ಕರ್ನಾಟಕ

ಸುಮಲತಾಗೆ ಓಟು ಹಾಕಿದರೆ ಡೈಲಾಗ್ ಹೇಳುತ್ತೇನೆ: ದರ್ಶನ್

Pinterest LinkedIn Tumblr


ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಓಟು ಹಾಕಿದರೆ ಡೈಲಾಗ್ ಹೇಳುತ್ತೇನೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಪ್ರೀತಿಯ ಆಫರ್ ನೀಡಿದ್ದಾರೆ.
ಇಂದು ಕೆಆರ್ ನಗರದಲ್ಲಿ ಸುಮಲತಾ ಪರ ಪ್ರಚಾರ ನಡೆಸುತ್ತಿದ್ದ ದರ್ಶನ್ ಅವರಿಗೆ ಡೈಲಾಗ್ ಹೇಳಿ ಎಂದು ಕೆಲ ಅಭಿಮಾನಿಗಳು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ದರ್ಶನ್, ನೀನು ಡೈಲಾಗ್ ಅಂತಿಯಾ, ಎದುರಿಗೆ ಮಿಡಿಯಾ ಬೇರೆ ಇದೆ. ಅದು ಬೇರೆನೆ ಆಗುತ್ತೆ. ಸರಿ ನೀನು ಸುಮಲತಾಗೆ ಓಟು ಹಾಕ್ತಿನಿ ಅಂದ್ರೆ ನಾನು ಡೈಲಾಗ್ ಹೇಳ್ತಿನಿ ಎಂದರು. ಅಲ್ಲದೆ ಹೇ ಕ್ಯಾಡ್ಬರಿಸ್ ಆನೆ ನಡೆದಿದ್ದೆ ದಾರಿ…. ಬರ್ತಾ ಇದ್ದೀನಿ… ಎಂದು ಡೈಲಾಗ್ ಹೊಡೆದೇ ಬಿಟ್ಟರು…
ಇಷ್ಟೇ ಸಾಕಪ್ಪ, ಮುಂದೆ ಹೇಳಿದರೆ ಟಾಕ್ ವಾರ್ ಆರಂಭವಾಗುತ್ತೆ ಹೇಳೋಲ್ಲ ಎಂದು ದರ್ಶನ್ ಹೇಳಿದರು.
ಇದಕ್ಕು ಮುನ್ನ ಚಿಕ್ಕನಾಯಕನಹಳ್ಳಿಯಲ್ಲಿ ಅಬ್ಬರದ ಪ್ರಚಾರದ ನಡೆಸಿದ ದರ್ಶನ್, ಪ್ರತಿಯೊಬ್ಬರಿಗೂ ಸ್ವಾಭಿಮಾನ ಎಂಬುದು ಇರುತ್ತದೆ. ಮನೆಯಲ್ಲಿ ಸಾಕಿರುವ ಬೆಕ್ಕಿಗೂ ಸ್ವಾಭಿಮಾನ ಇದೆ. ಕೋಣೆಯಲ್ಲಿ ಕೂಡಿ ಹಾಕಿದರೆ ಅದು ಕತ್ತಿಗೆ ಬಾಯಿ ಹಾಕುತ್ತದೆ. ಅದೇ ರೀತಿ ಎಲ್ಲವನ್ನು ಸಹಿಸಿಕೊಳ್ಳೋಕೆ ಆಗೋಲ್ಲ ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.
ಪಶುಪತಿ ಗ್ರಾಮಕ್ಕೂ ಪ್ರವೇಶಿಸಿದ ದರ್ಶನ್​ ಅಲ್ಲಿನ ಮತದಾರರನ್ನು ಉದ್ದೇಶಿಸಿ ಮಾತನಾಡಿ, ಒಂದು ಜೋಡೆತ್ತು ಖರೀದಿಸಲು 1 ಲಕ್ಷ ರೂ. ಬೇಕು. ಹಾಲು ಕೊಡುವ ಹಸು ಕೊಳ್ಳಲು 80 ಸಾವಿರ ಆಗುತ್ತದೆ. ಒಂದು ಕುರಿ ಕೊಳ್ಳಲು 8 ಸಾವಿರ ರೂ. ಬೇಕಾಗುತ್ತದೆ. ಒಂದು ನಾಯಿ ತೆಗೆದುಕೊಳ್ಳಲು 5 ಸಾವಿರ ಬೇಕು. ಹೀಗಾಗಿ ಕೇವಲ 500 ರಿಂದ 2 ಸಾವಿರ ರೂಪಾಯಿಗೆ ಮಾರುಹೋಗಬೇಡಿ, ಸ್ವಾಭಿಮಾನಕ್ಕಾಗಿ ಹಣದ ವಿರುದ್ಧ ನಮ್ಮ ಹೋರಾಟ ಎಂದು ದರ್ಶನ್​ ತಿಳಿಸಿದರು.

Comments are closed.