ಅಂತರಾಷ್ಟ್ರೀಯ

ಮತ ಪತ್ರ ಎಣಿಕೆ ಸಂದರ್ಭ 270 ಅಧಿಕಾರಿಗಳು ಸಾವು..!

Pinterest LinkedIn Tumblr


ಇಂಡೊನೇಷ್ಯಾ: ಎಲೆಕ್ಷನ್​ ಅಂದಾಕ್ಷಣ ರಾಜಕಾರಣಿಗಳು, ಪಕ್ಷದ ಕಾರ್ಯಕರ್ತರು ಜಗಳ, ಗಲಾಟೆ ಮಾಡಿಕೊಳ್ಳುವುದು ಮಾಮೂಲಿ. ಆದ್ರೆ ಈ ದೇಶದಲ್ಲಿ ಚುನಾವಣೆಗಾಗಿ ನೇಮಿಸಿದ ಅಧಿಕಾರಿಗಳು ಮತಪತ್ರಗಳನ್ನ ಲೆಕ್ಕ ಹಾಕೋಕೆ ಆಗಲಾರದೇ ಮೃತಪಡುತ್ತಿದ್ದಾರಂತೆ. ಇಡೀ ವಿಶ್ವದಲ್ಲೇ ಒಂದೇ ದಿನ ನಡೆದ ಅತ್ಯಂತ ದೊಡ್ಡ ಚುನಾವಣೆಗೆ ಸಾಕ್ಷಿಯಾಗಿದ್ದು ಇಂಡೊನೇಷ್ಯಾ.
ಇಂಡೊನೇಷ್ಯಾ ಅಧ್ಯಕ್ಷೀಯ ಚುನಾವಣೆ, ಸಂಸದೀಯ ಚುನಾವಣೆ ಹಾಗೂ ಸ್ಥಳೀಯ ಚುನಾವಣೆ ಎಲ್ಲವೂ ಒಂದೇ ದಿನ ನಡೆದಿತ್ತು. ಏಪ್ರಿಲ್ 17ರಂದು ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇದೀಗ ನಡೀತಿದೆ. ಇಂಡೊನೇಷ್ಯಾದಲ್ಲಿ ವೋಟಿಂಗ್​ಗೆ ಮತಪತ್ರಗಳನ್ನ ಬಳಸಲಾಗಿದೆ. ಹೀಗಾಗಿ ಅಧಿಕಾರಿಗಳು ಕೈನಿಂದಲೇ ಮತಗಳನ್ನ ಎಣಿಸುತ್ತಿದ್ದಾರೆ. ಆದ್ರೆ, ನಿನ್ನೆಯಿಂದ ಸತತವಾಗಿ ಮತ ಎಣಿಕೆ ನಡೀತಿರೋದ್ರಿಂದ ಈ ಸ್ಟ್ರೆಸ್ ತಡೆಯಲಾಗದೆ ಇಲ್ಲಿವರೆಗೂ 270 ಅಧಿಕಾರಿಗಳು ಮೃತಪಟ್ಟಿದ್ದಾರಂತೆ.
ಸುಮಾರು 8 ಲಕ್ಷ ಪೊಲೀಂಗ್ ಬೂತ್​ಗಳಲ್ಲಿ 193 ಮಿಲಿಯನ್ ಅಂದ್ರೆ 19 ಕೋಟಿ 30 ಲಕ್ಷ ಮತದಾರರ ಪೈಕಿ ಶೇಕಡ 80ರಷ್ಟು ಮಂದಿ ಮತದಾನ ಮಾಡಿದ್ದಾರೆ. ಇನ್ನು, ಏಕ ಕಾಲಕ್ಕೆ ವಿವಿಧ ಹಂತದ ಚುನಾವಣೆ ನಡೆದಿದ್ದು, ಒಟ್ಟು 5 ರೀತಿಯ ಚುನಾವಣೆಗಳಿಗೆ ಮತ ಹಾಕಿದ್ದಾರೆ. ಅಂದ್ರೆ ಸುಮಾರು 77 ಕೋಟಿ ಮತಗಳ ಚಲಾವಣೆಯಾಗಿದೆ. ಇಷ್ಟೂ ಮತಗಳನ್ನೂ ಅಧಿಕಾರಿಗಳು ಖುದ್ದು ಕೈಯಿಂದ ಎಣಿಸಬೇಕು ಮತ್ತು ವಿಂಗಡಿಸಬೇಕು. ಈ ಪ್ರಕ್ರಿಯೆಗಾಗಿ ಸಾವಿರಾರು ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

ಹಣದ ದುರ್ಬಳಕೆ, ಸಮಯ ಉಳಿಸಲು ಒಂದೇ ದಿನದಲ್ಲಿ ಚುನಾವಣೆ
ಇನ್ನೂ ದೇಶದಲ್ಲಿ ಎಲೆಕ್ಷನ್​ನಲ್ಲಿ ಭ್ರಷ್ಟಾಚಾರ, ಹಣದ ದುರ್ಬಳಕೆ, ಸಮಯವನ್ನ ಉಳಿತಾಯ ಮಾಡಲು ಇಂಡೊನೇಷ್ಯಾ ಸರ್ಕಾರ ಒಂದೇ ದಿನದಲ್ಲಿ ಅಧ್ಯಕ್ಷಿಯ ಚುನಾವಣೆ, ಸಂಸದೀಯ ಚುನಾವಣೆ ಸೇರಿದಂತೆ ಸ್ಥಳೀಯ ಚುನಾವಣೆಗಳನ್ನೂ ನಡೆಸಿತ್ತು. ಮೇ 22 ರಂದು ಎಲೆಕ್ಷನ್​ ರಿಸಲ್ಟ್​ ಅನೌನ್ಸ್​ ಆಗಲಿದೆ. ಸದ್ಯ ಮೃತಪಟ್ಟ ಅಧಿಕಾರಿಗಳ ಕುಟುಂಬಕ್ಕೆ ಪರಿಹಾರ ನೀಡಲು ಆರ್ಥಿಕ ಸಚಿವಾಲಯ ಕಾರ್ಯಪ್ರವೃತ್ತವಾಗಿದೆ. ಇನ್ನು, ಕರ್ತವ್ಯ ನಿರತ ಅಧಿಕಾರಿಗಳ ಆರೋಗ್ಯದ ಬಗ್ಗೆ ಗಮನಹರಿಸಲು ತಜ್ಞ ವೈದ್ಯರನ್ನೂ ನೇಮಿಸಿ ಆರೋಗ್ಯ ಸಚಿವಾಲಯ ಆದೇಶ ಹೊರಡಿಸಿದೆ.

Comments are closed.