ರಾಷ್ಟ್ರೀಯ

ಈ ದೃಶ್ಯ ನೋಡಿದರೆ ಕಣ್ಣಂಚು ತೇವವಾಗುತ್ತೆ..!

Pinterest LinkedIn Tumblr


ನವದೆಹಲಿ: ಜಗತ್ತಿನಲ್ಲಿ ಅತ್ಯಂತ ರಿಸ್ಕಿ ಕೆಲಗಳಲ್ಲಿ ಒಂದು ದೇಶದ ಗಡಿ ಕಾಯುವ ಸೈನಿಕರದ್ದು ಮತ್ತೊಂದು ದೇಶದೊಳಗೆ ಜನರ ರಕ್ಷಣೆ ಹೊತ್ತ ಪೊಲೀಸರದ್ದು. ಯೋಧರು ಹಾಗೂ ಪೊಲೀಸರು ಇಬ್ಬರಿಗೂ ತಮ್ಮ ಕುಟುಂಬಕ್ಕೂ ಹೆಚ್ಚಿನ ಟೈಮ್ ಕೊಡಲು ಸಾಧ್ಯವಾಗುವುದಿಲ್ಲ. ಆದ್ರೆ, ಇದು ಪುಟ್ಟ ಮಕ್ಕಳಿಗೆ ಎಷ್ಟು ಅರ್ಥವಾಗುತ್ತೆ. ಅದರಲ್ಲೂ ಮಕ್ಕಳು ನಮಗೆ ಇದು ಬೇಕು ಅಂತ ಅನಿಸಿದ್ರೆ, ರಚ್ಚೆ ಹಿಡಿದು ಕೂರುತ್ತವೆ. ಹೀಗೆ ಪೊಲೀಸ್ ಅಧಿಕಾರಿಯಾಗಿರುವ ಅಪ್ಪ ಕೆಲಸಕ್ಕೆ ಹೋಗುತ್ತಿದ್ದರೆ, ಬೇಡ ಅಂತ ಮಗು ತಡೆಯುತ್ತಿರುವ ಮನಕಲಕುವ ವಿಡಿಯೋವೊಂದು ಈಗ ವೈರಲ್ ಆಗಿದೆ.
ವಿಡಿಯೋದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು, ತಮ್ಮ ಕೆಲಸಕ್ಕೆ ಹೋಗುತ್ತಿರುವ ವೇಳೆ, ಅವರ ಕಾಲು ಹಿಡಿದು, ಹೋಗದಂತೆ ಮಗು ರಚ್ಚೆ ಹಿಡಿದಿದೆ. ಮಗನೇ ನಾನು ಕೆಲಸಕ್ಕೆ ಹೋಗಿ ಬರ್ತೀನಿ, ನಂಗೆ ಡ್ಯೂಟಿ ಇದೆ. ಹೋಗೋಕೆ ಬಿಡು ಅಂತ ಅಪ್ಪ, ಎಷ್ಟೇ ಕೇಳಿದ್ರೂ ಬಿಡದ ಮಗು, ಬಾಬಾ ಬಾಬಾ ಅಂತ ತಂದೆಯ ಕಾಲನ್ನ ಹಿಡಿದು ಅಳುತ್ತಲೇ ಇರುತ್ತೆ. ಕಡೆಗೆ ಆಯ್ತು ಹೋಗಲ್ಲ, ಅಂತ ತಂದೆ ಮಗುವನ್ನ ಎತ್ತಿ ಮಂಚದ ಮೇಲೆ ಕೂರಿಸಿದ್ರೂ, ಅವರನ್ನ ಬಿಡುವುದಿಲ್ಲ. ಸುಮಾರು 1 ನಿಮಿಷ 25 ಸೆಕೆಂಡ್​ನ ವಿಡಿಯೋ ಮನಕಲಕುವಂತಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನ ಒಡಿಶಾದಲ್ಲಿ ಐಜಿಪಿಯಾಗಿರುವ ಅರುಣ್ ಬೋತ್ರಾ ಕೂಡ ಶೇರ್ ಮಾಡಿದ್ದು, ಹೆಚ್ಚಿನ ಸಮಯ ಕರ್ತವ್ಯದಲ್ಲೇ ಕಳೆಯುವುದರಿಂದ ಪೊಲೀಸ್ ಅಧಿಕಾರಿಗಳು ಇಂಥಹ ಸಂದರ್ಭಗಳನ್ನೂ ಎದುರಿಸಬೇಕಾಗುತ್ತೆ ಅಂತ ಅವರು ಬರೆದಿದ್ದಾರೆ.
ಇದಕ್ಕೆ ಟ್ವಿಟಿಗರಿಂದಲೂ ಪ್ರತಿಕ್ರಿಯೆಗಳು ಬರುತ್ತಿದ್ದು, ಈ ಪುಟ್ಟ ಮಗುವಿಗಾಗಿ ನನ್ನ ಹೃದಯ ಮಿಡಿಯುತ್ತೆ. ಪ್ರತಿ ಪೊಲೀಸ್ ಸಿಬ್ಬಂದಿ ತನ್ನ ಕುಟುಂಬದ ಜವಾಬ್ದಾರಿಯನ್ನೂ ಹೊಂದಿರುತ್ತಾನೆ. ಅವರಿಗೆ ಯಾಕೆ ಕೆಲಸಕ್ಕೆ ನಿಗದಿತ ಸಮಯ ಇರುವುದಿಲ್ಲ? ಅಂತ ಒಬ್ಬರು ಪ್ರಶ್ನಿಸಿದ್ದಾರೆ. ಥ್ಯಾಂಕ್​ಲೆಸ್ ಜಾಬ್, ಸಲ್ಯೂಟ್ ಟು ಪೊಲೀಸ್ ಅಂತ ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

Comments are closed.