ಅಂತರಾಷ್ಟ್ರೀಯ

ಕಾಶ್ಮೀರದ ವಿಷಯಕ್ಕೆ ಯುದ್ಧಕ್ಕೂ ಸಿದ್ಧ: ಪಾಕ್ ಪ್ರಧಾನಿ ಇಮ್ರಾನ್ ಖಾನ್

Pinterest LinkedIn Tumblr


ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ನೀಡಲಾಗಿದ್ದ ವಿಶೇಷ ಸ್ಥಾನಮಾನದ 370ನೇ ವಿಧಿಯನ್ನು ರದ್ದುಗೊಳಿಸಿರುವ ಭಾರತ ಸರ್ಕಾರದ ನಿರ್ಧಾರದ ವಿರುದ್ಧ ಯುದ್ಧ ಸಾರಬೇಕಾದೀತು ಎಂದೂ ಪ್ರಧಾನಿ ಇಮ್ರಾನ್ ಖಾನ್ ಎಚ್ಚರಿಕೆ ನೀಡಿದ್ದಾರೆ.

ಖಾನ್ ತಮ್ಮ ಇತ್ತೀಚಿನ ಭಾಷಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತ, ದೇಶದ ಮುಸ್ಲಿಮರನ್ನು ಬೀದಿಯಲ್ಲಿ ಹತ್ಯೆ ಮಾಡುತ್ತಿರುವುದರ ಬಗ್ಗೆ ಪ್ರಸ್ತಾಪ ಮಾಡಿ, ಜೊತೆಗೆ ಕಾಶ್ಮೀರ ಕಣಿವೆಯ ಪ್ರಸ್ತುತ ಬೆಳವಣಿಗೆಗಳು ಆತಂಕಕಾರಿ ಎಂದು ಹೇಳಿದ್ದರು.

ಕಾಶ್ಮಿರದ ಸ್ವಾತಂತ್ರ್ಯಕ್ಕಾಗಿ ಅಲ್ಲಿನ ಜನರ ಬದುಕಿಗಾಗಿ, ಪಾಕ್ ಸೇನೆ ಮತ್ತು ಜನತೆ ಎಲ್ಲದಕ್ಕೂ ಸಿದ್ದರಾಗಿದ್ದಾರೆ ಎಂದು ಅವರು ಹೇಳಿದರು. ಭಾರತ ಕಾರ್ಯತಂತ್ರದ ಪ್ರಮಾದ ಮಾಡಿದೆ, ಪ್ರಧಾನಿ ನರೇಂದ್ರ ಮೋದಿ ತಮ್ಮ ಅಂತಿಮ ಆಟ ಆಡುತ್ತಿದ್ದಾರೆ ಆದರೆ ಅದು ಭಾರತಕ್ಕೆ ತುಂಬಾ ದುಬಾರಿಯಾಗಲಿದೆ ಎಂದು ಹೇಳಿದರು.

ಕಾಶ್ಮೀರ ಅಂತಾರಾಷ್ಟ್ರೀಯ ಸಮುದಾಯದ ರಾಡಾರ್‌ನಲ್ಲಿ ಇರಲಿಲ್ಲ, ಆದರೆ ಜಾಗತಿಕ ನಿರೂಪಣೆಯಲ್ಲಿ ಕಾಶ್ಮೀರ ವಿಷಯ ಇರುವಾಗ ನಾನು ಕಾಶ್ಮೀರದ ರಾಯಭಾರಿಯಾಗುವುದಾಗಿ ಪ್ರತಿಜ್ಞೆ ಮಾಡುವುದಾಗಿಯೂ ಇಮ್ರಾನ್ ಖಾನ್ ಹೇಳಿದ್ದಾರೆ. ಈಗ, ನಾನು ಬ್ರಾಂಡ್ ಅಂಬಾಸಿಡರ್ ಆಗಿ ಕಾಶ್ಮೀರ ಸಮಸ್ಯೆಯನ್ನು ಜಗತ್ತಿನ ಎಲ್ಲಾ ವೇದಿಕೆಗಳಿಗೆ ಕೊಂಡೊಯ್ಯುತ್ತೇನೆ ಎಂದು ಖಾನ್ ಹೇಳಿದರು.

ಭಾರತದಲ್ಲಿ ವಾಸಿಸುತ್ತಿರುವ ಸುಮಾರು 18 ಕೋಟಿ ಮುಸ್ಲಿಮರಿಗೆ ಆಗುವ ಅಪಾಯವನ್ನು ಉಲ್ಲೇಖಿಸಿ ಭಾರತದಲ್ಲಿನ ಕಾಶ್ಮೀರಿ ರಾಜಕಾರಣಿಗಳು ಇಂದು ಎರಡು ರಾಷ್ಟ್ರ ಸಿದ್ಧಾಂತವನ್ನು ಅನುಮೋದಿಸುತ್ತಿದ್ದಾರೆ ಎಂದೂ ಇಮ್ರಾನ್ ಖಾನ್ ದೂರಿದರು.

Comments are closed.