ಅಂತರಾಷ್ಟ್ರೀಯ

ಮಗು ಮಾಡಿದ ಎಡವಟ್ಟಿನಿಂದ ಐಪ್ಯಾಡ್ ಅನ್​ಲಾಕ್​ ಆಗಲು 48 ವರ್ಷ ಬೇಕು!

Pinterest LinkedIn Tumblr


ಕೆಲವೊಮ್ಮೆ ನಮ್ಮ ಮೊಬೈಲ್​ ಪೋನಿನ ಪಾಸ್​ವರ್ಡ್​ ಮರೆತರೆ ಜಗತ್ತೇ ತಲೆಕೆಳಗಾದಂತೆ ಟೆನ್ಶ್ಯನ್​​​ಗೆ ಒಳಗಾಗುತ್ತೇವೆ. ಆದರೆ 10 ನಿಮಿಷ ಬಿಟ್ಟು ನೆನಪಿಸಿ ಫಾಸ್​ವರ್ಡ್​ ನಮೂದಿಸಿದರೆ ಮೊಬೈಲ್​ ಅನ್​ ಲಾಕ್​ ಆಗಿಬಿಡುತ್ತದೆ. ಹೀಗಿರುವಾಗ ಅಮೇರಿಕಾದ ಜರ್ನಲಿಸ್ಟ್​ವೊಬ್ಬರ ಐಪ್ಯಾಡ್​ ಲಾಕ್​ ಆಗಿದ್ದು, ಅನ್​ಲಾಕ್​ ಮಾಡಲು ಮುಂದಿನ 48 ವರ್ಷದ ಕಾಯಬೇಕಾದ ಪ್ರಸಂಗವೊಂದು ಬೆಳಕಿಗೆ ಬಂದಿದೆ.

ಹೌದು, ಅಮೇರಿಕಾದ ಇವನ್​ ಒಸ್ನೋಸ್​ ಎಂಬ ಜರ್ನಲಿಸ್ಟ್​ ತಮ್ಮ ಐಪ್ಯಾಡ್​ಗೆ ಲಾಕ್​ ಹಾಕಿದ್ದಾರೆ. ಮನೆಯಿಂದ ಹೊರಗೆ ತೆರಳುವಾಗ ಐಪ್ಯಾಡ್​ ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾರೆ. ಆದರೆ ಇವರ ಮೂರು ವರ್ಷದ ಮಗು ಆಟವಾಡುವ ಸಮಯದಲ್ಲಿ ಒಸ್ನೋಸ್​ ಅವರ ಐಪ್ಯಾಡ್​ ನೋಡಿ, ಅದರ ಲಾಕ್​ ಒಪನ್​ ಮಾಡಲು ಪ್ರಯತ್ನಿಸಿದೆ. ಪದೇ-ಪದೇ ರಾಂಗ್​ ಪಾಸ್​ವರ್ಡ್​ ಮೂಲಕ ಐಪ್ಯಾಡ್​ ಲಾಕ್​ ಒಪನ್​ ಮಾಡಲು ವಿಫಲವಾಗಿದೆ. ಇದೀಗ ಐಪ್ಯಾಟ್​ ಲಾಕ್​ ಆಗಿದ್ದು ಓಪನ್​ ಆಗಲು 25,536,442 ನಿಮಿಷದಷ್ಟು ಸಮಯವನ್ನು ಕೇಳುತ್ತಿದೆ.

ಲಾಕ್​ ಆಗಿರುವ ಐಪ್ಯಾಡ್​ ಕೇಳುವ ಸಮಯವನ್ನು ನೋಡಿ ಒಸ್ನೋಸ್​ ಬೆಚ್ಚಿಬಿದ್ದಿದ್ದಾರೆ. ತನ್ನ ಐಪ್ಯಾಡ್​ನ ಲಾಕ್​ ಓಪನ್​ ಮಾಡಲು ಬರೋಬ್ಬರಿ 48 ವರ್ಷ 59 ದಿನ ಕಾಯಬೇಕಾಗಿದೆ. ಈ ಕುರಿತು ನ್ಯೂಯಾರ್ಕ್​ ಡೈಲಿ ನ್ಯೂಸ್​ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಒಸ್ನೋಸ್​ ಐಪ್ಯಾಡ್​ ಲಾಕ್​ ಓಪನ್​ ಮಾಡಲು 2067 ರ ವರೆಗೆ ಕಾಯಬೇಕಾದ ಪ್ರಸಂಗ ಎದುರಾಗಿದೆ.

ಇನ್ನೂ ಲಾಕ್​ ಆಗಿರುವ ಐಪ್ಯಾಡ್​ ಕುರಿತು ಐಪ್ಯಾಡ್​ ಮೇಕರ್ಸ್​ ಸಲಹೆ ನೀಡಿದ್ದು, ಐಪ್ಯಾಡ್​ ರಿಸ್ಟೋರ್​ ಮಾಡುವ ಮೂಲಕ ಅನ್​ ಲಾಕ್​ ಮಾಡಬಹುದು ಎಂದು ಹೇಳಿದ್ದಾರೆ. ಆದರೆ ಐಪ್ಯಾಡ್​ನಲ್ಲಿ ಸ್ಟೋರ್​ ಆಗಿರುವ ಹಳೆಯ ಡಾಟಾ ಡಿಲೀಟ್​ ಆಗುತ್ತದೆ ಎಂದು ತಿಳಿಸಿದ್ದಾರೆ.
..

ಈ ವಿಚಿತ್ರ ಪ್ರಸಂಗವನ್ನು ಒಸ್ನೋಸ್​ ತನ್ನ ಟ್ಟಿಟ್ಟರ್​ನಲ್ಲಿ ಶೇರ್​ ಮಾಡಿದ್ದು, ನನ್ನ ಮಗ ರಾಂಗ್​ ಪಾಸ್​ವರ್ಡ್​ ಹಾಕಿದ್ದ ಪರಿಣಾಮ ಲಾಕ್​ ಆಗಿದೆ ಎಂದು ತಿಳಿಸಿದ್ದಾರೆ.

Comments are closed.