ಅಂತರಾಷ್ಟ್ರೀಯ

ಬ್ರಿಟಿಷ್ ಪೊಲೀಸರಿಂದ ವಿಕಿಲೀಕ್ಸ್​ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಬಂಧನ

Pinterest LinkedIn Tumblr


ಲಂಡನ್: ವಿಕಿಲೀಕ್ಸ್​ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರನ್ನು ಬ್ರಿಟಿಷ್ ಪೊಲೀಸರು ಇಂದು ಬಂಧಿಸಿದ್ದಾರೆ. 2012ರಿಂದ ಇಂಗ್ಲೆಂಡ್​ನಲ್ಲಿ ತಲೆಮರೆಸಿಕೊಂಡಿದ್ದ ಜೂಲಿಯನ್ ಅಸ್ಸಾಂಜೆ ಅವರನ್ನು ಇಂದು ಬಂಧಿಸಲಾಗಿದೆ.

47 ವರ್ಷದ ಜೂಲಿಯನ್ ಅಸ್ಸಾಂಜೆ ಅವರನ್ನು ಇಂದು ಈಕ್ವೆಡಾರ್​ ರಾಯಭಾರಿಗಳ ಮೂಲಕ ಮೆಟ್ರೋಪಾಲಿಟನ್ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ಈಕ್ವೆಡಾರಿಯನ್ ಸರ್ಕಾರ ಜೂಲಿಯನ್ ಅಸ್ಸಾಂಜೆ​ಗೆ ನೀಡಿದ್ದ ಆಶ್ರಯವನ್ನು ಹಿಂತೆಗೆದುಕೊಂಡಿರುವುದಾಗಿಯೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜೂಲಿಯನ್ ಅಸ್ಸಾಂಜೆ ಅಮೆರಿಕ ಸರ್ಕಾರದ ಅತ್ಯಂತ ಮಹತ್ವದ ದಾಖಲೆಗಳನ್ನು ತನ್ನ ವೆಬ್​ಸೈಟ್​ನಲ್ಲಿ ಲೀಕ್ ಮಾಡಿ ಅಮೆರಿಕಕ್ಕೆ ತಲೆನೋವಾಗಿದ್ದರು. 2012ರಿಂದ ಈಕ್ವೆಡಾರ್​ ರಾಯಭಾರ ಕಚೇರಿಯಲ್ಲಿಯೇ ಜೂಲಿಯನ್ ಅಸ್ಸಾಂಜೆ ಆಶ್ರಯ ಪಡೆದಿದ್ದರು. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ

Comments are closed.