ಅಂತರಾಷ್ಟ್ರೀಯ

ಪುಲ್ವಾಮಾ ದಾಳಿ ನಂತರ ಭಾರತ ತೆಗೆದುಕೊಂಡು ಕೆಲ ಕ್ರಮದಿಂದ ಪಾಕಿಸ್ತಾನದಲ್ಲಿ ಗಗನಕ್ಕೇರಿದ ದಿನಬಳಕೆ ವಸ್ತುಗಳ ಬೆಲೆ !

Pinterest LinkedIn Tumblr

ನವದೆಹಲಿ: ಪುಲ್ವಾಮಾ ದಾಳಿ ನಂತರ ಭಾರತ-ಪಾಕಿಸ್ತಾನದ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಸುಖಾಸುಮ್ಮನೆ ಭಾರತದ ತಂಟೆಗೆ ಬರುವ ಮೂಲಕ ಪಾಕ್​ ಭಾರೀ ಬೆಲೆ ತೆತ್ತಿದೆ. ಭಾರತ ತೆಗೆದುಕೊಂಡು ಕೆಲ ಕ್ರಮದಿಂದ ಪಾಕಿಸ್ತಾನದಲ್ಲಿ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಣದುಬ್ಬರದ ದರ ಕಳೆದ ನಾಲ್ಕು ವರ್ಷದಲ್ಲೇ ಅತ್ಯಧಿಕ ಮಟ್ಟ ತಲುಪಿದೆ.

ಪುಲ್ವಾಮಾ ದಾಳಿ ನಂತರದಲ್ಲಿ ಪಾಕಿಸ್ತಾನದ ಆರ್ಥಿಕತೆಗೆ ಭಾರತ ಹೊಡೆತ ನೀಡುವ ಕ್ರಮಕ್ಕೆ ಮುಂದಾಗಿತ್ತು. ಪಾಕ್​ನಿಂದ ಆಮದಾಗುವ ವಸ್ತುಗಳಿಗೆ ಶೇ.200 ತೆರಿಗೆ ವಿಧಿಸುವ ದಿಟ್ಟ ಕ್ರಮವನ್ನು ಭಾರತ ಸರ್ಕಾರ ತೆಗೆದುಕೊಂಡಿದೆ. ಅಷ್ಟೇ ಅಲ್ಲ, ಆಪ್ತ ದೇಶಗಳ ಸಾಲಿನಿಂದ ಪಾಕಿಸ್ತಾನವನ್ನು ಭಾರತ ಕೈ ಬಿಟ್ಟಿದೆ. ಇದರ ಪರಿಣಾಮ ಪಾಕಿಸ್ತಾನದ ಮೇಲೆ ಉಂಟಾಗಿದೆ.

ಫೆಬ್ರವರಿ ತಿಂಗಳಲ್ಲಿ ಪಾಕಿಸ್ತಾನದ ಹಣದುಬ್ಬರದ ದರ ಶೇ.8.2ಗೆ ಏರಿಕೆ ಆಗಿದೆ. 2014ರಲ್ಲಿ ಪಾಕ್​ ಈ ದರ ಶೇ.7.19ಕ್ಕೆ ಏರಿಕೆ ಆಗಿತ್ತು. ಇದಾದ ನಂತರ ಹಣ ದುಬ್ಬರ ನಿಯಂತ್ರಣದಲ್ಲಿತ್ತು. ಆದರೆ, ಈಗ ಭಾರತದ ದಿಟ್ಟ ಕ್ರಮದಿಂದ ಪಾಕ್​ ತತ್ತರಿಸಿದೆ. ಇನ್ನು ಪಾಕ್​ ಹಣದ ಮೌಲ್ಯ ಕೂಡ ಕಡಿಮೆ ಆಗಿದೆ. ಹಾಗಾಗಿ, ಆಮದು ಮಾಡಿಕೊಳ್ಳುವ ವಸ್ತುಗಳ ಬೆಲೆ ಏರಿಕೆ ಆಗಿದೆ.

ಪಾಕಿಸ್ತಾನದಲ್ಲಿ ಟೊಮೆಟೊ, ಶುಂಠಿ, ಸಕ್ಕರೆ, ಚಹ, ಕುರಿ ಮಾಂಸ, ತುಪ್ಪ, ಮೀನು, ಹೆಸರು ಬೇಳೆ, ಮೊಟ್ಟೆ, ಅಡುಗೆ ಎಣ್ಣೆ, ಅಕ್ಕಿ, ಬೇಳೆಕಾಳುಗಳು, ಹಾಳು ಹಾಗೂ ಗೋಧಿ ಬೆಲೆ ಶೇ.3.21-ಶೇ 179.40ರವರೆಗೆ ಏರಿಕೆ ಆಗಿದೆ. ರೂಪಾಯಿ ಮೌಲ್ಯ ಕುಸಿಯದಂತೆ ನೋಡಿಕೊಳ್ಳಲು ಪಾಕಿಸ್ತಾನ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ.

ಆಪ್ತ ರಾಷ್ಟ್ರಗಳ ಪಟ್ಟಿಯಿಂದ ಪಾಕ್​ ಔಟ್​:

ಆಪ್ತ ರಾಷ್ಟ್ರಗಳ ಪಟ್ಟಿಯಿಂದ ಪಾಕಿಸ್ತಾನವನ್ನು ಭಾರತ ಹೊರಗಿಟ್ಟಿದೆ. ಜೊತೆಗೆ ಆಮದು ಸುಂಕವನ್ನು ಶೇ.200ಕ್ಕೆ ಏರಿಕೆ ಮಾಡಲಾಗಿದೆ. ಇಷ್ಟೇ ಅಲ್ಲದೆ ಪಾಕಿಸ್ತಾನವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಲು ಭಾರತ ಮುಂದಾಗಿದೆ. ಸೌತ್​ ಏಷಿಯನ್​ ಫ್ರೀ ಟ್ರೇಡ್​ ಏರಿಯಾದಿಂದ ಪಾಕಿಸ್ತಾನವನ್ನು ಹೊರಗಿಡುವ ಪ್ರಯತ್ನಕ್ಕೆ ಭಾರತ ಮುಂದಾಗಿದೆ.

Comments are closed.