ಅಂತರಾಷ್ಟ್ರೀಯ

ಫೇಸ್​ಬುಕ್​ ಲೈಕ್ಸ್​​ ಪಡೆದ ಜಗತ್ತಿನ ನಾಯಕರಲ್ಲಿ ಮೊದಲ ಸ್ಥಾನ ಪಡೆದ ಮೋದಿ!

Pinterest LinkedIn Tumblr


ನ್ಯೂಯಾಕ್​: ವಿಶ್ವದಾದ್ಯಂತ ಅಧಿಕ ಜನರನ್ನು ಒಳಗೊಂಡ ಫೇಸ್​ಬುಕ್​ ಜಾಲತಾಣದಲ್ಲೂ ಪ್ರಧಾನಿ ನರೇಂದ್ರ ಮೋದಿ ವಿಶ್ವದಲ್ಲೇ ಪ್ರಭಾವಶಾಲಿ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಮೋದಿ ಅವರ ವೈಯಕ್ತಿಕ ಫೇಸ್​ಬುಕ್​ ಖಾತೆಗೆ 43.5 ಮಿಲಿಯನ್​ ಲೈಕ್ಸ್​ ಹಾಗೂ ಅಧಿಕೃತ ಖಾತೆಗೆ 13.7 ಲೈಕ್ಸ್​ಗಳನ್ನು ಪಡೆಯುವ ಮೂಲಕ ಫೇಸ್​ಬುಕ್​ನಲ್ಲಿ ಅತಿಹೆಚ್ಚು ಲೈಕ್ಸ್​ ಪಡೆದ ಜಗತ್ತಿನ ಅಗ್ರಗಣ್ಯ ನಾಯಕರ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ.

ಗ್ಲೋಬಲ್​ ಕಮ್ಯುನಿಕೇಷನ್​ ಏಜೆನ್ಸಿ ಬಿಸಿಡಬ್ಲ್ಯೂ ನಡೆಸಿದ ‘ಟಿಪ್ಲೊಮೆಸಿ‘ ಅಧ್ಯಯನದ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರ ಫೇಸ್​​ಬುಕ್​ ಖಾತೆಯನ್ನು 43.5 (4 ಕೋಟಿ 35 ಲಕ್ಷ) ಮಿಲಿಯನ್​ ಜನರು ಲೈಕ್​ ಮಾಡಿದ್ದಾರೆ. ಅಧಿಕೃತ ಫೇಸ್​ಬುಕ್​ ಖಾತೆಯನ್ನು 13.7 (1 ಕೋಟಿ 37 ಲಕ್ಷ) ಮಂದಿ ಲೈಕ್ಸ್​ ಮಾಡಿದ್ದಾರೆ.

ಮೋದಿ ಅವರ ನಂತರ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಎರಡನೇ ಸ್ಥಾನದಲ್ಲಿ ಇದ್ದಾರೆ. ಇವರ ಖಾತೆಯನ್ನು 23 ಮಿಲಿಯನ್​ ಜನರು ಲೈಕ್​ ಮಾಡಿದ್ದಾರೆ. ಈ ಮೂಲಕ ಅಮೆರಿಕ ಅಧ್ಯಕ್ಷ ಟ್ರಂಪ್​ ವಿಶ್ವ ನಾಯಕರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

ಜೋರ್ಡನ್​ನ ರಾಣಿ ರಾನಿಯಾ ಫೇಸ್​ಬುಕ್​ನಲ್ಲಿ 3ನೇ ಸ್ಥಾನ ಪಡೆದಿದ್ದು, 16.9 ಮಿಲಿಯನ್​ ಜನರು ರಾನಿಯಾ ಅವರ ಫೇಸ್​ಬುಕ್​ ಖಾತೆಯನ್ನು ಲೈಕ್​ ಮಾಡಿದ್ದಾರೆ ಎಂದು ಅಧ್ಯಯನ ವರದಿ ತಿಳಿಸಿದೆ.

ಇತ್ತೀಚೆಗೆ ಬ್ರೆಜಿಲ್​ ದೇಶದ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ ಜಾಯರ್​ ಬೊಲ್ಸೊನಾರೋ ಫೇಸ್​ಬುಕ್​ ಪೇಜ್​​ನ್ನು ಸಕ್ರಿಯವಾಗಿ ಬಳಸುತ್ತಿರುವ ಕಾರಣ 145 ಮಿಲಿಯನ್​ ಜನರು ಇವರ ಖಾತೆಯಲ್ಲಿ ಸಂವಾದ ನಡೆಸಿದ್ದಾರೆ. ಟ್ರಂಪ್​ ಅವರ ಖಾತೆಯಲ್ಲಿ 84 ಮಿಲಿಯನ್​ ಜನರ ಸಂವಾದ ನಡೆಸಿದ್ದಾರೆ.

Comments are closed.