ರಾಷ್ಟ್ರೀಯ

ಬಿಜೆಪಿ ವೆಬ್​ಸೈಟ್​ ಹ್ಯಾಕ್ ಮಾಡಿದ​ ಕಿಡಿಗೇಡಿಗಳು; ಈ ಬಗ್ಗೆ ನಟಿ ರಮ್ಯಾ ಹೇಳಿದ್ದೇನು…?

Pinterest LinkedIn Tumblr

ನವದೆಹಲಿ: ಇನ್ನೇನು ಲೋಕಸಭೆ ಚುನಾವಣೆ ಹತ್ತಿರದಲ್ಲಿದೆ ಎನ್ನುವಾಗಲೇ ಭಾರತೀಯ ಜನತಾ ಪಕ್ಷ (ಬಿಜೆಪಿ) ವೆಬ್​ಸೈಟ್​ನನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ.ಬಿಜೆಪಿಯ ಅಧಿಕೃತ ವೆಬ್ ಪೇಜ್ www.bjp.org ಹ್ಯಾಕ್ ಆಗಿದ್ದು We will be come back soon! ​ ಎಂದು ತೋರಿಸಲಾಗುತ್ತಿದೆ.

ಮಂಗಳವಾರ ಬೆಳಿಗ್ಗೆ 11.30ರ ಸುಮಾರಿಗೆ ಹ್ಯಾಕರ್ಸ್ ಗಳು ಬಿಜೆಪಿ ಜಾಲತಾಣವನ್ನು ಹ್ಯಾಕ್ ಮಾಡಿದ್ದಾರೆ. ಆದರೆ ಇದುವರೆಗೆ ಈ ಸಂಬಂದ್ಝ ಪಕ್ಷದ ನಾಯಕರಾರೂ ದೂರು ಸಲ್ಲಿಸಿಲ್ಲ ಅಲ್ಲವೇಹೇಳಿಕೆಗಳನ್ನು ನೀಡಿಲ್ಲ.

ಆದರೆ ಬಿಜೆಪಿ ವೆಬ್ ತಾಣ ಹ್ಯಾಕ್ ಆಗಿರುವುದನ್ನು ಕಾಂಗ್ರೆಸ್ ಪಕ್ಷದ ಸಾಮಾಜಿಕ ತಾಣ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿ ಹೇಳಿಕೊಂಡಿದ್ದಾರೆ.

ಹ್ಯಾಕ್ ಆಗಿದ್ದ ವೇಳೆ ನರೇಂದ್ರ ಮೋದಿ ಹಾಗೂ ಜರ್ಮನಿ ಚಾನ್ಸಲರ್ ಮಾರ್ಕೆಲ್​ ಜತೆಯಾಗಿರುವ ಫೋಟೋ ಕಂಡುಬಂದಿದೆ.ಅಲ್ಲದೆ ಕೆಲ ಅವಹೇಳನಕಾರಿ ಬರಹ ಸಹ ಹಾಕಲಾಗಿದೆ.

“ಭಾಯಿಯೋ ಔರ್ ಬೆಹನೊ, ನೀವೀಗ ಬಿಜೆಪಿ ವೆಬ್​ಸೈಟ್ ನೋಡುತ್ತಿಲ್ಲವಾದರೆ ಮುಂದೆಂದೂ ಹೀಗೆ ನೋಡಲು ಸಾಧ್ಯವಾಗದಿರಬಹುದು” ರಮ್ಯಾ ಟ್ವೀಟ್ ಮಾಡಿಕೊಂಡಿದ್ದಾರೆ. ಬಿಜೆಪಿ ಜಾಲತಾಣ ಹ್ಯಾಕರ್ಸ್ ಗಳಿಂದ ಹ್ಯಾಕ್ ಆಗಿದ್ದ ಮಾಹಿತಿಯನ್ನು ರಮ್ಯಾ ಈ ರೀತಿ ಟ್ವೀಟ್ ನಲ್ಲಿ ಬಹಿರಂಗಪಡಿಸಿದ್ದಾರೆ.

ಇನ್ನು ಇದಾಗಲೇ ವಿಶೇಷ ಕಾರ್ಯತಂಡ ವೆಬ್ ತಾಣದ ಪುನರುತ್ಥಾನಕ್ಕೆ ಮುಂದಾಗಿದ್ದು ಇದೀಗ We will be come back soon! ಎಂಬ ಹೇಳಿಕೆ ಕಾಣಿಸುತ್ತಿದೆ.

Comments are closed.