿಗೂ ಕಾರಣರಾಗಿದ್ದಾರೆ ಎಂದು ಆರೋಪಿಸಿ, 73 ಪುಟಗಳ ಮೊಕದ್ದಮೆಯನ್ನು ಅಮೆರಿಕಾದಲ್ಲಿ ನೆಲೆಸಿರುವ ಕಾಶ್ಮೀರಿ ಕಾರ್ಯಕರ್ತರು ಮತ್ತು ಖಲಿಸ್ತಾನ್ ರೆಫೆರೆಂಡಮ್ ಫ್ರಂಟ್ ದಾಖಲಿಸಿದ್ದಾರೆ.

1991ರ ಅಮಾಯಕರ ಹಿಂಸೆ ಸುರಕ್ಷತಾ ಕಾಯಿದೆಯಡಿ ಸಿವಿಲ್ ದೂರನ್ನು ದಾಖಲಿಸಲಾಗಿದ್ದು, ಹತ್ಯೆ, ಹಿಂಸೆ, ಅಮಾನವೀಯ ವರ್ತನೆ ಆರೋಪದ ಮೇಲೆ ವಿದೇಶಿ ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ವಿರುದ್ಧ ಅಮೆರಿಕಾದಲ್ಲಿ ಸಲ್ಲಿಸುವ ಮೊಕದ್ದಮೆ ಇದಾಗಿದೆ.

Comments are closed.