ಅಂತರಾಷ್ಟ್ರೀಯ

ಸ್ಯಾಮ್​ಸಂಗ್​​ ನಿಂದ 48 ಮೆಗಾಫಿಕ್ಸೆಲ್​ ರೊಟೇಟಿಂಗ್​ ಕ್ಯಾಮೆರಾ ಮೊಬೈಲ್​ ಫೋನ್​ ಪರಿಚಯ!

Pinterest LinkedIn Tumblr


ಸ್ಯಾಮ್​ಸಂಗ್​ ಕಂಪೆನಿ ಗ್ರಾಹಕರಿಗಾಗಿ ನೂತನ ತಂತ್ರಜ್ಞಾನದ ​ ‘ಗ್ಯಾಲಕ್ಸಿ ಏ80’ ಸ್ಮಾರ್ಟ್​ಫೋನ್​ವೊಂದನ್ನು​ ಪರಿಚಯಿಸಿದೆ. ವಿಶೇಷವೆಂದರೆ ಗ್ರಾಹಕರಿಗಾಗಿ ತಯಾರಿಸಿದ ವಿನೂತನ ಶೈಲಿಯ ಈ ಮೊಬೈಲ್​ನಲ್ಲಿ 48 ಮೆಗಾಫಿಕ್ಸೆಲ್​ ರೊಟೇಟಿಂಗ್​ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಸೆಲ್ಫೀಗೆ ಹೆಸರುವಾಸಿಯಾದ ಒಪ್ಪೋ ಮೊಬೈಲ್ ಈ​ ಹಿಂದೆ ಫೈಂಡ್​​​​ ಎಕ್ಸ್​​​​ ಸ್ಲೈಡಿಂಗ್​ ವಿನ್ಯಾಸವನ್ನು ಪರಿಚಯಿಸಿತ್ತು. ವಿವೋ ಕಂಪೆನಿ ಕೂಡ ಸ್ಲೈಡಿಂಗ್​ ಕ್ಯಾಮೆರಾ ಅಳವಡಿಸಿರುವ ಸ್ಮಾರ್ಟ್​ಫೋನ್ ಅನ್ನು​ ಮಾರುಕಟ್ಟೆಗೆ ಬಿಡುಗಡೆಮಾಡಿತ್ತು. ಆದರೆ ಸ್ಯಾಮ್​ಸಂಗ್​ ಕಂಪೆನಿ ಮಾತ್ರ ಹೊಸ ವಿನ್ಯಾಸದ ಮೂಲಕ ಸ್ಲೈಡಿಂಗ್​ ವಿನ್ಯಾಸ ಮತ್ತು ರೊಟೇಂಟಿಂಗ್​​ ಎರಡನ್ನೂ ಒಂದೇ ಮಾದರಿಯಲ್ಲಿ ಪರಿಚಯಿಸಿದೆ.

ಸ್ಯಾಮ್​ಸಂಗ್​ ಕಂಪೆನಿ ಪರಿಚಯಿಸಿದ ‘ಗ್ಯಾಲಕ್ಸಿ ಎ80’ ಮೊಬೈಲ್​ನಲ್ಲಿ ಮೂರು ಕ್ಯಾಮೆರಾವನ್ನು ಅಳವಡಿಸಲಾಗಿದೆ. ಸೆಲ್ಫೀ ಬೇಕೆಂದಾಗ ಸ್ಲೈಡಿಂಗ್​ ಮೇಲಕ್ಕೆ ಹೋಗಿ, ಹಿಂಬದಿಯ ಕ್ಯಾಮೆರಾ ಸೆಲ್ಫಿ ಕ್ಯಾಮೆರಾವಾಗಿ ಬದಲಾಗುತ್ತದೆ.

ಸ್ಯಾಮ್​ಸಂಗ್​ ಮೊಬೈಲ್​ ವೈಶಿಷ್ಯಗಳು:

ಕ್ಯಾಮೆರಾ: 48MP, 8MP ಸಹಿತ ತ್ರಿವಳಿ ಕ್ಯಾಮೆರಾ

ಡಿಸ್​​ಪ್ಲೇ: 6.7 ಇಂಚಿನ ಡಿಸ್​ಪ್ಲೇ

ಪ್ರೊಸೆಸರ್​: ಸ್ನಾಪ್​​ಡ್ರಾಗನ್​​ 730G ಪ್ರೊಸೆಸರ್​

RAM: 8GB RAM

ಸ್ಟೋರೆಜ್​​: 128GB

ಬ್ಯಾಟರಿ: 3,7000mA

ಅಂದಾಜು ಬೆಲೆ: 50,500 ರೂ.

Comments are closed.