ರಾಷ್ಟ್ರೀಯ

ಪುಲ್ವಾಮಾ ಉಗ್ರರ ದಾಳಿಯಿಂದಾಗಿ ಮುರಿದುಬಿದ್ದ ಭಾರತ-ಪಾಕ್ ಜೋಡಿಯ ವಿವಾಹ !

Pinterest LinkedIn Tumblr

ಬಾರ್ಮರ್: ಪುಲ್ವಾಮಾ ಉಗ್ರರ ದಾಳಿಯಿಂದ 40 ಸೈನಿಕರು ಹುತಾತ್ಮರಾದ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಜೋಡಿಗೆ ನಡೆಯಬೇಕಿದ್ದ ವಿವಾಹ ಮುರಿದು ಬಿದ್ದಿದೆ.

ಬಾರ್ಮರ್ ಗಡಿಭಾಗದ ಖಾಜೇದ್ ಕಾ ಪಾರ್ ಗ್ರಾಮದ ಮಹೇಂದ್ರ ಸಿಂಗ್ ಮತ್ತು ಸಿಂಧ್ ಭಾಗದ ಅಮರ್ ಕೋಟ್ ಜಿಲ್ಲೆಯ ಸಿನೋಯ್ ಗ್ರಾಮದ ಚಗನ್ ಕನ್ವಾರ್ ಜೊತೆ ವಿವಾಹವಾಗಬೇಕಿತ್ತು.

ಆದರೆ ಪಾಕಿಸ್ತಾನ ಮತ್ತು ಭಾರತದ ನಡುವೆ ಉದ್ವಿಗ್ನ ಪರಿಸ್ತಿತಿ ನಿರ್ಮಾಣದ ಹಿನ್ನೆಲೆಯಲ್ಲಿ ಇಬ್ಬರು ಮದುವೆ ರದ್ದು ಮಾಡಿದ್ದಾರೆ, ಪಾಕಿಸ್ತಾನದ ಲಾಹೋರ್ ನಿಂದ ಭಾರತದ ಅತ್ತರಿಗೆ ರೈಲು ಸಂಚಾರ ನಡೆಯಬೇಕಿತ್ತು, ಸೋಮವಾರ ಮತ್ತು ಗುರುವಾರ ರೈಲು ಸಂಚರಿಸುತ್ತದೆ.

ಆದರೆ ವೀಸಾ ಪಡೆಯಲು ತುಂಬಾ ಕಷ್ಟವಾಯಿತು. ಪಾಕಿಸ್ತಾನದ ವೀಸಾ ಪಡೆಯಲು ಗಜೇಂದ್ರ ಸಿಂಗ್ ಅವರ ಜೊತೆ ಮಾತನಾಡಿದೆ, ಆದರೆ ಕೇವಲ 5 ಮಂದಿಗೆ ಮಾತ್ರ ವೀಸಾ ಸಿಗುವುದಾಗಿ ಹೇಳಿದರು. ಈಗಾಗಲೇ ನಾವು ಎಲ್ಲಾ ಸಂಬಂಧಿಕರಿಗೆ ಆಹ್ವಾನ ಪತ್ರಿಕೆ ನೀಡಲಾಗಿತ್ತು.

Comments are closed.